ಗುರುವಾರ, ಆಗಸ್ಟ್ 9, 2018

407. ಗಝಲ್-32

ಗಝಲ್

ಪರಿಶುದ್ಧ ಮನದಲೆಂದೂ ಬರಬಾರದು ಕಪಟ
ನಮ್ಮೊಳಗೆ ಆಗಾಗ ಸಂಚರಿಸುತ ಇರಬಾರದು ಕಪಟ

ನಿತ್ಯ ಜೀವನದಿ ಉನ್ಮತ್ತನಾಗಿ ನರ್ತಿಸಬಾರದು
ಸತ್ಯ ದೇವರೆಂದೆಣಿಸಿ ಬದುಕಬೇಕು  ತರಬಾರದು ಕಪಟ

ನಾಯಿ ನರಿ ಹಂದಿಗಿಂತ ಮೇಲಿರಬೇಕು
ಮನುಷ್ಯತ್ವವ ಮೆರೆದು ಬದುಕಿ, ನೆನೆಯಬಾರದು ಕಪಟ

ಮೆತ್ತನೆ ಹಾಸಿಗೆ ತಣ್ಣನೆ ಬದುಕು ಇದ್ದರೆ ಸಾಲದು
ವನವಾಸದಂತೆ ಬದುಕಿದರೂ ಸುಳಿಯಬಾರದು ಕಪಟ..

ಪ್ರೀತಿ ಸ್ನೇಹ ನಿಸ್ವಾರ್ಥ ಭಾವನೆಗಳಿಗೆ ಬೆಲೆಯಿರಬೇಕು
ಮಗುವಿನಂಥ ಪ್ರೇಮದ ಮನಸು ಅರಿತಿರಬಾರದು ಕಪಟ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ