ಇವಳೊಬ್ಬಳೇ ಹೆಣ್ಣೇ ಕಾಮುಕರ ಅಟ್ಟಹಾಸಕ್ಕೆ ಬಲಿಯಾದವರಲ್ಲಿ ಕಾಣುತ್ತಿರುವುದು? ಎಲ್ಲಾ ಈ ರೀತಿಯ ಹುಡುಗಿಯರ ಅತ್ಯಾಚಾರ ಮತ್ತು ಕೊಲೆಯ ಹಿಂದೆ ಇರುವುದು ಕಾಮುಕರ ಹೇಯ ಕೃತ್ಯ ಮತ್ತು ಕಾಮಾಂಧತೆ. ಮಧ್ಯಮವರ್ಗದ ಹೆಣ್ಣು ಮಕ್ಕಳೇ ಇವರಿಗೆ ಟಾರ್ಗೆಟ್. ಏಕೆಂದರೆ ಓಡಾಡಲು ಅವರ ಬಳಿ ಕಾರುಗಳಿಲ್ಲ, ನಡೆದು ಮನೆ ತಲುಪಬೇಕು. ಒಟ್ಟಿನಲ್ಲಿ ಕಾಮುಕರ ಅತ್ಯಾಚಾರ. ಕೊಲೆ ದರ್ಪ ಮೇರೆ ಮೀರಿದೆ. ಹತ್ತು ಹಲವು ಹೆಣ್ಣು ಮಕ್ಕಳ ಪ್ರಾಣ ಹೋಗಿದೆ. ನೋವುಂಡ ಆತ್ಮಗಳೇ ನಿಮಗೆಲ್ಲ ಸದ್ಗತಿ ಸಿಗಲಿ. ನಿಮ್ಮನ್ನು ಬಳಸಿದ ಆ ಕಾಮುಕರಿಗೆ ಆ ದೇವರೇ ಶಿಕ್ಷೆ ಕೊಡಲಿ. ಮನುಷ್ಯರ ಶಿಕ್ಷೆ ಚಿಕ್ಕದಾದೀತು. ಹೆಣ್ಣನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವ, ಬಳಸಿಕೊಳ್ಳುವವ ಬದುಕದೆ ಹೋಗಲಿ. ಸಣ್ಣ ಮಕ್ಕಳನ್ನು. ಹಿರಿಯರನ್ನು ಕಾಮದ ದೃಷ್ಟಿಯಲ್ಲಿ ನೋಡಿ ಹಾಗೆ ಮುಂದೆ ಬಂದವನಿಗೆ ದೇವಿಯ ತ್ರಿಶೂಲ ತಾಗಿ ಸಾಯಲಿ.
ಈ ಒಂದು ಹೆಣ್ಣು ಮಗುವಿನ ವಿಷಯವನ್ನೇ ಎತ್ತಿ ಹಿಡಿದು , ಫೋಟೋ ಪ್ರದರ್ಶಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುವವರಿಗೆ ಧಿಕ್ಕಾರವಿರಲಿ. ಸಾಮಾಜಿಕ ಜಾಲ ತಾಣದಲ್ಲಿ ಎಲ್ಲಾ ಜಾಗ, ಹೋಟೆಲ್, ಕಾಡು, ದೇವಾಲಯ ತೋರಿಸಿ ಹಣ ಗಳಿಸಿ ಆಯಿತು. ಈಗ ಈ ವಿಚಾರ ಶುರು ಆಗಿದೆ ಅಷ್ಟೇ..ಅದನ್ನೆಲ್ಲ ಪ್ರಶ್ನಿಸಿ ನ್ಯಾಯ ಕೊಡಲು ನಾವಲ್ಲ. ಕೋರ್ಟು, ಕಚೇರಿ, ಜನತಾ ನ್ಯಾಯಾಲಯ ಇಲ್ಲವೇ? ಎಲ್ಲಿ ಹೋದರೂ ಬಡವರಿಗೆ ಅವಮಾನವೇ. ಹಣಕ್ಕೆ ಬೆಲೆ ಅಷ್ಟೇ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ