ಮನಕೆ
ಬಂಧನ ಕಳಚಿ ಹೊರ ಬಾ ಮನವೆ
ನಿಲ್ಲದಿರೆಂದೂ ಒಂದೇ ಕೋಣೆಯೊಳಗೆ..
ಮೌನವ ಮುರಿದು, ಹಲವರಿಗಾಗಿ
ಸಮಾಜ ಸೇವೆಗೆ ತನ್ನೆ ಮುಡಿಪಾಗಿಸಿ
ಹಳದಿಯ ಪುಷ್ಪದ ಹಾಗಾಕರ್ಷಿಸಿ
ಗಂಟೆಗೂ ನಿಮಿಷಕೂ ವ್ಯತ್ಯಾಸ ಹುಡುಕಿ//
ಆಲೋಚನೆಗಳ ಮಟ್ಟವ ಹೆಚ್ಚಿಸಿ
ಪರೋಪಕಾರದ ಗುಣವನು ನಿರ್ಮಿಸಿ
ಇತರರಿಗನ್ಯಾಯವ ಮಾಡದೆ ನಡೆದು
ನಾಲ್ಕು ದಿನದ ಜೀವನ ಪಾವನಗೊಳಿಸಿ..//
ಬುದ್ಧಿಯ ಕಲಿಯುತ, ವಿದ್ಯೆಗೆ ಬೆಲೆ ಕೊಡು,
ನಿದ್ದೆಯ ಬಿಸುಟು ಸಾಧನೆಗೆ ಗಮನ ಕೊಡು,
ವರ್ಷದ ಕೆಲಸವ ದೂಡುತ ನಡೆಯದೆ,
ನಾಳೆಗೆ ದೂಡದೆ ಇಂದೇ ದುಡಿಯುತ//
ಕೃತಜ್ಞತೆಯಿರಲಿ ಪಡೆದ ಸಹಾಯಕೆ
ಧನ್ಯವಾದವ ಸಲಿಸುವ ಹೃದಯವೂ ಇರಲಿ
ಮನದಲಿ ಉಸಿರಲಿ ಒಳಿತನೆ ಬಯಸಲಿ,
ಮನೆಗೂ ನಾಡಿಗೂ ಕೀರ್ತಿಯ ತರಲಿ//
@ಪ್ರೇಮ್@
03.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ