ಮಂಗಳವಾರ, ಜುಲೈ 9, 2019

1107. ಬೆಳಕು

ಬೆಳಕು

ಬಾಳ ಬಯಲಿನಲ್ಲಿ ಓದು ಕೆಲಸ ಮದುವೆ ಮಗುವು
ನನ್ನ ಬಾಳಿನಲ್ಲಿ ದೀಪದಂಥ ಮಗಳ ಉದಯವು
ನಲಿವು ನೋವು ಎಲ್ಲ ಅವಳ ಆಟಪಾಠವು
ನಯನವೆರಡು ಸಾಲದಾಯ್ತು ಅವಳಾಟ ನೋಟವು..

ಮನೆಯ ಮೊದಲ ಪಾಠಶಾಲೆ
ನಾನೆ ಮೊದಲ ಗುರುವು ಅವಳಿಗೆ
ಹೆಣ್ಣು ಮಗುವೆಂದು ಹೀಗಳೆಯದೇನೆ
ನನ್ನಂತೆ ಹೆಣ್ಣಿರಲೆಂದೆ ಬಯಸಿದೆ..

ಬಯಸಿದಂತೆ ಭಾಗ್ಯಲಕ್ಷ್ಮಿ ಬಂದಳೆನ್ನ ಬಾಳಿಗೆ
ದಿಯಾ ಉದಯ ಎಂದು ಕರೆದೆ
ಬೆಳಗುತಿರಲಿ ಬದುಕಿಗೆ..

ಮನದ ಪಾಠ ತಿಳಿಯ ಹೇಳಿ
ಬೆಳೆಸುತಿರುವೆ ಬಾಳ ನಾಳೆಗೆ
ಬಯಸಿದಂತೆ ಸಿಗದು ಬದುಕು
ಜಗವು ಕ್ರೂರ ಹೆಣ್ಣ ಬಾಳಿಗೆ!

ಪರ ಪುರುಷ ಕೆಲವು ಮಾತ್ರವಲ್ಲ,
ಹಲ ನಾರಿಯರೂ ಕ್ರೂರಿಗಳೇ,
ಸಹಿಸರವರು ನಮ್ಮೇಳಿಗೆಯನು
ಅತ್ತೆ,ನಾದಿನಿ,ಗೆಳತಿ, ಅತ್ತಿಗೆಯೆನುತ..

ಬದುಕಲಾಗದು ನೆಮ್ಮದಿಯಿಂದ
ಕಷ್ಟವನು ಎದುರಿಸಲೇಬೇಕು
ಸಹಿಸಿ ಕಷ್ಟದ ಬಾಳ,ಕೊಡುತ ಸುಖವ ಪರರಿಗೆ
ಇದುವ ಮೊದಲ ಪಾಠವು..
@ಪ್ರೇಮ್@
05.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ