ಬೆರಗಾದ ಬೆರಗು
ಬರದಿಂದ ತತ್ತರಿಸಿದ ಬಡಕಲಾದ
ಬರಡು ಭೂಮಿಯಂತೆ ಬಡಕಲಾದ
ಬರದ ನಾಡಿನಲಿ ನೀರು ಕಾಣದೆ ಬೆಳೆದ
ಬೆಂಬಿಡದೆ ಬೆಳೆಯಲು ಬಿಡದಿಹ ಜಾಗದಲಿಹ
ಬಿಸುಟ, ಬಹಳ ಬಟಾಬಯಲಾದ
ಬೋಳು ಬಿಸಿ ಬಿಸಿಲಲಿ ಬೆಳೆಯದೆ ಬೆಳೆದ
ಬಸಿರಿಂದ ಬಂದಾಗಲೇ ಒಗೆದಂತಿಹ
ಬೆವರು ಸುರಿಸಿ ನೊಂದು ಬೆಂದ
ಬೇಸರದಿ ಬೇನೆಯ ಅನುಭವಿಸಿ ನೊಂದು ಬೆಂದ
ಭೀಕರ ಪ್ರವಾಹಕೆ ತುತ್ತಾದ
ಬಿರುಬಿಸಿಲ ನಡುವೆ ಬಿರುಸಾಗಿ ಧೂಳುಂಡ
ಭೋರ್ಗರೆವ ಜಲಪಾತದಿ ನೀರಡಿ ಸಿಲುಕಿದ
ಬೊಬ್ಬಿಟ್ಟು ಯಾರೂ ಬರದ ಪರಿಸ್ಥಿತಿಯಲಿಹ
ಬಹಳವೇ ಕಾದು ಬೆಂಗಾವಲಿಲ್ಲದೆ ಬದುಕಿದ
ಬೇಸರದಿ ಕುದಿದು ಬೇಡಿಕೆಯೇ ಇಲ್ಲದ
ಬವಣೆಯೇ ಮೈವೆತ್ತ ಭವಸಾಗರ ದಾಟದ
ಬಗಲಿನ ಚೀಲಕೂ ಗತಿಯಿಲ್ಲದೆ ತತ್ತರಿಸಿದ
ಬೋಧನೆಯ ಕೇಳದೆ ಬೋಳಾದ ಮರದಂತಿಹ
ಬದನೆಕಾಯಿ ಸುಟ್ಟಂತೆ ಕರಕಲಾದ ಬದುಕನು
ಬೆರಗಾಯ್ತು ನೋಡಿ ಬೇಸರದ ಮುಖವನು.
ನಗುವ ಕಲಿ ನಗುತ ಬಾಳು ನಗುವ ಹಂಚು
ಬಾಳು ಮೂರೇ ದಿನ ಹೋಗಲುಂಟು ತಾಳು!
@ಪ್ರೇಮ್@
23.12.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ