ಶನಿವಾರ, ಅಕ್ಟೋಬರ್ 12, 2019

1260. ಹಸಿರು

ಹಸಿರು

ಹಸಿರ್ಹಸಿರು ಹರದಾರಿ
ಹಸಿವಾಗಿದೆ ನೋಡಲು
ಹಲವರು ಕಡಿಯುತಲಿರು
ಹಗಲಿರುಳು ಕದಿಯುತಲಿ.

ಹೆಗಲು ಕೊಟ್ಟು ಹುಲುಬುತಲಿ
ಹುಲಿತೊಗಲಲಿ ಹುಲುಮಾನವ
ಹೊಲಗದ್ದೆಯಲಿ ದುಡಿವಾಗ
ಹದಮಾಡುವ ಮನವೀಗ..

ಹಸನಾದ ಹಸಿಮಣ್ಣಲಿ
ಹೊಸರಾಗದ ಹೆಸರದು
ಹಸಿಕಳೆಯ ಕಿತ್ತೊಸೆದು
ಹುಸಿಮುನಿಸ ಕಳೆಕಳೆಯೆ..

ಹೆದರದಿರು ನರನೀನು
ಹದಮಾಡಿ ಬಿಡುನೀನು
ಹಸಿರನ್ನು ನಂಬಿಬಿಡು
ಹಸನಾಗುವೆ, ಭಯಬೇಡ..
@ಪ್ರೇಮ್@
13.10.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ