ನಮನವು
ತಾಯೆ ಚಾಮುಂಡಿಯೆ ಅಮ್ಮಾ ಹರಸು
ಮಾತೆ ಗೌರಿಯೆ ರಕ್ಷಿಸು ಬದುಕು
ಮನಕೆ ಆನಂದ ನೀಡಿ ಸಲಹುವೆ
ಬಾಳ ನಾವೆಯ ನೀನೆ ಎಳೆಯುವೆ
ನಿನ್ನ ಶಕ್ತಿಯು ಅಪಾರ ಜಗದಲಿ
ನಿನ್ನ ಮೂಗುತಿ ದಿನವು ಪ್ರಜ್ವಲಿಸಲಿ
ನಮ್ಮ ಕಾರ್ಯವು ಜಯದತ್ತ ಸಾಗಲಿ
ಹಿರೆಯರೆಲ್ಲರು ನಮ್ಮನ್ನು ಹೊಗಳಲಿ
ಕಿರಿಯರ ಬಾಳು ನಮ್ಮಿಂದ ಬೆಳಗಲಿ
ಸೋಮಾರಿ ನಿದ್ದೆಯು ದೂರ ತೊಲಗಲಿ
ಸೀರೆ ನಿನ್ನಯ ಮತ್ತು ಹೆಚ್ಚಲಿ
ಬಳೆಯ ಶೃಂಗಾರ ನನಗೂ ದಕ್ಕಲಿ
ಕುಳಿತ ಭಂಗಿಗೆ ನಾನು ಸೋತಿಹೆ
ನಿನ್ನ ನೋಡುತ ನನ್ನನ್ನೆ ಮರೆತಿಹೆ
ಬೇರೇನು ಬೇಡೆನು ನಾನು ನಿನ್ನಲಿ
ಪ್ರೀತಿ ತುಂಬಿದ ಹೃದಯವೆ ಇರಲಿ
ದ್ವೇಷ ಮತ್ಸರ ದೂರ ಹೋಗಲಿ
ಕಾಮ ಕ್ರೋಧವು ಕಡಿಮೆಯಾಗಲಿ
ದುಷ್ಟ ಗುಣಗಳು ದೂರವಾಗಲಿ
ಕೆಟ್ಟ ಚಟಗಳು ನಾಶವಾಗಲಿ
ಅಮ್ಮ ನಿನ್ನಯ ನಾಮ ಸ್ಮರಿಸುವೆ
ನಿನ್ನ ಹಾಡನು ನಾನು ಹಾಡುವೆ
ನಿನ್ನ ಕಂದರ ಹರಸೆಂದು ಬೇಡುವೆ
ಮನದ ಕಲ್ಮಶ ನೀ ದೂರಗೊಳಿಸುವೆ....
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ