ಸೋಜಿಗ ನೋಡಲ್ಲಿ
ಗಗನದ ವದನವು ಶಿವನನು ಆವರಿಸಿದೆ
ಸೋಜಿಗ ನೋಡಲು ಬಾರೋ ಸಖ..
ಮಂದಿರ ಸುತ್ತಲು ಹೊಮ್ಮುತ ಮೆರೆದಿದೆ
ಕೆಂಪನೆ ಬೆಳಕದು ನೋಡೋ ಸಖ//
ಆ ಸವಿ ಗಳಿಗೆಯ ಸ್ಮರಣದಿ ಇರಿಸಲು
ಚಿತ್ರವ ತೆಗೆಯಲು ಹೊರಟಿಹೆ ನಾನು..
ಬೆಳ್ಳನೆ ದಿರಿಸನು ಧರಿಸಿದ ನೀನು
ದೂರವೆ ನಿಂತಿಹೆ ಏಕೆ ಸಖ....
ಈಶನ ಪ್ರಭೆಯದು ನಮ್ಮಯ ಮೇಲೆ,
ಭಾನಿನ ಬೆಳಕದು ಈಶನ ಮೇಲೆ...
ಗುಂಪಲಿ ಬಂದು ನೋಡುತ ಮೆರೆದು
ನಿನ್ನನು ಕರೆದಿಹೆ ನನ್ನ ಸಖ...
ಬೇಸರವೇಕೋ..ಸುಮ್ಮನೆ ನಡೆದಿಹೆ
ದೇವನ ಲೀಲೆಯು ಕೌತುಕ ತಾರದೇ..
ನಡೆಯುತಲಿರುವೆ, ನೋಡಲು ಬಾರದೆ
ಸನಿಹಕೆ ಬಾರೋ ಹೃದಯ ಸಖ..
ನೇಸರ ಜೊತೆಗಿಹ ನಮ್ಮನು ಕಾಯುವ
ದೇವನ ಮೇಲೂ ಪ್ರಭಾವ ಬೀರುವ,
ಹೊನ್ನಿನ ಬಣ್ಣದ ಕಿರಣವ ಬೀರುತ
ಜಗವನೆಲ್ಲ ಕಾಯುವ, ಚಿಂತಿಸದೆ ನೀ ಇತ್ತ ಬಾರೋ ಸಖ...
@ಪ್ರೇಮ್@
16.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ