ಗಝಲ್
ವದನದೊಳಗೆ ವಕ್ರತೆ ಕಾಣಸುತಿದೆ ಪ್ರೀತಿ ಕಳೆದು ಹೋಗಿದೆಯಲ್ಲ ಸಖಿ!
ನಯನದೊಳಗಿನ ಹೊಳಪು ಮಾಸಿದೆ ವಿರಹ ಬಂದು ಬಿಟ್ಟಿದೆಯಲ್ಲ ಸಖಿ!
ಪ್ಯಾರ್ ಮೋಸ ಮಾಡಿ ಓಡಿ ಬೇರೆ ಜಾಗ ಸೇರಿ ನೋವ ಬಿಟ್ಟು ಹೋಗಿದೆ!
ಜಿಂದಗಿ ಮರಳುಗಾಡಿನಂತೆ ಬರಡಾಗಿ ಒಣಗಿ ಹೋಗಿದೆಯಲ್ಲ ಸಖಿ!
ನವಿರಾದ ಕನಸುಗಳ ಪೋಣಿಸಿ ನನ್ನೆದೆ ದಾರದಲಿ ಮಾಲೆ ಕಟ್ಟಿ ಕೊಟ್ಟಿದ್ದೆ ಅಂದು!
ರವಿ ಚಂದ್ರ ತಾರೆಗಳ ಆಗಸದಿ ಕಿತ್ತುಹಾಕಿ ನೇತಾಡಿಸಿದಂತೆ ಮಾಡಿರುವೆಯಲ್ಲ ಸಖಿ!
ಬಯಲು ಸೀಮೆಯಲಿ ಅರಳಿದ ಹಳದಿ ಸೂರ್ಯಕಾಂತಿಯುಂತೆ ಬಂದೆ ಬಾಳಲಿ!
ಬಯಕೆ ತೋರಿಸಿ ಮನದಿ ಬದುಕ ಮಂದಿರಕೆ ಬೆಂಕಿ ಇಟ್ಟು ದೂರಾದೆಯಲ್ಲ ಸಖಿ!
ಎಳೆ ಚಿಗುರ ಆತುರದಂದದಿ ಉತ್ಸಾಹದ ಚಿಲುಮೆ ಚಿಮ್ಮಿಸಿದ್ದೆ ನೀನಂದು!
ತುತ್ತ ತುದಿಯ ಗೋಪುರದಿಂದ ಎತ್ತಿ ಕೆಳಗೆ ಹಾಕಿದಂದದಿ ಬೀಳಿಸಿದೆಯಲ್ಲ ಸಖಿ!
ಹಾಳು ಹಂಪೆಯ ತೆರದಿ ಬಾಳು ಬೆಳಗಲಿಲ್ಲವು ಈ ಜಗದೊಳಗಿನ ಬಾಂಧವ್ಯದಲಿ!
ವೇದನೆಯ ಕಾವಿನಲಿ ದೇಹ ಹೂವಿನಂತೆ ಮುದುಡಿ ಬಾಡಿ ಬಳಲಿದೆಯಲ್ಲ ಸಖಿ!
ಪ್ರೇಮವೇ ಪ್ರತಿ ಕ್ಷಣದ ಉಸಿರೆಂಬುದ ನಂಬಿ ನಡೆಯುವವನ ಜಾಡಿಸಿಬಿಟ್ಟೆ!
ಮರಕಡಿದು ಮಣ್ಣಿಗೆ ಗೊಬ್ಬರವೂ ಆಗದಂತೆ ಉರುಳಿಸಿ ಕಡಿದುಬಿಟ್ಟೆಯಲ್ಲ ಸಖಿ!
@ಪ್ರೇಮ್@
28.11.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ