ನ್ಯಾನೋ ಕತೆ
ಅವನ್ಯಾರೋ
ನನ್ನ ಬಾಳು ಬರಿದಾಗಿತ್ತು. ಅವನು ಬಂದನು. ಬಾಳ ಸ್ನೇಹಿತ ಕಿರಣ್ ನನ್ನು ಅದಾಗಲೇ ಕಳೆದುಕೊಂಡು ಆಗಿತ್ತು. ಬೇರೆ ಯಾರನ್ನೂ ಅವನ ಸ್ಥಾನದಲ್ಲಿ ಕುಳ್ಳಿರಿಸಲು ಮನಸ್ಸು ಒಪ್ಪಲಿಲ್ಲ. ಪವನ್ ಕಿರಣ್ ನಂತೆ ಇರಲಿಲ್ಲ. ಬೇರೆಯೇ ಸ್ವಭಾವ. ತುಂಬಾ ಇಷ್ಟವಾದ. ಸ್ನೇಹಿತನಾಗಿ ಸ್ವೀಕರಿಸಿದೆ. ಕಷ್ಟ ಸುಖ ಹಂಚಿಕೊಂಡೆವು. ಪರಸ್ಪರ ಸಹಕಾರ, ಸಹಾಯ, ಮಿಡಿಯುವ ಹೃದಯ ಸ್ನೇಹಿತರಿಂದ ಅಲ್ಲದೆ ಮತ್ತೆ ಯಾರಿಂದ ಸಾಧ್ಯ?
@ಪ್ರೇಮ್@
14.04.2021
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ