ಭಾವಗೀತೆ
ಬಾಳ ನಾಕ
ಮನದಲಿ ನೂತನ ಪದಸಂಪತ್ತಿಗೆ
ಗೆಳೆಯರು ನೆರೆಕರೆ ಒಡೆಯರಾಗುವರು
ಕಷ್ಟದಿ ಬದುಕುವ ಜೀವನದಾಟಕೆ
ಭ್ರಷ್ಟ ವಿಪತ್ತಿನ ಗುಣಗಳೆ ಕಾರಣರು..
ಬದುಕಲಿ ಬೆಳಕಿನ ಕಳೆಯಿರಬೇಕು
ಕತ್ತಲ ತುದಿಯಲಿ ದೀಪವು ಬೇಕು..
ಕೆಳಗಿಹ ನೆರಳಿಗೆ ಹೆದರಿಕೆ ಯಾಕೆ?
ಕಳವಳ ಬೇಡ, ನರಳಿಕೆ ಯಾಕೆ?
ನರಕದ ದಿನಗಳು ಇಂದೇ ತೊಲಗಲಿ
ಮನವದು ಧೈರ್ಯವ ತುಂಬುತ ನಲಿಯಲಿ
ಮಾತಿನ ಹಿಡಿತವು ಎಲ್ಲರಲಿರಲಿ
ಪ್ರೀತಿಯ ತಾಯತ ಎದೆಮೇಲಿರಲಿ..
ನಾಕವೊ ಪಾಕವೊ ಕಂಡವರ್ಯಾರು?
ಪಾಪ ಪುಣ್ಯಗಳ ಲೆಕ್ಕಿಗನಾರೊ?
ಒಳಿತನು ಬಯಸುವ ಮನವದು ಶ್ರೇಷ್ಠ
ಕೆಡುಕನು ಮಾಡುವ ಜನ ನಿಕೃಷ್ಟ..
@ಪ್ರೇಮ್@
27.09.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ