ಶಿಶು ಗೀತೆ - ಊಟ
ಅಮ್ಮನು ಮಾಡಿದ ಊಟವು ಬೇಡ
ಪಿಜ್ಜಾ ಬರ್ಗರ್ ಬೇಕಮ್ಮ
ತಮ್ಮನು ಹೇಳಿದ ನಿನ್ನಯ ಊಟಕೆ
ನೂಡಲ್ಸ್ ರುಚಿಯೂ ಇಲ್ಲಮ್ಮ
ಮಕ್ಕಳೇ ಕೇಳಿರಿ ತಿನ್ನಲು ಬಾರದು
ಹೊರಗಿನ ರುಚಿಕರ ಊಟವನು
ವಿಷವನು ಸುರಿದು ತಂದಿಹರದಕೆ
ಒಳ್ಳೆಯದಲ್ಲ ದೇಹಕ್ಕೆ
ಯಾರದು ಹಾಗೆ ಮಕ್ಕಳು ಎಂದರೆ
ಪ್ರಾಣವೇ ಅಲ್ಲವೇ ಎಲ್ಲರಿಗೆ
ರುಚಿಕರ ಊಟವ ಮಾಡಿಹರೆಮಗೆ
ಸುಳ್ಳನು ಹೇಳಲು ಬೇಡಮ್ಮ
ಮಕ್ಕಳೇ ಕೇಳಿರಿ ದುಡ್ಡಿನ ಆಸೆಗೆ
ರುಚಿಕರ ರಾಸಾಯನಿಕ ಸುರಿದಿಹರು
ಮಕ್ಕಳು ಹಿರಿಯರು ಎಲ್ಲರಿಗೂನು
ಹೃದಯದ ತೊಂದರೆ ತಂದಿಹರು
ಕರಗದು ಊಟ ಹೊಟ್ಟೆಯ ನೋವು
ಕ್ಯಾನ್ಸರ್ ಬರುವುದು ಕೇಳಿಲ್ಲಿ
ಬೇಡದ ಎಣ್ಣೆಯ ಬಳಸುತ ಕರಿದು
ಆರೋಗ್ಯ ಹಾಳು ಕಾಣಿಲ್ಲಿ
ಬೇಡವೇ ಬೇಡ ತಂಪು ಪಾನೀಯ
ಸಕ್ಕರೆ ಅಂಶ ಹೆಚ್ಚಲ್ಲಿ
ಕರಿದ ಪದಾರ್ಥದಿ ಕೊಬ್ಬಿನ ಅಂಶ
ದಡೂತಿ ದೇಹವು ನೋಡಲ್ಲಿ
ಅಮ್ಮನ ಕೈ ರುಚಿ ನಿರ್ಮಲ ಅಡುಗೆ
ಮಗುವೇ ಹೇಳು ತಿಂದಿಲ್ಲಿ
ಕೊಳಕು ನೀರು ಅಶುದ್ಧ ಆಹಾರ
ಹೊರಗಡೆ ನೀನು ಹೋದಲ್ಲಿ
ರೆಡಿಮೇಡ್ ಊಟ ಒಳ್ಳೆಯದಲ್ಲ
ಬಿಸಿ ಬಿಸಿ ತಿನ್ನು ಉತ್ತಮವು
ಮನೆಯಲೇ ಊಟ ಆರೋಗ್ಯ ಗುಟ್ಟು
ಹೊರಗಡೆ ಎಲ್ಲಾ ಹೇಳಿಲ್ಲಿ
@ಹನಿಬಿಂದು@
14.03.2025
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ