ಶನಿವಾರ, ಏಪ್ರಿಲ್ 10, 2021

ಗೆಳೆಯರೆಂದರೆ..

ಗೆಳೆಯರೆಂದರೆ

ಗೆಳೆಯರೆಂದರೆ ಹೀಗೆಯೇ...
ಸದಾ ಹರಟೆ..ನಗು..ಕುಹಕ..ಸಕಲ..
ಒಂದಷ್ಟು ಸಲಹೆ..ಸಾಂತ್ವನ..ಜಗಳ..
ಯಾರನ್ನೂ ಕೇಳದ ಹಾಗೆ ಸಲುಗೆ..
ಪ್ರೀತಿಯ ಅಪ್ಪುಗೆ..ಮುಖದಿ ಕಿರು ನಗೆ..

ಗೆಳೆಯರೆಂದರೆ ಹೀಗೆಯೇ..
ಮಾತು ಮುತ್ತಿನ ಹಾಗೆ..
ಕೆಲಸ ಪುಟವಿಟ್ಟ ಹಾಗೆ..
ಸೋಮಾರಿತನದ ಪರಮಾವಧಿ
ಅಲ್ಲೂ ಕೆಲ ಕಾಲ ನೆಮ್ಮದಿ..

ಗೆಳೆಯರೆಂದರೆ ಹಾಗೆಯೇ..
ನಿದ್ದೆಯಲ್ಲೂ ನೆನೆಯುವ ಹಾಗೆ
ಅರ್ಧ ರಾತ್ರಿಯಲಿ ಎಬ್ಬಿಸಿದ ಬೇಗೆ..
ವಾರ್ಷಿಕೋತ್ಸವದ ಶುಭಾಶಯ ಹೇಳುವಂತೆ
ಹುಟ್ಟು ಹಬ್ಬದ ದಿನ ಮುಖಕ್ಕೆ ಕೇಕ್ ಮೆತ್ತುವಂತೆ
'ಬಡ್ಡೆ ಕಿಕ್' ಎಂದು ಸರಿಯಾಗಿ ಒದೆಯುವಂತೆ..

ಗೆಳೆಯರೆಂದರೆ ಹಾಗೆಯೇ..
ಬಟ್ಟೆ ಊಟಗಳಲಿ ಬೇಧವಿಲ್ಲದ ಹಾಗೆ
ತಟ್ಟೆ ಹಿಡಿದರೂ ಒಟ್ಟಿಗಿರುವ ಹಾಗೆ
ಕಷ್ಟ ಸುಖಗಳಲಿ ಕೈ ಹಿಡಿವ ಹಾಗೆ
ನಷ್ಟವಾದರೂ ಭರಿಸಿ ಸರಿದೂಗಿಸುವ ಹಾಗೆ..

ಗೆಳೆಯರೆಂದರೆ ಹಾಗೆಯೇ..
ಮನದ ಭಾವನೆಗಳ ಅರಿತವರು
ಬನದಲೂ ಜೊತೆಯಾಗಿ ಬರುವವರು
ಕನಸ ಸಾಮ್ರಾಜ್ಯದಲ್ಲಿ ಜೋಡಿಯಾದವರು
ಮನಸಿಟ್ಟು ಸಹಾಯಕ್ಕೆ ಬಂದವರು
ಜತನದಿಂದ ಎಲ್ಲವ ಕಕ್ಕಿಸಿದವರು!

ಗೆಳೆಯರೆಂದರೆ ಹಾಗೆಯೇ..
ನೂರು ವರುಷವೂ ಮರೆಯದವರು
ನೆನಪುಗಳ ಆಗಾಗ ಕೆದಕುವವರು
ಕೋಳಿ ಹಾಗೆ ಮನವ ಒಕ್ಕುವವರು
ಕಷ್ಟ ಸುಖವ ಹಂಚಿಕೊಂಡವರು
ದುಖದಲ್ಲು ನಗೆ ಉಕ್ಕಿಸುವವವರು
ಕೈಯ ಹಿಡಿದು ಮೇಲೆ ಎತ್ತುವವರು..

ಗೆಳೆಯರೆಂದರೆ ಹಾಗೆಯೇ
ಕೇಳದೆಯೇ ಬಳಸುವವರು
ಹೇಳದೆಯೇ ಅರಿತು ಕೊಳ್ಳುವವರು
ನೀರ ನಡುವೆ ತಂದು ನಿಲ್ಲಿಸುವವರು
ಶಕ್ತಿ ಮೀರಿ ಕೈ ಹಿಡಿದು ನಡೆಸುವವರು
ಬದುಕಿನ ಅವಿಭಾಜ್ಯ ಅಂಗ ಇವರು...

ಗೆಳೆಯರೆಂದರೆ ಹಾಗೆಯೇ..
ಜಾತಿ ಮತವ ಅರಿಯದವರು
ಹೃದಯ ಗುಡಿಯಲಿ ನೆಲೆಸಿದವರು
ಮನ ಮಂದಿರದಿ ಆಡುವವರು
ಕಣ ಕಣದಲು ಅರಿತು ಬೆರೆತವರು
ಹಣದಲು ಸಹಾಯ ಮಾಡುವವರು

ಗೆಳೆಯರೆಂದರೆ ಹಾಗೆಯೇ...
ನಮ್ಮ ತಿನಿಸು ಸವಿಯುವವರು
ಮೋಜು ಮಸ್ತಿ ಮಾಡುವವರು
ರಕ್ತ ಸಂಬಂಧಿ ಅಲ್ಲದವರು
ನಮ್ಮ ಬಿಟ್ಟಿರಲಾರದವರು...
@ಪ್ರೇಮ್@
11.04 2021






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ