ಜನಪದ ಶೈಲಿ ಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಜನಪದ ಶೈಲಿ ಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಜೂನ್ 18, 2020

1454. ಮೀನುಗಾರರ ಹಾಡು

ಮೀನುಗಾರರ ಹಾಡು

ಜಂಜನಿರೋ ಜಂಜನಿರೋ ಜೈ ಜೈ ಜೈ
ಜಂಜನಿರೋ ಜಂಜನಿರೋ ಜೈ ಜೈ ಜೈ
ಕಡಲ ಕಂದರಣ್ಣ ನಾವು ಕಡಲ ಮಕ್ಕಳಣ್ಣ
ಕಡಲ ಮೀನೇ ದೇವರಣ್ಣ ಕಡಲೆ ನಮ್ಮ ತಾಯಿಯಣ್ಣ...
ಸೂರ್ಯ ನಮ್ಮ ಸುಡುವನಮ್ಮ ಗಾಳಿ ಬೀಸಿ ಕರೆವುದಣ್ಣ.
ಕಡಲ ತಡಿಯೆ ತಾಣವಣ್ಣ ನೆಮ್ಮದಿಯ ತರುವುದಣ್ಣ..

ಮುಂಜಾನೆದ್ದು ತೆಪ್ಪ ಹಿಡಿದು 
ಬಲೆಯ ಬೀಸಿ  ಮೀನು ಹಿಡಿದು
ಬೆವರನೆಲ್ಲ ಒರೆಸಿ ತೆಗೆದು
ಮೀನನೆಲ್ಲ ದಡಕೆ ಎಸೆದು
ನಮ್ಮ ಕಾರ್ಯ ಮಾಡುವ
ತೆರೆಯ ಮೇಲೆ ಸಾಗುವಾ ಜೈಜೈಜೈ..

ಸಮುದ್ರದ ತೆರೆಗಳ ನೋಡೋಣಾ..
ಹಾಡುತ ಮುಂದೆ ಸಾಗೋಣ..
ಸಂಜೆಯವರೆಗೆ ದುಡಿಯೋಣ..
ಊರನು ತಲುಪುತ ನಲಿಯೋಣ ಜೈಜೈಜೈ..

ಸಾಗರ ಮಾತೆಗೆ ನಮಿಸುತಲಿ
ಚಂದಿರನೆಡೆಗೆ ನೋಡುತಲಿ
ಕಲ್ಪವೃಕ್ಷದ ನೀರನು ಕುಡಿಯುತಲಿ
ದಡದಲಿ ನಲಿದು ಕುಣಿಯುತಲಿ
ಸರ್ವ ಸುಸ್ತನು ಮರೆಯೋಣ ಜೈಜೈಜೈ..
@ಪ್ರೇಮ್@
17.06.2020

ಗುರುವಾರ, ಏಪ್ರಿಲ್ 18, 2019

935. ಸುಗ್ಗಿಕಾಲ

ಕುಣಿಯೋಣು ಬಾರಾ

ಸುಗ್ಗಿಯ ಕಾಲ ಬಂದಿತೋ ಅಣ್ಣ..
ಕೊಬ್ಬಿದ ಸಡಗರ ತಂದಿತೋ ಅಣ್ಣ...

ತಬ್ಬಿದ ಮನದೊಳು ಅಪ್ಪಿದ ಪ್ರೀತಿಯ
ಕಬ್ಬಿಗರಂದದಿ ನಾಟ್ಯವನಾಡುತ..ಸುಗ್ಗಿಯ ಕಾಲ ಬಂದಿತೋ..

ಹಿಗ್ಗಿದ ಜೋಳವು ಮಾಗಿದ ಹಾಗೆ..
ತಗ್ಗಿದ ಗದ್ದೇಲಿ ಬೆಳೆ ಬಂದಂತೆ ಸುಗ್ಗಿಯ ಕಾಲ ಬಂದಿತೋ...

ಮನೆಮನ ಶುದ್ಧವ ಮಾಡಿರೆನುತಲಿ
ಹರಷದಿ ಪೈರನು ಹೊತ್ತು ತರುತಲಿ...ಸುಗ್ಗಿಯ ಕಾಲ ಬಂದಿತೋ..

ಢಣಢಣರೆನುತ ಗುಡಿಯಲಿ ಮೊಳಗಿದ
ಗಂಟೆಯ ಸದ್ದಿನ ಜಾಡನು ಹಿಡಿದ..ಸುಗ್ಗಿಯ ಕಾಲ ಬಂದಿತೋ...

ಅವನಿಯ ಮೌನದ ಬಾಗಿಲ ತೆಗೆದು
ಮನದಣಿಯೆ ಕುಣಿಯುವ ಪರಿಯಲಿ...ಸುಗ್ಗಿಯ ಕಾಲ ಬಂದಿತೋ..
@ಪ್ರೇಮ್@