ನಾಳೆಯೊಂದಿರಲಿ ಬಾಳಿನಲಿ
ಇಂದಿನ ತಾಸು ಬದುಕಲಿ ಸಂದಿದೆ
ನಾಳೆಯೊಂದಿರಲಿ ಬಾಳಿನಲಿ..
ಮುಂದಿನ ಗುರಿಯು ಮನದಲಿ ಬಂದು
ದುಡಿತವು ಇರಲಿ ಸಾಲಿನಲಿ..
ಕೆಲಸಕೆ ಬೇಡವು ಇಲ್ಲದ ವ್ಯಾಜ್ಯ
ದಹನವೆ ಆಗಲಿ ಸೋಮಾರಿತನ,
ಮನೆಮನ ನೆಮ್ಮದಿಯಿಂದಲಿ ಬೆಳಗಲಿ,
ದೂರವೇ ಓಡಿಸಲಿ ಮತ್ಸರವನ್ನ..
ವಸಂತ ಕಳೆದರೂ ಕಾರ್ಯವು ವ್ಯಯಿಸದು
ಕಾಯಕ ಬಾಳಲಿ ಕಲಿಸುವುದು.
ಕರಗಳು ಭರದಲಿ ಚಲಿಸುತಲಿರಲು
ಹೊಟ್ಟೆಯ ಉಪವಾಸ ಓಡುವುದು..
ದುಡಿಯದೆ ಉಣ್ಣುತ ಕುಳಿತರೆ ನೀನು
ಪಡೆಯದೆ ಇರುವೆಯಾ ತೂಕವನು?
ಕೊಬ್ಬದು ತಾನು ಜಾಗವ ಮಾಡಿ
ಮನೆಯನು ಕಟ್ಟಿ ಕೂರುವುದು!
ಚಿಂತೆಯ ಮಾಡದೆ ನಾಳಿನ ಬಾಳಿಗೆ
ಕಾಯಕ ದಾರಿಯ ತೋರುವುದು.
ನಾಳಿನ ಮಳಿಗೆಗೆ ಒಂದೊಂದೆ ಇಟ್ಟಿಗೆ
ಇಂದೆ ಜೋಡಿಸುತ ಹೋಗುವುದು...
ಕೈ ಕೆಸರಾದರೆ ಬಾಯ್ ಮೊಸರೆನ್ನುತ
ಬಸವಣ್ಣನನು ನೆನೆಯುವುದು!
ಬದುಕಲಿ ಗುರಿಯನು ಹೊಂದುತ ತಾನು
ಗುರಿ ಮುಟ್ಟುವ ಕಡೆಗೆ ನಡೆಯುವುದು!
@ಪ್ರೇಮ್@
14.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ