ಬದುಕು ಚೆನ್ನಾಗಿರಲಿ..
ಗೆಳೆಯರ ಬಳಗವು
ಸೆಳೆಯುತಲಿರಲಿ
ಎಳವೆಯ ಮನದಲಿ
ಮೊಳೆತಂತಿರಲಿ..
ಕೊಳೆ ಕಸಗಳು ಬದುಕಲಿ
ದೂರವೆ ಸಾಗಲಿ
ಸರಳತೆ ಮಾತಲಿ
ಇಣುಕುತಲಿರಲಿ..
ತಳುಕದು ತಲುಪದೆ
ತಣ್ಣಗೆ ಇರಲಿ
ಬಳಪದಿ ಕಲಿತಿಹ
ಗುಣ ನೆನಪಿರಲಿ..
ದಳದಲಿರುವ ಬಣ್ಣದ
ಪುಷ್ಪವೆ ಬರಲಿ
ತಳದಲಿ ಆದರೂ
ಮುರುಟದೆ ಇರಲಿ..
ಕರುಳಿನ ಕೂಗಿಗೂ
ಕರುಣೆಯು ಬರಲಿ
ಛಲದಲಿ ಬದುಕುವ
ಪ್ರೇರಣೆ ಇರಲಿ...
@ಪ್ರೇಮ್@
25.11.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ