ರಾಗಿ
ರಾಯರ ರಾಗಿ ರಾಜಗು ಬೇಕು
ರಾಯತ ಜೊತೆಗೆ ಇದ್ದರೆ ಸಾಕು
ತಿಂದವ ನಿರೋಗಿ ದೂರವು ರೋಗ
ಉಂಡವ ಗಟ್ಟಿಗ ಬಹಳ ಸುಯೋಗ
ಯೋಗ್ಯ ಭೋಗ್ಯರಾಗಿ ಎನುವ ರಾಗಿ
ಪುರಂದರ ವಿಠಲನು ಸೇವಿಪ ರಾಗಿ
ದಾಸ ಶ್ರೇಷ್ಠರು ಕಂಡ ಉಂಡ ರಾಗಿ
ರಾಮ ಧಾನ್ಯವೆಂಬ ಚರಿತೆಯ ರಾಗಿ
ಕಪ್ಪು ಕೆಂಪಿನ ದುಂಡಗಿನ ಚಿಕ್ಕ ರಾಗಿ
ತಿನ್ನಲು ಕಾಣುವರು ಬಲು ಚಿಕ್ಕವರಾಗಿ
ರುಚಿಯ ಬೆರೆಸಿ ಮುದ್ದೆಯ ಉಣ್ಣಲು
ಶುಚಿಯಲಿ ಬೆಳೆವರು ಮುದ್ದಿನ ಮಕ್ಕಳು
ನಮ್ಮಯ ನೆಲದಲಿ ಬೆಳೆಯುವ ರಾಗಿ
ಮುದ್ದೆ ರೊಟ್ಟಿ ದೋಸೆಗೆ ಬೇಕಾದ್ದು ರಾಗಿ
ಮಣ್ಣಿ ಹಲ್ವ ಅಂಬುಲಿಗೂ ಇದುವೇ ರಾಗಿ
ಹೆಮ್ಮೆಯ ರೈತನ ಆಹಾರ ರಾಗಿ
ಗಟ್ಟಿಗನಾಗುವೆ ತಿನ್ನಲು ರಾಗಿ
ಉಪಯೋಗಿಸಿ ನೋಡು ಆಗುವೆ ನಿರೋಗಿ
ಶಕ್ತಿವಂತರಿಗೆ ಬೇಕಿದು ಆಹಾರವಾಗಿ
ತಾಕತ್ತು ನೋಡು ತಿಂದವ ನಿತ್ಯ ಯೋಗಿ
@ಹನಿಬಿಂದು@
24.03.2025
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ