ನಗೆ-ಹನಿಗಳು
1. ನಾನು
ಅವಳು ನನಗೆ
ಅವತ್ತೆ ಸಿಕ್ಕಿದಳು!
ಅಂದಿನಿಂದ ನಾನು
ಸರ್ವೆಡೆ ಪುಕ್ಕಲು!!
ಏಕೆಂದರೆ ಅವಳ
ತೂಕಕ್ಕೆ ಸಮವಿಲ್ಲ
ನಾನು ಮತ್ತು
ನನ್ನ ಮೂರು ಮಕ್ಕಳು!
2. ಮನೆ
ನಾ ಕಟ್ಟಿದೆ
ಸ್ವಂತದ ಮನೆ!
ನನ್ನ ದೌರ್ಭಾಗ್ಯ
ನನ್ನ ಸಂತಸವೆಲ್ಲಾ
ಅಂದೇ ಕೊನೆ!
ಕಾರಣ ಲೋನಿನ
ದೊಡ್ಡದಾದ ಹೊಣೆ!
3. ಅವಳು
ತಡಕಾಡುತಿದೆ ಮನ,
ಅವಳ ವೇಗದ ಆಗಮನ!
ಮಡದಿಯ ನಿರ್ಗಮನ,
ಪ್ರೇಯಸಿಯೆಡೆ ಗಮನ!
ಮಡದಿ ಅವಳಿಗೆ ಸಮಾನ?
4. ಕರಣ
ಬಹು ದಾನಶೂರ
ಅಂದಿನ ಕರ್ಣ!
ಇಂದೂ ಬಹಳ
ಜಾಗತೀಕರಣ!
ನಾನು ನೀನು ಕಣ
ಒಂದು ದಿನ ಮರಣ!!
4. ಮದುವೆ
ಗಂಡು ಹೆಣ್ಣಿನ ನಡುವೆ
ನಡೆಯೆ ಅದು ಮದುವೆ
ಬೇಕು ಬಹಳ ಒಡವೆ
ಬರಬಾರದು ಯಾರೂ ನಡುವೆ!!
ಯಾರಿಗೆ ಬೇಕು ಗೊಡವೆ??
ನಿತ್ಯ ಕರ್ಮ ಪಡುವೆ!!
5. ನೋಟ
ನೋಡುತ್ತಾ ಕುಳಿತಿದ್ದೆ
ಅವಳ ಅರ್ಧಂಬರ್ಧ ಅಂಗಿ!
ಗಮನಿಸಲಿಲ್ಲ ನಡುವೆ ಬಂದ
ನನ್ನ ಅರ್ಧಾಂಗಿಯ ಭಂಗಿ!
6. ನೋಟ
ಹಸಿದ ಹುಲಿಯ ನೋಟ
ಕೊಡಲಾರದು ಕಾಟ!
ಕುಡುಕ, ದುರುಳರ ನೋಟ
ರೌಡಿಗಳ ಕೈಗಿತ್ತು ನೋಟ,
ಕಲಿಸಬೇಕವರಿಗೆ ಪಾಠ!
7. ಜಡೆ
ನನ್ನಾಕೆಯ ಜಡೆ
ನಾಗರನ ಹೆಡೆ!
ಸಿಟ್ಟು ಬಂದಾಗ
ಅದು ಬುಸುಗುಟ್ಟೊಡೆ
ನಾನೇ ಸಿಗುವೆ
ಹಲವು ಕಡೆ!
ಓ..ನೋವು
ಪೆಟ್ಟು ತಿಂದೊಡೆ!!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ