ಗುರುವಾರ, ಸೆಪ್ಟೆಂಬರ್ 13, 2018

458. ಪ್ರಾರ್ಥನೆ

ಬೇಡಿಕೆ

ಗಣೇಶ ನಿನ್ನ ಚರಣಕೆರಗಿ
ಬೇಡುವೆನು ಮನಕರಗಿ
ಮೊದಲ ಪೂಜೆ ನಿನಗರ್ಪಣೆ
ಬದುಕು ನಿನಗೆ ಸಮರ್ಪಣೆ..

ಇಲಿ ವಾಹನ ಕಡುಬು ಹೂರಣ
ಗರಿಕೆ ಪೂಜೆಗೆ ತೋರಣ
ಶಿವ ಪಾರ್ವತಿ ಸುತ ನೀನು
ಸುಬ್ರಹ್ಮಣ್ಯ ಸಹೋದರ

ವಿದ್ಯಾವಿನಾಯಕ ಜ್ಞಾನದಾಯಕ
ವಿಘ್ನವಿನಾಶಕ ಪೊರೆಯೊ ಗಣಪ
ಗಣನಾಯಕ ಮುಕ್ತಿಪ್ರದಾಯಕ
ಏಕದಂತನೆ ಕರುಣಿಸನವರತ...

ಅಂಬಾಸುತ ಗೌರೀನಂದನ
ಗಜವದನ ಗಜಾನನ
ವರಗಳ ನೀಡೋ ಗಜೇಶನೇ
ವಿಘ್ನವನೋಡಿಸಿ ಬಾಳನು ಬೆಳಗಿಸ ಬೇಡುವೆ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ