ಪ್ರಾರ್ಥನಾ ಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರಾರ್ಥನಾ ಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಮಾರ್ಚ್ 14, 2025

ಪ್ರಾರ್ಥನೆ

ಪ್ರಾರ್ಥನೆ
ದೇವ ನಿನ್ನ ನಂಬಿ ನಾನು ಬದುಕಿ ಬಾಳುವೆ
ನಿನ್ನ ದಯೆಯ ನಮಗೆ ನೀಡು ಹರಸೆ ಬೇಡುವೆ//

ನಿನ್ನ ಕರುಣೆಯಿಂದ ಎಲ್ಲ ಯಶವು ಕಾಣಲಿ
ನಿನ್ನ ಶಕ್ತಿಯೊಲವು ಸೇರಿ ಬದುಕು ಸಾಗಲಿ//

ನಿತ್ಯ ನಾನು ಬೇಡುವೆನು ಕಾಯೋ ನಮ್ಮನು
ಸತ್ಯ ಶಾಂತಿ ಕೀರ್ತಿ ಕೊಟ್ಟು ಸಲಹು ನಮ್ಮನು//
@ಹನಿಬಿಂದು@
23.05.2022

ಭಾನುವಾರ, ಜುಲೈ 21, 2024

ಪ್ರಾರ್ಥನಾ ಗೀತೆ

ಪ್ರಾರ್ಥನಾ ಗೀತೆ

ರಾಗ: ಸೋಜಿಗದ ಸೂಜಿ ಮಲ್ಲಿಗೆ 

ಓ ದೇವಾ....
ಕಾಯೋ ನಮ್ಮನು ವರವ ನೀಡುತಲಿ
ಓ ದೇವಾ ನೀನು
ರಕ್ಷಿಸೆಮ್ಮನು  ತಪ್ಪು ತಿದ್ದುತಲಿ..
ಕಂದರು ನಾವೆಲ್ಲ... ತಪ್ಪು ಸಹಜವು ತಾನೇ?
ಕ್ಷಮಿಸಿ ಪ್ರತಿ ಹೆಜ್ಜೆ ಹೆಜ್ಜೆಯಲೂ ...
ಓ ದೇವ ನಮ್ಮ....
ಕ್ಷಮಿಸಿ ಪ್ರತಿ ಹೆಜ್ಜೆ..... ಹೆಜ್ಜೇಗೂ ನಮ್ಮನ್ನು
ಒಳ್ಳೆಯ ಬದುಕು ನೀಡಯ್ಯಾ ..... .....
ಓ ದೇವ ನಮ್ಮ... ಕಾಯೋ..

ಕರ ಮುಗಿದು ಬೇಡುವೆ
ಹರಸೆಂದು ಕೇಳುವೆ
ಶಿರವನ್ನು ಬಾಗಿ ನಮಿಸುವೆನೂ...
ಓ ದೇವ ನಿಮಗೆ
ಶಿರವನ್ನು ಬಾಗಿ ನಮಿಸುವೆ ನಿತ್ಯವೂ
ಶಾಂತಿಯ ಬದುಕು ನೀಡಯ್ಯಾ .......
ಓ ದೇವ ನಮ್ಮ...ಕಾಯೋ....
@ಹನಿಬಿಂದು@
21.07.2024

ಶನಿವಾರ, ಅಕ್ಟೋಬರ್ 12, 2019

1259. ಪ್ರಾರ್ಥನೆ

ಪ್ರಾರ್ಥನೆ

ಪರಿಪರಿಯ ಪದರದಲಿ
ಪರಿವರ್ತನೆಯ ಪರಿಸರದಲಿ
ಪರಮಸುಖದ ಬದುಕಿರಲಿ..

ಪರಾಕ್ರಮವ ಮೆರೆಯುತಲಿ
ಪರೋಪಕಾರಗೈಯ್ಯುತಲಿ
ಪಾರತಂತ್ರ್ಯವ ಬಿಡುತಲಿ..

ಪಂಜಿನಂಥ ಪರಸ್ಥಳದಲಿ
ಪುರದ ಪುಣ್ಯದುದಕದಲಿ
ಪರಮ ಪಾವನ ಪದಕ..

ಪೋಷಕ ಪಾವಕ ಪ್ರೀತಿ
ಪಾಣಿನಿ ಬರೆದ ರೀತಿ..
ಪುರುಷೋತ್ತಮ ಪ್ರತೀತಿ..

ಪರರ ಪಶು ಪದಾರ್ಥವ
ವಿಷದಂದದಿ ಪರಿಗಣಿಸುವ
ಪರಿಚಾರಕನ ಗುಣ ಪಾವನ..
@ಪ್ರೇಮ್@
12.10.2019

ಭಾನುವಾರ, ಆಗಸ್ಟ್ 18, 2019

1188. ಪ್ರಾರ್ಥನೆ

ಪ್ರಾರ್ಥನೆ

ಬಾ ತಾಯೆ ಕಾಯೆಮ್ಮನು ಕರುಣೆಯ ಕೃಪೆ ತೋರಿ!
ನಿತ್ಯ ಪೊರೆಯೋ ನಮ್ಮ ತೋರುತಲಿ ಸರಿ ದಾರಿ//

ಶುದ್ಧ ಮನವನು ನೀಡಿ, ಸಹೃದಯದಿ ಮಾತಾಡಿ,
ಒಳ್ಳೆ ಕಾರ್ಯವ ಮಾಡಿ
ನಿತ್ಯ ಸಂತಸ ಮನೆಮಾಡಿ//
ಬದುಕ ದಾರಿಯಲುಂಟು ಕಲ್ಲು-ಮುಳ್ಳಿನ ನಡೆಯು,
ಬಾಳ ಏಣಿಯನೇರುವಾಗ ನೆನಪಿರಲಿ ಹಿರಿಯರ ನುಡಿಯು//

ಗಗನದಲಿ ತೇಲಿದಂತೆ ಸುಖದಿ ಮೆರೆಯುತಲಿರಲು,
ಕಷ್ಟವನೂ ಸಹಿಸುವ ಶಕ್ತಿ ನನೀಡುತಲಿರಲು//
ನಾನೆಂಬ ಅಹಂಕಾರ ದೂರ ಸರಿಯಲಿ ಎಂದೂ
ನೀನೇ ಸರ್ವ ಶಕ್ತಿಯೆಂಬ ನಿಜ ತಿಳಿಯಲೆಂದೂ//

ಸರ್ವರೊಂದೇ ಭಾವ ಹೆಡೆಯಾಡಲಿ ಮನದಿ,
ಒಗ್ಗಟ್ಟಿನಲಿ ಕಾರ್ಯ ಮಾಡುವಂತಾಗಲಿ ಪ್ರತಿ ದಿನದಿ//
ಬಯಕೆ ತೋಟದಿ ಬೇಲಿ ದಾಟಿ ಹೋಗದೆ ಇರಲಿ,
ಸರ್ವರೂ ಒಂದೆಂಬ ಭಾವನೆಯು ಬೆಳಗಲಿ//
@ಪ್ರೇಮ್@
16.08.2019