ಭಾನುವಾರ, ಮೇ 5, 2019

992. ಮುಗಿಯದ ಪಯಣ

ಮುಗಿಯದ ಪಯಣ

ಸಾಗಿಹುದು ಬಸ್ಸಿನಂತೆ ನಮ್ಮ ಬಾಳ ಪಯಣ,
ಮನಸಿನ ಭಾವಗಳ ಮುಗಿಯದ ಯಾನ!
ಸಮರೋಪಾದಿಯಲಿ ಬದುಕಿಗಾಗಿ ಗುದ್ದಾಟ!
ಹೋದೆಡೆ ಬಂದೆಡೆ ನ್ಯಾಯಕ್ಕಾಗಿ ಹೋರಾಟ!

ಕಲಿಯಲು ಬೇಕು ಬಾಳಲಿ ಪ್ರತಿಕ್ಷಣ!
ಕಲಿಯುಗವಾಗಿದೆ ಕಾಲವೇ ಈ ದಿನ!
ಕಂದಕ ಸೃಷ್ಟಿಸಿ ಬಾಳ್ವೆಯು ಸಾಧ್ಯವೇ?
ಕಂದರು ನಾವು ಸಂತಸದಿ ದಿನ ಕಳೆಯ ಬೇಡವೇ?

ಮಂದಿಯೊಳಗಾವು ಯಾವುದು ಲೆಕ್ಕ?
ಬದುಕಲಿ ಬೇಡವೆ ಯೋಜನೆ ಪಕ್ಕ?
ಸಮರದಿ ಕಳೆವುದು ಏನದು ಚಂದ?
ಅನುಭವಿಸಲು ಬಾರದೆ ದಿನಮಣಿಗಳ ಅಂದ?

ನಾನು ನನ್ನದು ಎನಲು ತಂದಿರುವುದೇನು?
ಬೇಕು ಬೇಕೆನುತ ಕೂಡಿ ಕೊಂಡ್ಹೋಗುವುದೇನು!
ಉತ್ತಮ ಕಾರ್ಯ, ಹೃದಯದ ಪ್ರೀತಿ!
ಸಮಾಜ ಸೇವೆ, ಗಳಿಸಿದ ನೀತಿ!!

@ಪ್ರೇಮ್@
06.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ