ಬುಧವಾರ, ಆಗಸ್ಟ್ 8, 2018

406.ಗಝಲ್-31

ಗಝಲ್

ನೂರು ಜಾತಿ ಧರ್ಮಗಳ ಕೊಚ್ಚಿ ಹಾಕಲಿ ಈ ಮಳೆ
ನಗರದೊಳಗಿನ ಕೊಳಚೆ ಪ್ರದೇಶಗಳ ಸ್ವಚ್ಛ ಮಾಡಲಿ ಈ ಮಳೆ..

ಮೋಸದಾಟದ ಸುಳ್ಳಿನೂಟವ ಕಾಮದ ನೋಟವ
ಭುವಿಯಿಂದಲೆ ದೂರ ತಳ್ಳಲಿ ಈ ಮಳೆ

ಹೂವ ಹಾಸಿಗೆ ಚುಂಬನದ ಮತ್ತನೀಯಲಿ
ಜನರಿಗತಿ ಸನಿಹದಲಿ ಖುಷಿಯ ಬರಿಸಲಿ ಈ ಮಳೆ

ಮನದ ಮುಸುಕನು ದೂರ ಸರಿಸಲಿ
ಬೆಳಕ ಬಾಳ್ವೆಗೆ ನೀಡಿ ಸಲಹಲಿ ಈ ಮಳೆ

ಸುರಿದು ಭೂಮಿಯ ಕಸವ ತೊಳೆಯಲಿ
ಎಲ್ಲ ಮೈಮನಗಳ ಶುದ್ಧೀಕರಿಸಲಿ ಈ ಮಳೆ

ರಾಜಕೀಯದ ಡೊಂಬರಾಟವ ಧೂಳೀಪಟಗೊಳಿಸಲಿ
ಮಾತಿನಲಿ ಕೃತಿಯಲಿ ಪ್ರೇಮದಾ ರಸವುಣಿಸಿ ಸರ್ವರ ತಣಿಸಲಿ ಈ ಮಳೆ.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ