ಕತ್ತಲು ಕಳೆವುದು
ಮೌನದ ಕಡಲೊಳು ನಾಟ್ಯವನಾಡುತ
ಬಿಮ್ಮನೆ ಗೂಡಲಿ ಸೇರುತ ನಲಿಯುತ..
ಕತ್ತಲು ಜೀವಿಯ ಬಾಳಲಿ ಶಾಶ್ವತ
ಅಲ್ಲವು, ಭೂಮಿಯು ಇರುವುದು ತಿರುಗುತ...
ಇಂದಿ ದಿನವದು ನಿನ್ನದು ಸೂರ್ಯನೆ
ರಾತ್ರಿಯು ಬರಲಿದೆ ಚಂದ್ರನಿಗಾಗಿ,
ಕತ್ತಲೆ ನಿಲ್ಲದು ಬಾಳಲಿ ಎಂದೂ
ಬಂದೇ ಬರುವುದು ಹಗಲೂ ಮುಂದು...
ನಾಯಿಯ ಪಾಡದು ಬರುವುದು ಬಾಳಲಿ,
ಮುಂದೆ ಬರಲಿಹುದು ರಾಜನ ಸಿರಿತನ,
ಬಡತನ ಸಿರಿತನ ಶಾಶ್ವತವಲ್ಲವು
ಮೆರೆಯಲು ಎಲ್ಲವು ದಿನಗಳೆ ಅಲ್ಲವು..
ಇಂದಿನ ಸಿರಿತನ ನಾಳೆಗೂ ಇರುವುದೆ,
ಉತ್ತಮ ಗುಣವದು ಸಿಂಗಾರ ಬಾಳಿಗೆ,
ಬೆಳಕದು ಬಂದೇ ಬರುವುದು ಬಾಳಲಿ,
ಅಹಂಕಾರ ಕರಗುವುದು ಮಂಜಿನ ಹಾಗೆ..
ಮೋಜಿನ ಜೀವನ ಒಮ್ಮೆಗೆ ಮಾತ್ರವು,
ಸೂರ್ಯ ಭೂಮಿಗೆ ರಜೆಯುಂಟೇನು?
ಕತ್ತಲು ಬೆಳಕಿನ ಆಟವು ಬದುಕಲಿ,
ಹಗಲು ರಾತ್ರಿಯ ಸುಖ ದುಃಖದ ಜೊತೆಯಲಿ..
@ಪ್ರೇಮ್@
07.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ