ಭಾನುವಾರ, ಮೇ 12, 2019

1009. ಬಲ್ಲೆಯಾ ನನ್ನ?

ಬಲ್ಲೆಯಾ ನನ್ನ?

ನಿನ್ನ ಮನೆಯೊಳು ನನ್ನ ಮನೆಯಿಹುದು
ನನ್ನ ಆಹಾರವು ನಿನ್ನೊಳಿಹುದು!
ನಿನ್ನನವಲಂಬಿಸಿ ನನ್ನ ಬದುಕು ಸಾಗಿಹುದು!
ನಿನ್ನ ಮನೆಯ ಗೋಡೆ ಸಂಧಿಯೂ ನನ್ನದಾಗಿಹುದು!

ಎಂಟು ಕಾಲಿನ ಜೇಡ ನಾನು!
ಕೀಟಗಳಲಿ ವಿಶೇಷವಾದವನು!
ನಿನ್ನಂತರಾಳವ ತಿಳಿಯದವನು!
ನೀ ಕೊಲ್ಲದಿದ್ದರೆ ಬದುಕುವವನು!

ನಿನ್ನ ಕೀಟಗಳಿಂದ ರಕ್ಷಿಪೆ ನಾನು!
ನನ್ನಂಟೇ ನನಗೆ ಸಹಾಯ ಆಹಾರಕೆ!
ನನ್ನ ಮನೆಯ ನಾನೇ ಕಟ್ಟುವೆ ಸೇತುವೆಯಾಗಿ!
ಅಲ್ಲಿ ಕಾಯುತಲಿರುವೆ ಬರುವ ಆಹಾರ ಕೀಟಕಾಗಿ!

ಬಲೆಯನು ನನ್ನಂತೆ ನೀ ಹೆಣೆಯಬಲ್ಲೆಯಾ?
ಅಲ್ಪ ಜೀವಿ ನಾನು ನೀ ನೋಡಬಲ್ಲೆಯಾ?
ನಿನ್ನ ಗೋಡೆಯಲೆ ನನ್ನ ಸಂಸಾರ ಸಾಗಿದೆ!
ನಿನಗಿಂತಲೂ ಆನಂದ ಮನೆಯಲಿ ನಮಗಿದೆ!

ಪುಟ್ಟದಾದರೂ ಛಲ ಬಿಡದೆ ದುಡಿವೆ,
ಮಾನವ ನನ್ನ ಬುದ್ಧಿಯ ನೀ ಯಾವಾಗ ಕಲಿವೆ?
@ಪ್ರೇಮ್@
13.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ