ಶುಕ್ರವಾರ, ಅಕ್ಟೋಬರ್ 18, 2019

1270. ಕವನ-ಸಹನೆಯಿರಲಿ

ಸಹನೆಯಿರಲಿ..

ಸಪ್ತ ಸಾಗರವ ದಾಟುವ ಮಾನವನೆ
ಪ್ರಪಂಚ ಪರ್ಯಟನೆ ನಡೆಸಿ ಬರುವವನೆ
ಏಳು ಜನುಮಗಳನೆತ್ತಿ ನರಕದಿ ಜೀವಿಸುವವನೆ
ಬಾಳ ಬಂಡಿಯಲಿ ಬಹಳ ಸಹನೆಯಿರಲಿ..

ಸಾಮಾನು ಕೊಳ್ಳಲು ಹೋರಗೆ ಹೋದಾಗ
ಮನೆ, ಕೋಣೆಯ ಬಾಡಿಗೆ ಕೊಡುವಾಗ
ತನ್ನ ವಸ್ತುಗಳ ದಾನ ಮಾಡುವಾಗ
ಹೊಟ್ಟೆಯ ತುಂಬಿಸಲು ಪರದಾಡುವಾಗ
ಸಬುದ್ಧಿಯ ಸಜೀವಿಯೇ ಸಹನೆಯೊಂದಿರಲಿ..

ಪರರೊಡನೆ ಸದಾ ಬೆರೆಯುತಲಿರಲು
ವ್ಯಾಪಾರ ವಹಿವಾಟು ನಡೆಸುತಲಿರಲು
ಪರರ ಕೈ ಕೆಳಗೆ ದುಡಿಯಿತಲಿರಲು
ಪರಶಿವನಿತ್ತ ಪರಮ ಸಹನೆಯಿರಲಿ..

ಸಂತುಲಿತ ಸಂಪತ್ತನ್ನನುಭವಿಸಲು
ಸನ್ಮಾರ್ಗದಿ ಜೀವನ ನಡೆಸಲು
ಸುಖ ದು:ಖಗಳ ಒಂದಾಗಿ ಸ್ವೀಕರಿಸಲು
ಸಕಲರಿಗೆ ಸಾಂತ್ವನದ ಸಹನೆಯಿರಲಿ..

ಸೋಲು ಗೆಲುವಿನ ಸಾಹಸ ಪಡುತಿರಲು
ಸಂಗೀತದ ರಸ ಪಡೆದು ಆನಂದಿಸಲು
ಸಹಯೋಗದಲಿ ಸತತ ಸಂತಸವಾಗಿರಲು
ಸಂಕಟ ಹರನಂಥ ಸಹನೆಯು ಇರಲಿ..
@ಪ್ರೇಮ್@
19.10.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ