ಏಕೀ ಬಗೆ
ಹೃದಯಕೆ ಹತ್ತಿರ ಬಾನಿಗೂ ಎತ್ತರ
ಪ್ರೀತಿಯ ಪಾತ್ರವು ಜಗದಿ ಮಹತ್ತರ
ವಿನಯ ವಿಧೇಯತೆ ವಿನಮ್ರ ಉತ್ತರ
ಪ್ರೇಮವೆ ಬಾಳಿನ ಬೆಳಗು ನಿರಂತರ
ಉನ್ನತ ಆಲೋಚನೆ ಬರಲು ಸತತ
ಮೆದುಳಲಿ ಉನ್ನತ ಯೋಚನೆ ಹೊಳೆಯುತ
ಇರುತಲಿ ಇರಲು ಮನವು ಸದಾ ಸಂತೃಪ್ತ
ಬೆಳಗಿದೆ ಅಂದದ ಬಾಳು ಅನವರತ..
ತಾನು ತನ್ನದೆಂಬ ಬೇಧವ ಮರೆತು
ದೇವರ ಮನೆಯಲಿ ಒಟ್ಟಿಗೆ ಕಲೆತು
ಬದುಕಿನ ನೀತಿಯ ಅನುಭವದಿ ಕಲಿತು
ಸಂತಸ ಸಡಗರ ಹಂಚುವುದೊಳಿತು..
ದಿನದಲಿ ಅಳಿಸಿ ಒಂದು ಕಣ್ಣೀರು
ಆಗಲಿ ಆನಂದ ಭಾಷ್ಪ ಬರಿಸೋರು
ನಾನೇ ಎಲ್ಲವು ಎಂದು ಬೀಗದಿರು
ಕೊಚ್ಚಿಕೊಂಡೀತು ಸರ್ವವ ಮಳೆನೀರು...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ