ಆತ್ಮ ಸಂತೋಷಕ್ಕೆ, ತನ್ನ ಹೆಸರು ಮರೆಯದಿರಲು, ಹೊಗಳಿಸಿ ಕೊಳ್ಳಲು, ತನ್ನ ನೋವು-ಕಷ್ಟವ ಮರೆಯಲು, ಯಾರಲ್ಲೂ ಹಂಚಿಕೊಳ್ಳಲಾರದ ಸತ್ಯವ ಹೊರಗೆಡವಲು, ತಮ್ಮ ಒಂಟಿತನವ ದೂರಸರಿಸಲು ಕವಿಗಳು ಕವನ ಬರೆಯುವರು.
ಯಾಕೆ ಓದುವರು
ನಿಜವಾಗಿ ಹೃದಯದಿಂದ ಬರೆಯುವವರು, ತನ್ನ ತುಡಿತಕ್ಕೆ, ಆಲೋಚನೆಗಳಿಗೆ ಬರಹ ರೂಪ ಕೊಟ್ಟು ಇತರರಿಗೂ ತನ್ನ ಆಲೋಚನೆಗಳನ್ನು ಹಂಚ ಬೇಕೆನಿಸುವವರು, ತನ್ನ ಬರವಣಿಗೆಗಳ ಮೂಲಕ ಸಮಾಜವನ್ನು ತಿದ್ದ ಬಯಸುವೆ ಎನುವವರು, ಪೆನ್ನಿನ ಶಕ್ತಿ ಅರಿತವರು, ಪೆನ್ನನ್ನು ಖಡ್ಗಕ್ಕಿಂತಲೂ ಹರಿತವೆಂದು ತಿಳಿದು ಅದನ್ನು ಸರಿಯಾಗಿ ಸಮಾಜವನ್ನು ತಿದ್ದಲು ತುಡಿತವಿರುವ ಮನಗಳ ಜನರು ಬರೆಯುವರು.
ಭಾಷೆಯ ಬಗ್ಗೆ, ಭಾಷಾ ಬೆಳವಣಿಗೆಯ ಬಗ್ಗೆ, ಸಾಹಿತ್ಯದ ಬಗ್ಗೆ, ಕವನ, ಕವಿತೆಗಳ ಬಗ್ಗೆ ಹೃದಯದಿಂದ ಆಸಕ್ತಿಯಿರುವ ಜನರು ಓದುವರು.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ