ಗುರುವಾರ, ಆಗಸ್ಟ್ 9, 2018

408. ಲಘುಬರಹ

ಕನಿಕರ ಬೇಡವೆ..(ಲಘುಬರಹ)

೧. 'ಅಲ್ಲಾ ಅಷ್ಟು ಸಣ್ಣ ಮಗುವಿಗೆ ಹಾಗೆ ಹಿಡ್ಕೊಂಡು ಹೊಡೆದಿದ್ದಾರೆ ಆ ಟೀಚರ್, ಮನುಷ್ಯತ್ವ ಅನ್ನೋದು ಇದೆಯಾ, ಸ್ವಲ್ಪನಾದ್ರೂ ಕನಿಕರ ಬೇಡ್ವೇ?'
'
೨. 'ಅಲ್ಲಾ, ಆ ಸಣ್ಣ ಹುಡುಗಿಯನ್ನು ಚಾಕ್ಲೇಟ್ ಕೊಡ್ತೀನಂತ ಹೇಳಿ ಕಾಡಿಗೆ ಕರ್ಕೊಂಡು ಹೋಗಿ ರೇಪ್ ಮಾಡಿ ಕಟ್ಟಿಗೆ ತರಾ ಬಿಸಾಕಿದ್ದಾನಲ್ಲ ಆ ರಾಕ್ಷಸ, ಸ್ವಲ್ಪನಾದ್ರೂ ಕನಿಕರ ಬೇಡ್ವೇ.. ಅವ್ನೇನು ಮನುಷ್ಯಾನಾ?'

೩. 'ಅಲ್ಲಾ, ನಮ್ ಕಾಲದಲ್ಲೆಲ್ಲಾ ಹಿಂಗಿರ್ಲಿಲ್ಲಪ್ಪ, ಮನೆಗೆ ಬಂದೋರ್ನ ಚೆನ್ನಾಗಿ ಕರ್ದು ಮಾತಾಡ್ಸೋ ರೂಢಿ ಇತ್ತು, ಚೆನ್ನಾಗೂ ವಿಚಾರ್ಸಿ ಕೊಳ್ತಿದ್ರು, ಈಗಿನ್ ಹೈಕ್ಳಿಗೆ ಒಂಚೂರೂ ಕರುಣೆ, ಕನಿಕರ, ದೊಡ್ಡೋರ್ ಬಗ್ಗೆ ಗೌರವ ಒಂದೂ ಇಲ್ಲ, ಅದೇನ್ ಸಾಧಿಸ್ತಾವೋ ಏನೋ..?'

೪. 'ತನ್ನಷ್ಟಕ್ಕೇ ತಾನೇ ಹಗಲಿಡೀ  ಹುಲ್ಲು ಮೇದು ಬಂದು ಸಂಜೆ ಬಸ್ ಸ್ಟಾಂಡಿನ ಮೂಲೆಯಲ್ಲಿ ಮಲಗ್ತಿತ್ತು ಆ ಹೋರಿ, ಪಾಪ ಯಾರದೋ ಏನೋ.. ಚೆನ್ನಾಗಿತ್ತು, ಯಾವ ರಗಳೆಯೂ ಇರ್ಲಿಲ್ಲ, ಕನಿಕರ ಇಲ್ಲದ ಪಾಪಿಗಳು ಬಂದು ರಾತೋ ರಾತ್ರಿ ಹೊತ್ಕೊಂಡ್ ಹೋದ್ರು..'

೫. 'ಈ ಮಳೇಲಿ ಆ ಮಗೂನ ದನ ಎಳ್ಕೊಂಡು ಹೋದ್ಹಾಗೆ ಎಳ್ಕೊಂಡ್  ಹೋಗ್ತಾನಲ್ಲ, ಇವ್ನೇನು ಮನುಷ್ಯನಾ ಇಲ್ಲ ಮೃಗಾನ.. ಕನಿಕರಾನೇ ಇಲ್ದಿರೋ ಇವ್ನು ನಿಜ್ವಾಗ್ಲೂ ಅಪ್ಪಾನೇನಾ..?'

೬. ಆ ಪಾಪದ, ಬಾಯಿ ಬರದಿರೋ ನಾಯೀನ ಹಾಗೆ ಹೊಡೀತಾ ಇದ್ದಾನಲ್ಲ! ಅವನೇನು ಮನುಷ್ಯನಾ? ಕನಿಕರವೇ ಇಲ್ಲದಿರುವ ಇವ ಹೊಟ್ಟೆಗೇನು ಮಣ್ಣು ತಂತಾನಾ? ಅದರ ಬಾಲ ತುಂಡು ಮಾಡಿ ನೋವು ಕೊಟ್ಟಿದ್ದೇ ಅಲ್ಲದೆ ಈಗ ಹೊಡೆತ ಬೇರೆ! ಅದರ ಶಾಪ ಅವನಿಗೆ ತಟ್ಟದೆ ಇರೋಲ್ಲ..'

೭. 'ಅವಳೆಂಥ ಅತ್ತೇನೋ..ಸೊಸೆ ಮೇಲೆ ಒಂಚೂರಾದ್ರೂ ಕನಿಕರ ಬೇಡ್ವಾ.. ಬಂದ ತಕ್ಷಣ ಪ್ರಾಣೀನ ಹೊರಗಟ್ಟಿದ ಹಾಗೆ ಬಾಣಂತಿ ಸೊಸೇನ ಈ ಚಳಿಗೆ ಹೊರಗಟ್ಟಿ ಬಿಟ್ಳಲ್ಲಾ.. ಅವಳ್ ಮಗ್ಳಿಗೇ ಹಂಗಾದ್ರೆ ಸುಮ್ನಿರ್ತಾಳಾ ಅವ್ಳು?'

೮. 'ಛೀ ..ಕನಿಕರಾನೇ ಇಲ್ದಿರೋ ಪ್ರಾಣಿಗಳು.. ಉಷಾರಿಲ್ದಿರೋ ಆ ಹುಡ್ಗೀನ ಆಸ್ಪತ್ರೆಗೆ ಕರ್ಕೊಂಡ್ ಹೋಗಿ ಅಡ್ಮಿಟ್ ಮಾಡ್ಸೋದ್ ಬಿಟ್ಟು ಹಾಳಾದವ್ರು ಆ ಹಾಳಾದ ಮಂತ್ರವಾದಿ ಹತ್ರ ಕರ್ಕೊಂಡ್ ಹೋಗಿ ಹೈರಾಣ್ ಮಾಡಿ ಹಾಕಿದ್ದಾರೆ,ಸ್ವಲ್ಪಾನಾದ್ರೂ ಬುದ್ಧಿ ಬೇಡ್ವಾ..!"
    ಹೀಗೆ ಹೇಳುವ ಜನರೂ, ಹೀಗೆ ಮಾಡುವ ಜನರೂ ನಮ್ಮ ಜೊತೆಗೆ ನಮ್ಮ ಸುತ್ತ ಮುತ್ತಲೇ ಇರುವ ನಮ್ಮ ಗೆಳೆಯರು, ಅಕ್ಕ-ಪಕ್ಕದ ಮನೆಯವರು, ಕ್ಲಾಸ್ ಮೇಟುಗಳು, ಪರಿಚಯಸ್ಥರು, ಬಂಧುಗಳೊಳಗೇ ಇರ್ತಾರೆ ಅಲ್ವೇ? ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ