ಹಾಡು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಾಡು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಫೆಬ್ರವರಿ 12, 2023

ಕಲಿಕಾ ಹಬ್ಬ

ರಾಗ - ಚೆನ್ನಪ್ಪ ಚನ್ನೆ ಗೌಡ


ಕಲಿಕಾ ಹಬ್ಬ

ಬಂತಪ್ಪ ಬಂತು ಇಲ್ಲಿ
ಕಲಿಕಾ ಹಬ್ಬವು ನಮಗೆಲ್ಲಾ..
ಹಾಡನು ಹಾಡುವೆವೂ ನಾವು
ಆಟವ ಆಡುವೆವು...

ಊರನು ತಿಳಿಯೋಣ
ನಾವು ಬಣ್ಣವ ಹಚ್ಚೋಣ
ಮರವನು ಅರಿಯೋಣ ನಾವು
ನಕ್ಷೆಯ ರಚಿಸೋಣ..//ಬಂತಪ್ಪ//

ಹಾಡು-ಕಥೆ ಕಟ್ಟುವೆವು
ನಾವು ಗೊಂಬೆಯ ಮಾಡುವೆವು
ನೋಡಿ ಕಲಿಯುವೆವು ಚಿತ್ರವ
ಮಾಡಿ ಆಡುವೆವು ...//ಬಂತಪ್ಪ//

ಕಸದಲಿ ರಸವುಂಟು..
ನಾವು ಉಪಯೋಗ ಮಾಡುವೆವು
ಮರದ  ಎತ್ತರವ ನಾವು
ಇಲ್ಲಿಂದ ಅಳೆಯುವೆವು...

ಕತ್ತರಿ ಅಂಟಲ್ಲಿ
ನಮಗೆ ಮುಖವಾಡ ಮಾಡುವೆವು
ಟೋಪಿಯ ಮಾಡುತಲಿ ನಾವು
ಕುಣಿಯುತ ಕಲಿಯುವೆವು//ಬಂತಪ್ಪ//
@ಹನಿಬಿಂದು@


ಗುರುವಾರ, ಜನವರಿ 2, 2020

1302. ನೀ ಮೀಟಿದ

ಮೂಲ ಹಾಡು....ನೀ ಮೀಟಿದ ನೆನಪೆಲ್ಲವೂ

ನೀ...

ನೀ ಬಂದಿಹ ಬಾಳೆಲ್ಲವೂ
ಸಂತಸದ ಗೂಡಾಗಿದೆ..
ನೀ ಬಾಳಲಿ ಬರದಿದ್ದರೆ
ಬರಿದಾದ ಗೂಡಾಗಿದ್ದೇ...

ಬಯಸಿದನು ನೀ ನೀಡಿ
ಮನದುಂಬಿ ಹಾರೈಸಿದೆ..
ಮನದಣಿಯೆ ನೀ ಹರಸಿ
ಬದುಕೆಲ್ಲ ಹಗುರಾಗಿಸಿದೆ..
ಸಂತಸವೂ ನೀ ನನ್ನ ಸಂಭ್ರಮವೂ ನೀ...
ಸಾಹಿತ್ಯ ನೀ ನನ್ನ ಸೌರಭವೂ ನೀ..
ನಾನು ನೀನು ಮಾತ್ರ ಇನ್ನು ಈ ಬಾಳಲಿ ಎಂದೂ...//ನೀ//
@ಪ್ರೇಮ್@
05.12.2019

ಶನಿವಾರ, ಡಿಸೆಂಬರ್ 2, 2017

27. ಕವನ- ದೀಪಾವಳಿ

ದೀಪಾವಳಿ

ಪಟಪಟ ಪಟಾಕಿ ಸಿಡಿಯಿತು ಭರದಿ,
ಮಕ್ಕಳ ಹಿಂಡು ಸೇರಿತು ಸಡಗರದಿ...1೧1

ರಂಗು ರಂಗಿನ ಮಾಲೆ ಮಾಲೆಯ
ತರತರ ಪಟಾಕಿ ಮಾಡಿವೆ ಧಾಳಿಯ...

ಬನ್ನಿರಿ ಹಚ್ಚುವ ಎಂದರು ಕೆಲವರು,
ಬಂದರು ಆಸೆಯ ಕಣ್ಣಿಂದ ಹಲವರು..1೨1

ತಾವೇ ಸುಟ್ಟರು ತಂದಿಹ ಪಟಾಕಿ,
ಅರ್ಥವಾಯಿತು ಸುಳ್ಳಿನ ಚಟಾಕಿ..

ಬೇಸರ ಛಾಯೆಯು ಕಂಡಿತು ಮನದಲಿ
ಮನವು ಮುದುಡಿತು ರೋಷದಲಿ1೩1

@ಪ್ರೇಮ್@