ಶುಕ್ರವಾರ, ಆಗಸ್ಟ್ 3, 2018

403. ಗಝಲ್-30

ಗಝಲ್

ಅಪ್ಪಟ ಅಪರಂಜಿ ತುಪ್ಪದಲ್ಲದಿದ ಸವಿಯು ನಮ್ಮ ಕನ್ನಡ
ಕಪ್ಪಗಿನ ಮಣ್ಣ ನಾಡಿನ ಭಾಷೆಯು ನಮ್ಮ ಕನ್ನಡ

ಬೆಪ್ಪನೂ ಕಲಿತಾನು, ಸುಲಭದ ಭಾಷೆಯ
ಸಪ್ಪಗಿನ ಭಾವ ಇಲ್ಲಿರದೆ, ಪರಿಶುದ್ಧತೆಯು ನಮ್ಮ ಕನ್ನಡ

ತಪ್ಪಾಗದೆ, ರಪ್ಪನೆ ಮೈಮನದಾಳದಿ ಮೈಮರೆತು
ಮುಪ್ಪಾಗದ, ಹಪ್ಪಳದ ಸವಿಯು ನಮ್ಮ ಕನ್ನಡ

ದಪ್ಪವಾಗಿರದೆ, ಜಪ್ಪನೆನ್ನದೆ ಕಿವಿಗೊಟ್ಟು ಕೀಳುವ
ಸೊಂಪಾದ ಹಿತನುಡಿಯಲಿ ಹಾಡುವ ಕವಿಯು ನಮ್ಮ ಕನ್ನಡ..

ಹಂಪಿಯ ಕೆಂಪು, ಮಲ್ಲಿಗೆ ಕಂಪಿನ
ತಂಪಾದ ತಾಣದ ಕಲ್ಪವಲ್ಲಿಯು ನಮ್ಮ ಕನ್ನಡ

ಪ್ರೀತಿಯ ಭುವನೇಶ್ವರಿ ತಾಯಿಯು ಪ್ರೇಮದಿ
ನುಡಿಯುವ ಸೊಬಗಿನ ನುಡಿಸಿರಿಯು ನಮ್ಮ ಕನ್ನಡ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ