ಶುಕ್ರವಾರ, ಮೇ 31, 2019

1031. ಸಹಾಯವಿರಲಿ ಸರ್ವರಿಗೆ

ಸಹಾಯವಿರಲಿ ಸರ್ವರರಲಿ..

ಓ ಭಾರತ ಮಾತೆಯೇ ನೀನು
ಜನನವ ನೀಡಿಹೆ ನಮಗೆ
ಉದರದಿ ಇಳಿಸುತ ನಮ್ಮ
ಸಲಹುತಲಿರುವೆ ನಿರಂತರ//

ನಿನ್ನಯ ಕಂದರು ನಾವು
ಕೋಪವ ತೋರುತ ಬೆಳೆದು
ಪರಸ್ಪರ ಜಗಳದಿ  ಕಳೆದು
ನಿನ್ನಯ ಹೆಸರನೆ ನೆನೆಯಲು ಮರೆತು..

ಕೃತಜ್ಞತೆ ಎಂಬುದ ತೊರೆದು
ಮನೆ ಮನ ಬೆಳಗುವ ಬದಲಿ,
ಕದನದಿ ಬಾಳನು ಕಳೆಯುತಲಿ
ಸಿಡುಕಿನ ಮಾತನು ಅರುಹುತಲಿ..

ಚಾಡಿಯ ಮಾತನು ಹೇಳುತಲಿ
ಆಚೀಚೆ ಪರಸ್ಪರರಲಿ ತಂದಿಡುತಲಿ
ಬೆಳೆವವರ ಚಿಗುರನು ಚಿವುಟುತಲಿ
ಬದುಕೋದು ಸರಿಯೇ ಮತ್ಸರದಲಿ....

ಯಾಕೀ ಮನುಜರ ಮನಗಳ ಕಾಟ
ಪ್ರಾಣಿ ಪಕ್ಷಿಗಳೂ ಹಂಚಿಕೊಳುವವು ಊಟ!
ಮನುಜನೆಂದರೆ ಹೊಟ್ಟೆಕಿಚ್ಚಿನ ಕೂಪ
ನರರಾಕ್ಷಸ ಮಾಡುತಿರುವನು ನಿರತವೂ  ಪಾಪ!
 
ಪ್ರಕೃತಿ ಕೊಡದಿಹಳೇ ಅವಗೆ ಶಾಪ,
ಭಾರತಾಂಬೆಗೇ ಉಣಿಸುವ ವಿಷವ ಬೇಕೂಫ!
ತಾ ಸತ್ತರೂ ಇತರರ ಬದುಕ ಬಿಡ!
ತಾ ಎಸೆದರೂ ಇತರರಿಗೆ ಬಳಸೆ ಕೊಡ!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ