ಬದುಕು ಕೂಡಾ ನಾಟ್ಯವೇ..
ಹೆಮ್ಮೆಯಿರುವ ದಿನದ ಕ್ಷಣವು
ಹೆಜ್ಜೆ ಗುರುತ ಮೆರೆಯೊ ಜಗವು..
ಗೆಜ್ಜೆ ಕಟ್ಟಿ ಕುಣಿವ ಬದುಕು
ಸಜ್ಜುಗೊಂಡು ಬೆಳಗಲಿ...
ನೃತ್ಯವೊಂದು ಮನವ ತಣಿಸೋ
ಕಲೆಗಳಲ್ಲಿ ಶ್ರೇಷ್ಠವೆಂಬ
ವಿದ್ಯೆಯದು ಅಲ್ಲವೇ?
ಕಲಿಕೆ ಸದಾ ಬೇಕಲ್ಲವೇ..
ಮನವ ತಣಿಸೆ ಸಾಧ್ಯವೇ?
ತನಗೆ ತಾನೆ ನಿತ್ಯ ಕಲಿತು,
ಬಯಸಿದವಗೆ ಅದನು ಕಲಿಸಿ
ಬದುಕೊ ಜೀವ ಹಿರಿಯದು!
ಬಾಳು ಪರರ ಸಂತೋಷಕೆ..
ಇಲ್ಲ 'ತಾನೆ 'ಎಂಬ ಬಿಮ್ಮು,
ಕಲಿತು ಕಲಿತು ಕಲಿಸೆ ಹಿತವು,
ಅರಿವ ಬೆಳಕು ಚೆಲ್ಲುತ,
ಪರರ ಖುಷಿಗೆ ಶ್ರಮಿಸುತ..
ಬದುಕೆ ಒಂದು ನಾಟ್ಯರಂಗ
ವೇಷ ಹಾಕಿ ನೃತ್ಯ ಮುಗಿಯೆ
ವೇಷ ಕಳಚೋ ಬಾಳುವೆ!
ಸೂತ್ರದಾರಿ ವಿಷ್ಣುವೇ..
@ಪ್ರೇಮ್@
29.06.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ