ಶುಕ್ರವಾರ, ಮಾರ್ಚ್ 14, 2025

ಏಕಿಷ್ಟು ಹೃದಯ ಸ್ತಂಭನ

ಏಕಿಷ್ಟು ಹೃದಯ ಸ್ಥಂಬನಗಳು?

   ಹೌದು, ಇತ್ತೀಚೆಗೆ ಹಲವಾರು ಜನರು ನಮ್ಮ ಕಣ್ಣೆದುರೇ ಇವತ್ತು ಇದ್ದವರು ನಾಳೆ ಹೃದಯ ಸ್ಥಂಭನದಿಂದ ಈ ಲೋಕ ತ್ಯಜಿಸಿದ ವಾರ್ತೆಗಳನ್ನು ಕೇಳಿ ಮನ ನೊಂದು ಹೋಗುತ್ತದೆ. ಇದಕ್ಕೆ ಕೆಲವರು ಕೋವಿಡ್ ಇಂಜೆಕ್ಷನ್ ಪಡೆದ ಬಳಿಕ ಹೀಗೆ ಆಗುತ್ತಿದೆ ಎನ್ನುತ್ತಾರೆ. ಸರಿಯೋ ತಪ್ಪೋ ತಿಳಿಯದು. ಅದರ ಸೈಡ್ ಎಫೆಕ್ಟ್ ಏನಾದರೂ ಹಾಗೆ ಇದೆಯೇ ಎಂದು ವೈದ್ಯರೇ ಹೇಳಬೇಕಷ್ಟೇ. 
   ಆದರೆ ವೈಜ್ಞಾನಿಕ ದೃಷ್ಟಿಯಲ್ಲಿ, ಸರ್ವೇ ಸಾಮಾನ್ಯ ಮನುಷ್ಯರಾಗಿ ನಾವು ನಿತ್ಯ ಜೀವನವನ್ನು ಗಮನಿಸಿದಾಗ ಆತ ಆಡುತ್ತಾ ಇರುವ ಮಗು ಆಟದ ಮೈದಾನದಲ್ಲಿಯು, ಓದುತ್ತಿದ್ದ ಮಗು ತರಗತಿಯಲ್ಲಿಯು ಹೀಗೆ ಆದಾಗ ಮಕ್ಕಳು ಕೋವಿಡ್ ಚುಚ್ಚುಮದ್ದು ಪಡೆದಿರಲಿಲ್ಲ ತಾನೇ? ಮತ್ತೇಕೆ ಹಾಗಾಯಿತು. ವಿಮರ್ಶೆ ಬಂದು ಆಹಾರದಲ್ಲಿ ನಿಲ್ಲುತ್ತದೆ. 
    ಪೋಷಕರು ತಮಗೆ ಸುಲಭವಾಗಲಿ ಎಂದು ಮ್ಯಾಗಿ ನೂಡಲ್ಸ್, ಪಾಸ್ತಾ, ಟೇಸ್ಟ್ ಪೌಡರ್ ಅಡುಗೆಯಲ್ಲಿ ಬಳಸುವುದು ಸರ್ವೇ ಸಾಮಾನ್ಯ. ಹೊರಗೆ ಹೋದಲ್ಲಿ ಗೋಬಿ ಮಂಚೂರಿ, ಚುರುಮುರಿ, ಪಾನಿ ಪೂರಿ, ಮಸಾಲ ಪೂರಿ ಎಲ್ಲವನ್ನೂ ಹಿರಿಯರು ಮಾತ್ರವಲ್ಲದೆ ಮಕ್ಕಳು ಕೂಡಾ ತಮ್ಮ ಹೊಟ್ಟೆಯ ಒಳಗೆ ಸೇರಿಸುತ್ತಾ ಹೋಗುವ ಕಾರ್ಯ ಸದ್ದಿಲ್ಲದೆ ನಿರಂತರವಾಗಿ ನಡೆದೇ ಇದೆ. ಇನ್ನು ಸಂಜೆ ಮನೆಗೆ ಬರುವಾಗ ಪೋಷಕರು, ಬಂಧುಗಳು ಗಾಳಿ ತುಂಬಿದ ಲಕೋಟೆ ಒಳಗಿರುವ ಬಟಾಟೆ ಚಿಪ್ಸ್ ಅನ್ನು ತಂದು ಕೊಡುತ್ತಾರೆ. ಚೀಪ್ ಅಂಡ್ ಬೆಸ್ಟ್, ಟೇಸ್ಟಿ. ಮಕ್ಕಳು ಖುಷಿಯಿಂದ ತಿನ್ನುತ್ತಾರೆ. ಇನ್ನು ಬಣ್ಣ ಬಣ್ಣದ ತಂಪು, ಸಿಹಿ ಪಾನೀಯ ಸದ್ದಿಲ್ಲದೆ ಮಕ್ಕಳ ಹಿರಿಯರ ಹೊಟ್ಟೆ ಸೇರುತ್ತಿದೆ. ಈ ಎಲ್ಲಾ ಆಹಾರ ವಸ್ತುಗಳಲ್ಲಿ ಬಳಸುವ ಬಣ್ಣಗಳು, ಪ್ರಿಸರ್ವೇಟಿವ್ಸ್, ಎಣ್ಣೆ ಇವು ನಮ್ಮ ರಕ್ತನಾಳಗಳಲ್ಲಿ ಸರಿಯಾಗಿ ಸಂಚರಿಸಲು ಸಾಧ್ಯವಾಗದ ರಾಸಾಯನಿಕಗಳನ್ನು  ಒಳಗೊಂಡಿದ್ದರೆ ಹಾಗಾಗುತ್ತದೆ ಅಲ್ಲವೇ? 
ತಿಳಿದವರು "ಊಟ ಬಲ್ಲವನಿಗೆ ರೋಗ ಇಲ್ಲ" ಎಂದಿದ್ದಾರೆ. ನಮ್ಮ ಹಾಗೂ ಮಕ್ಕಳ ಊಟ, ತಿಂಡಿಯ ಬಗ್ಗೆ ಕಾಳಜಿ ವಹಿಸೋಣ. ಹೊರಗಿನ ಆಹಾರ ತಡೆಯೋಣ. ನೀವೇನಂತೀರಿ?
@ಹನಿಬಿಂದು@
17.02.2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ