ಶನಿವಾರ, ಸೆಪ್ಟೆಂಬರ್ 22, 2018

473. ಮಕ್ಕಳ ಕವನ-4

ನಾಯಿಮರಿ

ನನ್ನ ಮುದ್ದು ನಾಯಿಮರಿ
ತಿನ್ನಲು ಬೇಕು ಮೂಳೆ ಬರೀ
ಹಾಡುವುವ ರಾಗ ಕುಂಯ್ ಕುಂಯ್
ಓಡುವ ಓಟ ಸುಂಯ್ ಸುಂಯ್.

ಚೆಂಡು ಬಾಯಲ್ಲಿ ಕಚ್ಚಿ
ತಂದು ತರುವುದು
ಊಟ ಖುಷಿಯಾದ್ರೆ ಮಾತ್ರ
ಶೇಕ್ ಹ್ಯಾಂಡ್ ಕೊಡುವುದು..

ಅಪ್ಪನನ್ನು ಕಂಡರೆ
ಓಡಿ ಬರುವುದು
ಅಮ್ಮ ಗದರಿದರೆ
ಮೂಲೆಗೆ ಓಡುವುದು

ಸೋಫಾದಲ್ಲೆ ಮಲಗಿಕೊಂಡು
ಗೊರಕೆ ಹೊಡೆವುದು
ಕನಸಿನಲ್ಲು ಕಳ್ಳ ಬಂದ್ರೆ
ಬೌಬೌ ಎನುವುದು..

ಹೊಸಬರನ್ನು ಕಂಡ ಒಡನೆ
ಬೊಗಳಿ ರಂಪ ಮೂಡುವುದು
ಮನೆಯವರ ನೋಡಿದೊಡನೆ
ಬಾಲ ಕುಣಿಸಿ ನಗುವುದು

ನನ್ನ ಮುದ್ದು ಟಾಮಿಯದು
ನನ್ನ ಮೊದ್ದು ಗೆಳೆಯನದು
ಟಾಮಿ ಬಿಟ್ಟು ಇರಲಾರೆ
ಗೆಳೆಯನ ನಾ ಅಗಲಲಾರೆ.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ