ಕಾಲ ನಿಲ್ಲುವುದೇ?
ತೆಕ್ಕೆಯೊಳು ಅವಿತು ಕೂತು,
ಸಕ್ಕೆನೆಂದರೂ ಯಾರಿಗೂ ಸಿಗದೆ,
ಸಮಯವ ಉಳಿಸಲಾರೆ ನೀ..ಮನವೇ...
ಸಮಯವ ಗಳಿಸಲಾರೆ ನೀ...
ಕಾಲನ ಕರೆಗೆ ನಾವೆಲ್ಲ
ಓ ಗೊಟ್ಟು ಓಡಲೇ ಬೇಕಲ್ಲವೇ?
ಮೌನದಲಿ ಕುಳಿತರೂನೂ ಸಮಯ
ಮುಂದೆ ಓಡುತಲೇ ಇರುವುದಲ್ಲವೇ?
ಬರುವಾಗ ಏನನ್ನೂ ತರಲಿಲ್ಲ ನಾವು...
ಹೋಗುವಾಗ ಸ್ವಲ್ಪವಾದ್ರೂ ಕೊಡಬೇಕು ನಾವು..
ಅದಕೇ ಪ್ರಯತ್ನ ಬೇಕಲ್ಲವೇ?
ದುಡಿಯದೆ ಸಾಧನೆ ಸಾಧ್ಯವೇ?
ಕಾಲವೆಂದೂ ನಮಗಾಗಿ ನಿಂತು ಕಾಯದು,
ಸಾಧನೆಯು ಸಾಧಕನ ಹಿಂದೆ ಓಡುವುದು..
ಕಷ್ಟಪಟ್ಟು ದುಡಿಯಲು ಕಲಿತರೆ
ಕಷ್ಟ ನಮ್ಮ ಬಿಟ್ಟು ಓಡುವುದು...
ಸಂತಸವು ಓಡಿ ಬರುವುದು..
@ಪ್ರೇಮ್@
16.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ