ಮಂಗಳವಾರ, ಜುಲೈ 9, 2019

1098. ಕಪ್ಪೆ(ಶಿಶುಗೀತೆ)

ಕಪ್ಪೆ (ಮಕ್ಕಳ ಕವನ)

ವಟರ್ ವಟರೆಂದು ಕೂಗುತ ಮಳೆಯಲಿ
ನೀನೂ ಮಲಗದೆ ನನ್ನೂ ಬಿಡದೆ,
ನೀರಿಗೂ ಭೂಮಿಗೂ ಕುಪ್ಪಳಿಸುತ್ತಾ
ಓಡುವೆ ಎಲ್ಲಿಗೆ ಕಪ್ಪೆರಾಯನೆ?

ನೀರಲಿ ಮೊಟ್ಟೆಯ ಗುಂಪನೆ ಇಡುವೆ,
ಮೊಟ್ಟೆಯು ಒಡೆದು ಮೀನಾಗಿ ಬರುವೆ,
ಮೀನಿನ ಬಾಲವ ತುಂಡಾಗಿ ಬಿದ್ದು,
ಕಪ್ಪೆಯ ರೂಪದಿ ಕುಪ್ಪಳಿಸುತಲಿರುವೆ..

ಮಳೆ ಬರಲದು ನಿನಗೆ ಸಂತಸ ಸಂಭ್ರಮ,
ರಾತ್ರಿಯ ವೇಳೆ ಕೂಗುತ ಪಾರ್ಟಿಯು!
ಏನನು ತಿನ್ನುವೆ ನೀರನು ಕುಡಿದು?
ಬೇಸಿಗೆಯಲಿ ನೀ ಎಲ್ಲಿಗೆ ಹೋಗುವೆ?

ಮಳೆ ಬಂದರೆ ಅದು ನೀ ಹೇಗೆ ತಿಳಿಯುವೆ?
ಆಗಲೆ ನಿನ್ನಯ ದನಿಗೇನು ಕೊಡುವೆ?
ಗಂಟಲು ನಿನ್ನದು ಚಿಕ್ಕದು, ಒಡೆಯದೆ?
ಅಷ್ಟೊಂದು ಶಬ್ದವ ಎಲ್ಲಿಂದ ಪಡೆಯುವೆ?

ಅಣ್ಣನೆ ನಿನ್ನಯ ಬಣ್ಣವ ಕಾಣೆನು,
ಉದ್ದದ ನಾಲಗೆ ಕೀಟವ ಹಿಡಿಯಲು!
ಹಾಡನು ಹಾಡಲು ಬರದು ನಿನಗೆ,
ಗೊರಗೊರ ಶಬ್ದದಿ ಕಿರಿಕಿರಿ ನನಗೆ!
@ಪ್ರೇಮ್@
07.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ