ಶನಿವಾರ, ಸೆಪ್ಟೆಂಬರ್ 22, 2018

482.ಬೇಕಿದೆ

ಬೇಕಿದೆ

ಹೊಡಿ ಬಡಿ ಗುದ್ದು
ಎನ್ನುವವರ ನಡವಲೀಗ
ಶಾಂತಿ ಮಾತು ಬೇಕಿದೆ!
ವಿಲನ್ ಹೀರೋ ಆಗಿಹ
ಸಮಯದಲಿ ನಿಜ ಹೀರೋ ಬೇಕಿದೆ..

ಬಡಿಯುತಿಹ ಮನಗಳ ತಣಿಸೆ
ತಣ್ಣೀರ ಮನವೀಗ ಬೇಕಿದೆ
ಹೊಡೆದಾಟಕೆ ಕುಮ್ಮಕ್ಕು ನೀಡುವವರಿಗೆ ಶಾಂತಿ ಸಹನೆ ಬೇಕಿದೆ.

ಮನದ ಕದವ ಮುಚ್ಚಿದವಗೆ
ಪ್ರೀತಿ ಬೆಳಕ ಉರಿಸ ಬೇಕಿದೆ
ಬದಲಿ ಮುಖವ ಇಟ್ಟವಗೆ
ನೈಜ ಛಾಪು ತೋರ ಬೇಕಿದೆ!

ಭರತಖಂಡ ಒಡೆಯ ಹೊರಟವಗೆ
ಒಗ್ಗಟ್ಟ ಬಲ ತಿಳಿಸ ಬೇಕಿದೆ
ಹಾಲಿನಲ್ಲಿ ಜೇನು ಸೇರಿ ಆದ
ಸವಿಯ ತೋರಬೇಕಿದೆ!!

ವಸ್ತು ಪ್ರೇಮ ಮಿತ್ರ ದ್ರೋಹ
ಇಲ್ಲಿ ತೊಲಗ ಬೇಕಿದೆ
ವಾಸ್ತವದ ಸವಿಯಂಶ
ಬೆಳಕಿಗೆ ಬರಬೇಕಾಗಿದೆ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ