ಕವಲು ದಾರಿ
ಬದುಕಿನಲಿ ಸಹಜ ಕವಲೊಡೆವ ದಾರಿಯದು
ತದುಕುತಲಿ ಆರಿಸಲು ಮುಖ್ಯವಾದುದನೊಂದು
ಎದೆ ತಟ್ಟಿ ಹೇಳುವಂತಿರಬೇಕು ನಾ ಸರಿಯೆಂದು
ಸದಾ ಆರಿಸುವಂತಿರಬೇಕು ಅಂಥ ಹಾದಿಯಲಿ..
ವಿದುರನಾದರೇನು, ವಿಧವೆಯಾದರೇನು
ತಾನೊಂಟಿಯೆಂದು ಕೊರಗದೆ ಕೂಡದೆ
ದೇವ ತೋರಿದ ಕವಲ ದಾರಿಯಲಿ ಚಲಿಸಿದೊಡೆ
ಪದಗಳಾಟದಂತೆ ಬದುಕು ಸಾಗುವುದು ಸುಖದಿ..
ವದನದಲಿರಲಿ ಮಾಸದ ನಗುವಿನಲೆಯು
ಸದಾ ಕಾಡದಿರಲಿ ಹಿಂದಿನ ಕಹಿ ನೆನಪುಗಳು
ದಾರಿ ಯಾವುದಾದರೇನು ಮನೋಬಲವು ಚಲಿಸದು!
ನಾನು ನಾನಾಗಿರಲು ಹಾದಿ ಬೀದಿ ತಡೆಯಲಾರವು..
ಮನದ ಹಾದಿಯ ಲೆಕ್ಕ ನಮ್ಮದೇ ಕೈಲಿರಲು
ದೇಹಾಯಾಸವ ಸರಿಪಡಿಸಿ ಕಾರ್ಯಕೆ ಮುನ್ನುಗ್ಗುತಲಿರಲು
ಸರಳ ಜೀವನ ತತ್ವ ಪಾಲಿಸುತಲಿ ಆನಂದದಿಂದಿರಲು
ಮನುಜ ಮನುಜರ ನಡುವೆ ಪ್ರೀತಿಯಿರಲು
ದಾರಿ ನೇರವಾಗಿರುವುದು, ಕವಲನಾರಿಸಿದರೂ
ಹೊಸ ಲೋಕ ತೆರೆವುದು ಕಷ್ಟ ಪಟ್ಟು ನಡೆಯಲು
ಎಲ್ಲಾದರೂ ಹೇಗಾದರೂ ನಿನಗಾಗಿ ಚಲಿಸು!
ಇತರರ ಚಿಂತೆ ಬೇಡ, ನಿನ್ನ ದಾರಿ ನಿನಗೆ!
@ಪ್ರೇಮ್@
31.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ