ಬುಧವಾರ, ಸೆಪ್ಟೆಂಬರ್ 26, 2018

492.ಅನುಭವ

ಅನುಭವ

ನಾನು ನನ್ನಷ್ಟಕ್ಕೆ ನಾನೇ
ಕೆಲಸಕ್ಕೆಂದು ನಡೆದುಕೊಂಡು
ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದು ಬಿಟ್ಟೆ!
ತಕ್ಷಣಕ್ಕೆ ಮೇಲೇಳಲಾಗಲಿಲ್ಲ
ಗಾಯವೇನೂ ಆಗಲಿಲ್ಲ
ಸ್ವಲ್ವ ನೋವಷ್ಟೇ ಆಯಿತು
ನಾನೇನು ತೀರಾ ಮುದುಕನೇ
ನಲವತ್ತರ ಗಡಿ ದಾಟಿರುವೆನಷ್ಟೆ!

ಕೆಲವರಿಗೆ ತಮ್ಮ ಕೆಲಸದ  ಒತ್ತಡದಿ
ನನ್ನ ಗಮನಿಸಲು ಸಮಯವಿಲ್ಲ!
ಮತ್ತೆ ಕೆಲವರಿಗೆ ಬಸ್ ಬರುವ ಸಮಯ
ಮೇಲೆತ್ತಲು ಟೈಮ್ ಸಾಲದು
ಇನ್ನು ಹಲವರಿಗೆ ಅದು ಸಂಬಂಧಿಸಿದ ಕೆಲಸವೇ ಅಲ್ಲ!
ಅವರ ಕೆಲಸವಷ್ಟೆ ಅವರು ಮಾಡೋದು!
ಮತ್ತೊಬ್ಬನಿಗೆ ಸಂಬಳ ಬೇಕು!
ಇಲ್ಲಿ ಯಾರು ಕೊಡುವರು ?
ನನ್ನ ಪರಿಚಯವೇ ಇಲ್ಲವನಿಗೆ!
ಹೇಗೆ ತಾನೇ ಎತ್ತಬಲ್ಲ ನನ್ನ!!!

ನೆಂಟರು ಬಹಳ ದೂರದಲಿಹರು,
ಪ್ರೀತಿ ಪಾತ್ರರು ಬ್ಯುಸಿಯಾಗಿಹರು!
ಮಕ್ಕಳು ಶಾಲೆಯ ಬಯಲಲಿ ಇಹರು
ಮಗನ ಆಫೀಸು ಮುಚ್ಚೋದು ತಡರಾತ್ರಿ!
ಮಗಳಿಗೆ ಮಗುವಿನ ಕಿರಿಕಿರಿ ಸಾಕು
ಮಗನಿಗೆ  ಪರಿವಾರದ ಮನಗಳ ಕಿರಿಕಿರಿ..

ಹೆಂಡತಿಗೆತ್ತಲು ಆಗದ ನಾನು
ನೋಡುತಲಿದ್ದೆ ಮೇಲಿನ ಬಾನು
ಬಿದ್ದವ ಬೀಳಲಿ ನಾನಿರೆ ಬದುಕು ಸಂತಸ ಸಡಗರ ಬಿಡಬೇಕು ಜಯಕು..

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ