ನಮನ
ಪ್ರೀತಿಯ ಹೃದಯವ ದೇವನು ಕೊಟ್ಟಿಹ
ಆನಂದಭರಿತ ಮನವನು ನೀಡಿಹ
ಹೃದಯದಿ ಕುಂದದ ಪ್ರೀತಿಯ ಇಟ್ಟಿಹ
ದೇವನೆ ನಿನಗೆ ನನ್ನಯ ನಮನ...
ಮನದಲಿ ಮಗುವಿನ ಬುದ್ಧಿಯನಿಟ್ಟೆ
ಕ್ಷಣದಲಿ ಯೋಚನೆ ಮಾಡಲು ಬಿಟ್ಟೆ
ಬದುಕಲಿ ಉತ್ತಮ ಸಮಯವ ಕೊಟ್ಟೆ.
ಮಹಾದೇವನೆ ನಿನಗೆ ನನ್ನಯ ನಮನ...
ನೋಟದಿ ಸಡಗರ ಸಂತಸ ಹಂಚಿ
ಮೆದುಳಲಿ ಒಳ್ಳೆಯ ಶಕ್ತಿಯ ಹಚ್ಚಿ
ಬಿಸಾಕಿ ಕೋಪವ ಹಾಕುತ ಕೊಚ್ಚಿ
ಹರನೇ ನಿನಗೆ ನನ್ನಯ ನಮನ
ಹಸಿರಿನ ಪರಿಸರ ನಮಗದೊ ನೀಡಿ
ಕಾಣದ ಗಾಳಿಯ ಪ್ರಾಣಕೆ ನೀಡಿ
ಘನ ಮೈಯೊಳು ಕೆಂಪು ದ್ರವವನು ಕೂಡಿ,
ಬಾಳನು ನೀಡಿದ ಈಶಗೆ ನಮನ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ