ಪಕಳೆ
ಅರಳುವುದೆನ್ನ ಕಾಯಕ
ಗಿಡಕೆ ನಾನೆ ನಾಯಕ
ನಾನಿರದೆ ಕಾಯಿಯೆಲ್ಲಿ
ಹುಟ್ಟಿಗೆಲ್ಲ ಕಡಿಮೆಯೆಲ್ಲಿ?
ಶ್ರಾವಣವು ಹಸಿರ ತೋರಣ
ಮೈಮನವು ಮೂಕ ಭಾವನ
ಬಣ್ಣ ಬಣ್ಣ ನನ್ನ ಮನ
ನೀನಾರಿಗಾದೆಯೋ ಅಣ್ಣ..
ಮನವ ತೊಳೆಯೆ ಬಣ್ಣಬಣ್ಣ
ಇಣುಕು ನೋಟ ದುಂಬಿಯಣ್ಣ
ನನಗಾಗಲ್ಲ ಮಕರಂದ ಬೇಕು
ನೋಡೆ ಕಣ್ಣ ತಂಪು ಸಾಕು..
ಬಣ್ಣ ದುಂಬಿಗಾಗೆ ಇಹುದು
ದೇವಗಾನೆ ಮೀಸಲಹುದು
ನೂಲು ನನ್ನ ಸೇರಿ ಮಾಲೆ
ಒಗ್ಗಟಲ್ಲಿ ಹಲ ಪಕಳೆ ಸಾಲೆ. .
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ