ಪರಿಸ್ಥಿತಿ
ವಿಪರೀತ ಏರಿದೆ ಭಾರತದಲ್ಲಿ
ವಿದ್ಯಾವಂತರ ಶೇಕಡಾ ಪ್ರಮಾಣ
ಜನ ಸಂಖ್ಯೆ ಏರಿಕೆಯತ್ತ ಪಯಣ!
ಬುದ್ಧಿವಂತಿಕೆಯ ಮನಗಳ ಲಕ್ಷಣ
ಕೋಮುಗಳ ನಡುವಿನ ಘರ್ಷಣ!
ಪರದೇಶದ ಜನರೊಡನೆ ಸಂಬಂಧ
ಪಕ್ಕದ ಮನೆಯವನೊಡನಿಲ್ಲ ಮಾತಂದ
ಜನರ ಮನದೊಳಗ ಕಲ್ಪನೆಯು ಮತಾಂಧ!
ಸ್ವಾರ್ಥ ಬದುಕಲಿ ಹೇಗೆ ಬರುವುದು ಅಂದ?
ತಮ್ಮಷ್ಟಕೆ ಓಡಾಡಲು ಸಣ್ಣ ವಾಹನ,
ಸಮಯಕ್ಕೆ ಬಂದು ಹೋರಡುವುದು ತಕ್ಷಣ
ಮಾತಿಲ್ಲ,ಕತೆಯಿಲ್ಲ ಮೊಬೈಲಲ್ಲೆ ತನುಮನ
ವೀಡಿಯೋ, ಚಾಟ್, ಫೋಟೋಗಳೆ ಜೀವನ!
ವಿಪರೀತ ಸಂಕುಚಿತವು ಪ್ರೀತಿಯ ದಾಹ
ರಾಸಾಯನಿಕಗಳ ಪ್ರಭಾವ ಬೆಳೆದಿದೆ ದೇಹ!
ಪರರ ಒಳಿತಿನ ಬಗೆಗಿಲ್ಲವು ಮೋಹ
ದೇಶಕ್ಕೂ ಮಾಡುವರು ಮಕ್ಕಳೇ ದ್ರೋಹ!
ಮನ ಬೆಳಗದೆ ತಮ್ಮ ಮನೆ ಬೆಳಗದು ಎಂದೂ
ಹೃದಯಕೆ ಹೊಂದಾಣಿಕೆ ಶಿಕ್ಷಣ ಬೇಕಿದೆ ಇಂದು
ಹೋರಾಟ ಹೊಡೆದಾಟ ನಮ್ಮಲ್ಲಿ ಏಕಾಗಿ ಅಲ್ಲಾ?
ಬಂದಲ್ಲಿಗೆ ಒಂದು ದಿನ ಹೋಗಲಿದ್ದೇವೆ ಎಲ್ಲ
@ಪ್ರೇಮ್@
25.12.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ