ಮಂಗಳವಾರ, ಜುಲೈ 9, 2019

1112. ಬಾಳುವೆ ಬಾಳಲಿ

ಬಾಳುವೆ ಬಾಳಲಿ..

ಬಾಳದು ನಾಟಕರಂಗದ ಹಾಗಿರಲು
ನಾವದು ಕುಣಿವ ಪಾತ್ರಧಾರಿಗಳು!
ತಕ್ಕಥೈ ಕುಣಿಸುವ ಸೂತ್ರದಾರನು
ಮೇಲೆಯೆ ಕುಳಿತು ಆಡಿಸುತಿರುವನು//

ಸತ್ಯವೋ ಸುಳ್ಳೋ ಹೇಳುತ ನಾವು,
ನಂಬಿದ ಜನರ ಮೋಸವ ಗೊಳಿಸುತ,
ಬಾಳುವ ಬಾಳುವೆ ಚೆಂದದಿ ಎಂಬ
ಸೋಗನು ಹಾಕುತ ಬದುಕುತಲಿರುವೆವು..

ಮೇಲಿನ ದೇವನು ಸರಿತಪ್ಪುಗಳನು
ಲೆಕ್ಕವನಿಡುತಿಹ ಎಂಬುದ ಮರೆತು
ಹಣ ಧನದಾಸೆಗೆ ಮಾರುಹೋಗುತ
ಮರಣದವರೆಗೂ ಪಾಪವ ಮಾಡುತ..

ಪಾಪಕೂಪದಲಿ ಬಾಳುವೆ ಬೀಳದೆ,
ನೇಮ ನಿಷ್ಠರಾಗಿ ಬದುಕನು ಸಾಗಿಸಿ,
ಪರರ ಹಿತವನು ಬಯಸುತ ಬದುಕಿ
ಬಾಳುವೆ ಬಾಳಲು ಬಾಳನು ಬೆಳಗಿಸಿ!

ಮುಂದಿನ ಪೀಳಿಗೆ ಬೇಸರಗೊಳ್ಳದೆ
ನಮ್ಮಯ ದಾರಿಯ ತುಳಿಯುತ ನಡೆದು,
ಸ್ವರ್ಗದ ರೀತಿ ಸಂತಸ ಬೀರುತ
ಬದುಕಲು ಮುಕ್ತಿಯ ಪಡೆಯುವುದಿಲ್ಲವೇ?
@ಪ್ರೇಮ್@
29.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ