ಸುನೀಲನ ಕಾರು
ಅಂದು ಸುನಿಲನ ಸಡಗರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಕೊರೋನ ಎಂಬ ಕಾಣದ ವೈರಸ್ ನಿಂದಾಗಿ ಎಲ್ಲರೂ ಸಾಯುವ ಶೀತ ಜ್ವರ ಬರುತ್ತದೆ ಎಂದು ಟಿವಿಯಲ್ಲಿ ಅದನ್ನೇ ತೋರಿಸುತ್ತಿದ್ದರು. ತಕ್ಷಣ ಶಾಲೆಗೆಲ್ಲ ರಜೆ ಘೋಷಣೆ ಮಾಡಿದರು. ಬಳಿಕ ಪರೀಕ್ಷೆ ಇಲ್ಲದೇನೆ ಎಲ್ಲ ಮಕ್ಕಳೂ ಪಾಸ್ ಎಂದು ಮುಂದಿನ ತರಗತಿಯ ಪುಸ್ತಕ, ಬಟ್ಟೆ, ಅಕ್ಕಿ, ಬೇಳೆ, ಹಾಲಿನ ಪುಡಿ ಕೊಟ್ಟರು. ಮುಂದೆ ನಮಗೆ ಶಾಲೆಗೆ ಹೋಗಲಿಕ್ಕೆ ಸಿಗಲೇ ಇಲ್ಲ. ಅದುವರೆಗೂ ರಜೆ ಸಿಕ್ಕಿದರೆ ಖುಷಿ ಪಡುತ್ತಿದ್ದ ನಮಗೆ ಆಡಿ ಆಡಿ ಬೇಸರವಾಯಿತು. ಅಜ್ಜಿ ಮನೆ, ಚಿಕ್ಕಮ್ಮನ ಮನೆಗೆ, ಮಾವನ ಮನೆಗೆ, ಜಾತ್ರೆಗೆ ಎಲ್ಲಾ ಹೋಗಿ ಬಂದು ಆಯಿತು.
ಆಗ ಶಿಕ್ಷಕರೇ ನಮ್ಮ ಮನೆಗೆ ಬರಲಾರಂಭಿಸಿದರು. ಸ್ವಲ್ಪ ಸಂತಾಸವಾದರೂ ಬೇಸರವೂ ಆಯಿತು. ಶಾಲೆಗೆ ಹೋಗುವ, ತರಗತಿಯ ಮಜವೇ ಬೇರೆ!ಎಲ್ಲವನ್ನೂ ಮಿಸ್ ಮಾಡಿಕೊಳ್ಳ ತೊಡಗಿದೆವು.
ಇದ್ದಕ್ಕಿದ್ದಂತೆ ಅರ್ಧ ದಿನ ಶಾಲೆ ಎಂಬ ವಿಷಯ ಕೇಳಿ ಸಂತಸವಾದರೂ ಇದುವರೆಗೂ ಶಾಲೆಯಿಲ್ಲಾಂತ ತಡವಾಗಿ ಎದ್ದು ಈಗ ಬೇಗ ಏಳಲು ಬೇಸರವೂ ಆಯಿತು. ಅಮ್ಮ ಮಾಡಿ ಕೊಟ್ಟದ್ದನ್ನು ತಿಂದು, ಟಿವಿ, ಮೊಬೈಲ್ ನೋಡಿ ಸೋಮಾರಿತನವನ್ನು ರಾಶಿ ಹಾಕಿಕೊಂಡು ಕುಳಿತಿದ್ದ ನಮಗೆ ಉದಾಸೀನ ಪ್ರಾರಂಭವಾಯಿತು. ಅದರಲ್ಲೂ ಹಾಜರಿ ಕಡ್ಡಾಯ ಇಲ್ಲ ಎಂದಾಗ "ವಾರಕ್ಕೆ ಎರಡೊ ಮೂರೋ ದಿನ ಹೋಗೋಣ" ಎಂದು ನಾವೆಲ್ಲ ಮಾತಾಡಿಕೊಂಡು ಆಯಿತು. "ನಾವು ಶಾಲೆಗೆ ಹೋಗದೆ ಇದ್ದರೆ ಟೀಚರನ್ನು ನಮ್ಮಮನೆಗೆಲ್ಲ ಕಳಿಸುತ್ತಾರೆ. ಪಾಪ ಅವರ ಕಷ್ಟ. ನೋಡಲು ಆಗದು. ಹಾಗಾಗಿ ನಾವೇ ಹೋಗೋಣ" ಎಂದು ಗೆಳೆಯರಿಗೆ ಎಲ್ಲರಿಗೂ ಹೇಳಿದಾಗ ಅವರು ಒಪ್ಪಿದರೂ ಮಂಜುನಾಥ ಮಾತ್ರ ಒಪ್ಪಲೆ ಇಲ್ಲ. "ಬೇಕಾದರೆ ಟೀಚರ್ ನಮ್ಮಮನೆಗೇ ದಿನಾ ಬಂದು ಹೇಳಿ ಕೊಡಲಿ. ನಾನು ಶಾಲೆಗೆ ಹೋಗುವುದಿಲ್ಲ. ನನ್ನ ನಾಯಿ ಮರಿ, ಕೋಳಿ, ಬೆಕ್ಕು ಇವುಗಳನ್ನೆಲ್ಲ ನೋಡಿ ಕೊಳ್ಳೋರು ಯಾರು? ನನ್ನ ಮೊಬೈಲ್ ಆಟದಲ್ಲಿ 5000 ಸ್ಕೋರ್ ಆಗಬೇಕಿದೆ. ಶಾಲೆ ಬೋರ್. ಅಲ್ಲಿ ಏನಿದೆ? ಪಾಠ, ಪರೀಕ್ಷೆ, ಮನೆ ಕೆಲಸ, ಪ್ರಾಜೆಕ್ಟ್, ಗುಡಿಸುವುದು, ಕ್ಲೀನ್ ಮಾಡುವುದು ಅಷ್ಟೆ. ಅದು ಯಾರಿಗೆ ಬೇಕು.." ಎಂದು ಮನೆಯಲ್ಲೇ ಉಳಿದ. ಟೀಚರ್ ಅವನ ಮನೆಗೆ ಬಂದು ಬಂದು ಬೇಸರವಾಗಿ ಪೊಲೀಸ್ ಗೆ ಹೇಳಿ ಸುಮ್ಮನಾದರು.
ನಾವೆಲ್ಲ ಶಾಲೆಗೆ ದಿನ ಬಿಟ್ಟು ದಿನ ಹೋಗಿ ಕಲಿಯಲು ತೊಡಗಿರುವಾಗ ಮತ್ತೆ ಕೊರೋನ ಸೋಂಕು ಜಾಸ್ತಿ ಆಗುತ್ತಿದೆ ಎಂದು ರಜೆ ಕೊಟ್ಟರು. ಅಂತೂ ಇಂತೂ ಗೆಳೆಯರನ್ನು ಕರೆಯಲಾಗಿದೆ ಸೇರಲಾಗದೆ ಬೇಜಾರಗಿದ್ದ. ನಮಗೆ ಹುಟ್ಟು ಹಬ್ಬ ಹೊಸ ಹುರುಪು ಕೊಟ್ಟಿತು.
ಎಲ್ಲ ಮಕ್ಕಳೂ, ಗೆಳೆಯರೂ, ನೆಂಟರನ್ನು ಕರೆಯಲಾಯಿತು. ಹುಟ್ಟು ಹಬ್ಬದ ದಿನ ಮಾಸ್ಕ್, ಸ್ಯಾನಿಟೈಸರ್ ಇಡಲಾಯಿತು. ಮನೆಯ ಹೊರಗೆ ಅಂಗಳಕ್ಕೆ ಪೆಂಡಾಲ್ ಹಾಕಲಾಯಿತು. ದೊಡ್ಡ ಕೇಕ್ ತಂದು ದೀಪ ಹಚ್ಚಿ ಕತ್ತರಿಸಿ ಆಯಿತು. ಬಂದವರೆಲ್ಲ ಬೇರೆ ಬೇರೆ ಗಿಫ್ಟ್ ತಂದಿದ್ದರು. ಅದರಲ್ಲಿ ಆಟದ ಸಾಮನುಗಳಾದ ಜೆಸಿಬಿ, ಇಟ್ಯಾಚಿ, ಲಾರಿ, ಟಿಪರ್, ಬಟ್ಟೆ, ಬೆಲ್ಟ್ ಹೀಗೆ ಅನೇಕ ವಸ್ತುಗಳು ಇದ್ದವು. ಅದರಲ್ಲಿ ಅವನ ದುಬೈ ಅಂಕಲ್ ಸತೀಶ್ ತಂದ ಕಾರು ಅವನ ಗಮನ ಸೆಳೆಯಿತು. ಪುಟ್ಟ ಕಾರು. ಅದನ್ನು ತೋರಿಸಿ ಅಂಕಲ್ ಹೇಳಿದರು ಸುನೀಲ್ 123 ಎಂದರೆ ಈ ಕಾರು ದೊಡ್ಡದಾಗುವುದು. ಮತ್ತೆ ಸುನೀಲ್ 123 ಗೋ ಎಂದರೆ ಹೋಗುವುದು. ಸುನೀಲ್123 ಸ್ಟಾಪ್ ಎಂದರೆ ನಿಲ್ಲುವುದು....ಹೀಗೆ. ಎಲ್ಲ ಕೇಳಿದ ಬಳಿಕ ಪ್ರಯೋಗ ಮಾಡಿ, ಅವನಿಗೆ ತೋರಿಸಿ ಸ್ವಲ್ಪ ದೂರ ಕರೆದುಕೊಂಡು ಹೋದರು. ಆದರೆ ಅಣ್ಣ ಅಥವಾ ಅಪ್ಪ ಜೊತೆಯಲ್ಲಿ ಇದ್ದರೆ ಮಾತ್ರ ಅದು ಓದುವುದು ಎಂದರು. ತನ್ನ ಗೆಳೆಯರನ್ನೆಲ್ಲ ಕೂರಿಸಿ ಪ್ರಯೋಗಿಸಿದಾಗ ಅದು ಹೊರಡದೆ ಅಣ್ಣ ಅಥವಾ ಅಪ್ಪ ಇದ್ದಾಗ ಮಾತ್ರ ಹೋಗುತ್ತಿತ್ತು.
ಶಾಲೆಗೆ ರಜೆಯಾದ ಕಾರಣ ಮನೆಯವರೆಲ್ಲ ಸೇರಿ ಬೀಚ್ ಗೆ ಹೋಗೋಣ ಎಂದುಕೊಂಡರು. ಆದರೆ ಮತ್ತೆ ಲಾಕ್ ಡೌನ್, ಸೀಲ್ ಡೌನ್ ಘೋಷಣೆ ಆದ ಕಾರಣ ಎಲ್ಲರೂ ಮನೆಯಲ್ಲೇ ಉಳಿಯಬೇಕಾಯಿತು. ಸುನೀಲನ ಕಾರು ಮನೆಗೆ ಸಾಮಾನು ತರಲಷ್ಟೇ ಸೀಮಿತವಾಯಿತು.
@ಪ್ರೇಮ್@
18.04.2021
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ