ಬುಧವಾರ, ಫೆಬ್ರವರಿ 28, 2018

153.ಶಿವಸ್ತುತಿ-14

14. ಮನಸಿಗೆ ಸೂತ್ರ

ಸಾಗು ಸಾಗೆಲೆ ನಮವೆ
ಸಾಗು ಶಿನೆಡೆಗೆ...
ಶಿವಪಾದ ಸೇರಲೂ
ಶಿವ ನಾಮ ಹಾಡಲೂ ಸಾಗು ಸಾಗು ಸಾಗು....

ಬಾಗು ಬಾಗೆಲೆ ತನುವೆ
ಬಾಗು ಹರನೆಡೆಗೆ..
ಶಿವ ದೀಕ್ಷೆ ಪಡೆಯಲೂ
ಹರ ಕರುಣೆಗಳಿಸಲೂ ಬಾಗು ಬಾಗು ಬಾಗು....

ಬೇಡು ಬೇಡೆಲೆ ಮನವೆ
ಬೇಡು ಶಿವನಲಿ ಇಂದು..
ಶಿವರಕ್ಷೆ ಪಡೆಯಲೂ
ಶಿಕೃಪೆಯ ಗಳಿಸಳು ಬೇಡು ಬೇಡು ಬೇಡು...

ಹಾಡು ಹಾಡೆಲೆ ಹೃದಯ
ಹಾಡು ಹರನಿಗಾಗಿ ಇಂದು..
ಹರ ನಾಮ ಕೀರ್ತನೆ….
ಹರನ ಹೊಗಳುವ ಭಜನೆ ಹಾಡು ಹಾಡು ಹಾಡು….

ಕುಣಿಯೆ ಕುಣಿಯೆಲೆ ಜೀವ
ಕುಣಿಯೆ ನಟರಾಜನಂತೆ..
ಕುಣಿಯುತ್ತ ಹಾಡಲೂ
ಶಿವನೊಲಿವ ಭಕ್ತಿಯ ಪರಾಕಾಷ್ಟೆಗೆ
ಶಿವನೊಲಿಸೆ ಕುಣಿಯೆ ಕುಣಿಯೆ ಕುಣಿಯೆ…..
@ಪ್ರೇಮ್@

152. ಶಿವಸ್ತುತಿ-13

13. ಶಿವಲೀಲೆ
  
ರಾಜನಂತೆ ವಿರಾಜಮಾನವಾಗ ಕುಳಿತಿಹ
ಕಿರೀಟ ತೊರೆದು ಚರ್ಮವುಟ್ಟು ಮೆರೆದು

ಸದಾಶಿವನು ಲಿಂಗರೂಪಿಯಾಗಿ ಕಾಣುತಿಹ
ಸದಾ ನಮ್ಮನ್ನೇಲ್ಲ ಪೊರೆದು ಕಾಯುತಿಹ//
12. ಕರಾವಳಿ ಶಿವ ನಾಮಾವಳಿ…

1. ಶ್ರೀ ಮಂಜುನಾಥ ಸ್ವಾಮಿಯೇ ನಮಃ
2. ಶ್ರೀ ಸೋಮನಾಥ ಸ್ವಾಮಿಯೇ ನಮಃ
3. ಶ್ರೀ ನಂದನೇಶ್ವರ ಸ್ವಾಮಿಯೇ ನಮಃ
4. ಶ್ರೀ ಮಹಾಲಿಂಗೇಶ್ವರ ಸ್ವಾಮಿಯೇ ನಮಃ
5. ಶ್ರೀ ಶಂಕರ ಸ್ವಾಮಿಯೇ ನಮಃ
6. ಶ್ರೀ ಸಹಸ್ರಲಿಂಗೇಶ್ವರ ಸ್ವಾಮಿಯೇ ನಮಃ
7. ಶ್ರೀ ಮಲ್ಲಿಕಾರ್ಜುನ ಸ್ವಾಮಿಯೇ ನಮಃ
8. ಶ್ರೀ ಪಂಚಲಿಂಗೇಶ್ವರ ಸ್ವಾಮಿಯೇ ನಮಃ
9. ಶ್ರೀ ಸದಾಶಿವಸ್ವಾಮಿಯೇ ನಮಃ
10 ಶ್ರೀ ಶರಭೇಶ್ವರ ಸ್ವಾಮಿಯೇ ನಮಃ
11. ಶ್ರೀ ಆದಿನಾಧೇಶ್ವರ ಸ್ವಾಮಿಯೇ ನಮಃ
12. ಶ್ರೀ ಅಮೃತೇಶ್ವರ ಸ್ವಾಮಿಯೇ ನಮಃ
13. ಶ್ರೀ ನಿಟಲಾಕ್ಷ ಸ್ವಾಮಿಯೇ ನಮಃ
14. ಶ್ರೀ ಕಾರಿಂಜೇಶ್ವರ ಸ್ವಾಮಿಯೇ ನಮಃ
15. ಶ್ರೀ ಅನಂತೇಶ್ವರ ಸ್ವಾಮಿಯೇ ನಮಃ
16. ಶ್ರೀ ಹರಿಹರೇಶ್ವರ ಸ್ವಾಮಿಯೇ ನಮಃ
17. ಶ್ರೀ ತ್ರಿಶೂಲೇಶ್ವರ ಸ್ವಾಮಿಯೇ ನಮಃ
18 ಶ್ರಿ ಉಮಾಮಹೇಶ್ವರ ಸ್ವಾಮಿಯೇ ನಮಃ
19. ಶ್ರೀ ವೀರಭದ್ರ ಸ್ವಾಮಿಯೇ ನಮಃ
20. ಶ್ರೀ  ವಿಶ್ವೇಶ್ವರ ಸ್ವಾಮಿಯಾ ನಮಃ
21. ಶ್ರೀ ಕೋಟಿಲಿಂಗೇಶ್ವರ ಸ್ವಾಮಿಯೇ ನಮಃ
22. ಶ್ರೀ ಶಂಕರನಾರಾಯಣ ಸ್ವಾಮಿಯೇ ನಮಃ
23. ಶ್ರೀ ಆಗಸ್ತೇಶ್ವರ ಸ್ವಾಮಿಯೇ ನಮಃ
24. ಶ್ರೀ ಸೇನೇಶ್ವರ ಸ್ವಾಮಿಯೇ ನಮಃ
25. ಶ್ರೀ ಕುಂದೇಶ್ವರ ಸ್ವಮಿಯೇ ನಮಃ
26. ಶ್ರೀ ಸೋಮನಾಧೇಶ್ವರ ಸ್ವಾಮಿಯೇ ನಮಃ
27 ಶ್ರೀ ಹಿರಿಯ ಸ್ವಾಮಿಯೇ ನಮಃ
28 ಶ್ರೀ ಶಿವನೇ ನಮಃ
29 ಶ್ರೀ ವಿಶ್ವನಾಥ ಸ್ವಾಮಿಯೇ ನಮಃ
30. ಶ್ರೀ ಕೋಟಿನಾಥ ಸ್ವಾಮಿಯೇ ನಮಃ
31. ಶ್ರೀ ಅರ್ದನಾರೀಶ್ವರ ಸ್ವಾಮಿಯೇ ನಮಃ
32. ಶ್ರೀ ಕಿರಿಮಂಜೇಶ್ವರ ಸ್ವಾಮಿಯೇ ನಮಃ
33. ಶ್ರೀ ಕಾಂತೇಶ್ವರ ಸ್ವಾಮಿಯೆ ನಮಃ
34. ಶ್ರೀ ಮಹಾದೇವ ಸ್ವಾಮಿಯೇ ನಮಃ
35. ಶ್ರೀ ನೀಲಕಂಠೇಶ್ವರ ಸ್ವಾಮಿಯೇ ನಮಃ
@ಪ್ರೇಮ್@

ಉಗ್ರರಿಗೆ ಉಗ್ರನಾಗಿ ಬಂದು ನಿಂತಿಹ
ನೀಚರಿಗೆ ಪಾಠಕಲಿಸಿ ಕುಂತು ನೋಡುತಿಹ

ಪ್ರತಿನಿತ್ಯ ಭಕ್ತರಿಂದ ಪೂಜೆ ಪಡೆದಿಹ
ಭಕ್ತರಿಗೆ ಪುಣ್ಯಕೊಟ್ಟು ತಾನು ಮೆರೆದಿಹ//

ಮಂಜುನಾಥ  ಅನ್ನದಾತ ನೀಡಿ ಸಲಹುವ
ವಿದ್ಯಾದಾನ ಬುದ್ದಿದಾನ ಮಾಡಿ ಬೆಳೆಸಿಹ

ಭಕ್ತರನ್ನು  ಒಳ್ಳೆ ಕೆಲಸ ಮಾಡಿ ಎನುತಿಹ
ಅಲ್ಲಲ್ಲಿ ಗುಡಿಯ ಪಡೆದು ಪೂಜೆ ಪಡೆದಿಹ//

ನಮ್ಮದೇನು ನಿಮ್ಮದೇನು ಎಲ್ಲ ಶಿವನದೆ
ರಾತ್ರಿ ಹಗಲು ಭಕುತರಿಗೆ ಕೃಪೆ ಅವನದೆ

ಸತ್ಯ -ಸುಳ್ಳು ವ್ಯತ್ಯಾಸ ತಿಳಿದ ತೀರ್ಪು ಅವನದೆ
ನಮ್ಮ ಹುಟ್ಟು ಬ್ರಹ್ಮನದಾದರೆ ಸಾವು ಶಿವನ ಕೃಪೆ//

@ಪ್ರೇಮ್@

151. ಶಿವಸ್ತುತಿ-12

12. ಕರಾವಳಿ ಶಿವ ನಾಮಾವಳಿ…

1. ಶ್ರೀ ಮಂಜುನಾಥ ಸ್ವಾಮಿಯೇ ನಮಃ
2. ಶ್ರೀ ಸೋಮನಾಥ ಸ್ವಾಮಿಯೇ ನಮಃ
3. ಶ್ರೀ ನಂದನೇಶ್ವರ ಸ್ವಾಮಿಯೇ ನಮಃ
4. ಶ್ರೀ ಮಹಾಲಿಂಗೇಶ್ವರ ಸ್ವಾಮಿಯೇ ನಮಃ
5. ಶ್ರೀ ಶಂಕರ ಸ್ವಾಮಿಯೇ ನಮಃ
6. ಶ್ರೀ ಸಹಸ್ರಲಿಂಗೇಶ್ವರ ಸ್ವಾಮಿಯೇ ನಮಃ
7. ಶ್ರೀ ಮಲ್ಲಿಕಾರ್ಜುನ ಸ್ವಾಮಿಯೇ ನಮಃ
8. ಶ್ರೀ ಪಂಚಲಿಂಗೇಶ್ವರ ಸ್ವಾಮಿಯೇ ನಮಃ
9. ಶ್ರೀ ಸದಾಶಿವಸ್ವಾಮಿಯೇ ನಮಃ
10 ಶ್ರೀ ಶರಭೇಶ್ವರ ಸ್ವಾಮಿಯೇ ನಮಃ
11. ಶ್ರೀ ಆದಿನಾಧೇಶ್ವರ ಸ್ವಾಮಿಯೇ ನಮಃ
12. ಶ್ರೀ ಅಮೃತೇಶ್ವರ ಸ್ವಾಮಿಯೇ ನಮಃ
13. ಶ್ರೀ ನಿಟಲಾಕ್ಷ ಸ್ವಾಮಿಯೇ ನಮಃ
14. ಶ್ರೀ ಕಾರಿಂಜೇಶ್ವರ ಸ್ವಾಮಿಯೇ ನಮಃ
15. ಶ್ರೀ ಅನಂತೇಶ್ವರ ಸ್ವಾಮಿಯೇ ನಮಃ
16. ಶ್ರೀ ಹರಿಹರೇಶ್ವರ ಸ್ವಾಮಿಯೇ ನಮಃ
17. ಶ್ರೀ ತ್ರಿಶೂಲೇಶ್ವರ ಸ್ವಾಮಿಯೇ ನಮಃ
18 ಶ್ರಿ ಉಮಾಮಹೇಶ್ವರ ಸ್ವಾಮಿಯೇ ನಮಃ
19. ಶ್ರೀ ವೀರಭದ್ರ ಸ್ವಾಮಿಯೇ ನಮಃ
20. ಶ್ರೀ  ವಿಶ್ವೇಶ್ವರ ಸ್ವಾಮಿಯಾ ನಮಃ
21. ಶ್ರೀ ಕೋಟಿಲಿಂಗೇಶ್ವರ ಸ್ವಾಮಿಯೇ ನಮಃ
22. ಶ್ರೀ ಶಂಕರನಾರಾಯಣ ಸ್ವಾಮಿಯೇ ನಮಃ
23. ಶ್ರೀ ಆಗಸ್ತೇಶ್ವರ ಸ್ವಾಮಿಯೇ ನಮಃ
24. ಶ್ರೀ ಸೇನೇಶ್ವರ ಸ್ವಾಮಿಯೇ ನಮಃ
25. ಶ್ರೀ ಕುಂದೇಶ್ವರ ಸ್ವಮಿಯೇ ನಮಃ
26. ಶ್ರೀ ಸೋಮನಾಧೇಶ್ವರ ಸ್ವಾಮಿಯೇ ನಮಃ
27 ಶ್ರೀ ಹಿರಿಯ ಸ್ವಾಮಿಯೇ ನಮಃ
28 ಶ್ರೀ ಶಿವನೇ ನಮಃ
29 ಶ್ರೀ ವಿಶ್ವನಾಥ ಸ್ವಾಮಿಯೇ ನಮಃ
30. ಶ್ರೀ ಕೋಟಿನಾಥ ಸ್ವಾಮಿಯೇ ನಮಃ
31. ಶ್ರೀ ಅರ್ದನಾರೀಶ್ವರ ಸ್ವಾಮಿಯೇ ನಮಃ
32. ಶ್ರೀ ಕಿರಿಮಂಜೇಶ್ವರ ಸ್ವಾಮಿಯೇ ನಮಃ
33. ಶ್ರೀ ಕಾಂತೇಶ್ವರ ಸ್ವಾಮಿಯೆ ನಮಃ
34. ಶ್ರೀ ಮಹಾದೇವ ಸ್ವಾಮಿಯೇ ನಮಃ
35. ಶ್ರೀ ನೀಲಕಂಠೇಶ್ವರ ಸ್ವಾಮಿಯೇ ನಮಃ
@ಪ್ರೇಮ್@

150. ಶಿವಸ್ತುತಿ-11

11. ಕಾಪಾಡು ತಂದೆ.

ಶಿವ ನೀನು ಕಾಯೋ ಎನ್ನ
ತಪ್ಪನ್ನೆಲ್ಲಾ ಕ್ಷಮಿಸೋ ನನ್ನಾ...

ಆಸೆ ಆಕಾಂಕ್ಷೆಯು ಬಾದಿಸುತಿಹುದೆನ್ನಲಿ...
ಅರಿಷಡ್ವರ್ಗಗಳಿಂದ ಜಗದೀಶ ಕಾಯೋ ನನ್ನ……

ಈಶ ನಿನ್ನಂತೆಯೆ ಮುಕ್ತಿ ಪಾಲಿಸೋ ದೇವ....
ಮಲ್ಲಿಕಾರ್ಜುನ ನಮ್ಮ ಕೈಯ ಹಿಡಿಯೋ ಸ್ವಾಮಿ,...

ಸದಾಶಿವನೇ ನಮ್ಮ ಕಾಯೋ ಬೆಂಬಿಡದೆ...
ಅಮೃತೇಶ್ವರ ಸ್ವಾಮಿ ಸಲಹೋ ಬೆನ್ನೆಲುಬಾಗಿ ನನ್ನಾ----

ಮಹಾಲಿಂಗೇಶ್ವರ ವರವಾ ಪಾಲಿಸೋ ಸ್ವಾಮಿ..
ಸೋಮನಾಥೇಶ್ವರ ಧೈರ್ಯ ಭಕ್ತಿ ನೀಡೋ ದೇವ ,....

ಪಂಚಲಿಂಗೇಶ್ವರ ಸತ್ಯ ಪಥವ ತೋರೋ ತಂದೆ..
ಹರಿಹರೇಶ್ವರ ಪಿತನೆ ಕರವಮುಗಿವೆ ನಿನಗೆನ್ನಾ…….

ಕಾರಿಂಜೇಶ್ವರನೇ ಶಕ್ತಿ ಶಾಂತಿ ಕೊಡು..
ಅನಂತೇಶ್ವರನೇ ಶತ್ರು ನಾಶ ಮಾಡು...

ತ್ರಿಶೂಲೇಶ್ವರನೇ ಕಷ್ಟದಿಂದ ಕಾಪಾಡು...
ಉಮಾಮಹೇಶ್ವರನೇ ಚೆನ್ನಾಗಿರಲಿ ನನ್ನಪಾಡು…..
@ಪ್ರೇಮ್@

149.ಶಿವಸ್ತುತಿ-10

10. ಶಿವಾರಾಧನೆ

ಜಯ ಜಯ ಚಂದ್ರಮೌಳೀಶ್ವರ
ಜಯ ಜಯ ಜಗದೀಶ್ವರ/

ಹರ ಹರ ಶ್ರೀ ಕರುಣಾಕರ
ಜಯ ಹರ ಗಂಗಾಧರೇಶ್ವರ//

ಜಯ ಜಯ ಶಾಂಬಸದಾಶಿವ
ಜಯ ಜಯ ಭಕ್ತರ ಕಾಯ್ವ ಶಿವ/

ಜಯಹರ ಗಜಚರ್ಮಾಂಬರ
ಜಯ ಜಯ ನಟರಾಜೇಶ್ವರ//

ಜಯ ಜಯ ಮುಕ್ಕಣ್ಣ
ಜಯ ಜಯ ಶಂಕರಣ್ಣ/

ಜಯ ಹರ ಬಿಲ್ವಾರ್ಪಣ
ಜಯಹರ ಪಾವನ //

ಜಯ ಜಯ ಜಯಹರ
ಜಯಜಯ ಮಹೇಶ್ವರ/

ಜಯ ಹರ ಕರುಣಾಕರ
ಜಯಹರ ಸುರಾಸುರ//

@ಪ್ರೇಮ್@

148. ಶಿವಸ್ತುತಿ-9

9. ಗಝಲ್
ಪಾರ್ವತಿ ಪತಿಯೇ ಕೈಲಾಸವಾಸಿ ನಮಃ ಶಿವಾ…
ತ್ರಿಶೂಲಧಾರಿ, ಕಾಶೀವಿಶ್ವೇಶ್ವರ ಹರಹರ ನಮಃ ಶಿವಾ//

ಭಕ್ತರ ರಕ್ಷಕ, ಶಿಷ್ಟರ ಗೆಳೆಯ
ದುಷ್ಟರ ನಾಶಕ ,ಜ್ಯೋತಿರ್ಲಿಂಗ ನಮಃ ಶಿವಾ//

ಗಣಪತಿ ಪಿತನೇ, ನಟಶೇಖರನೇ
ಬಿಲ್ವಪತ್ರೆ ಪ್ರಿಯನೇ, ಹರಹರ ಶಂಭೋ ನಮಃ ಶಿವಾ//

ಓಂಕಾರೇಶ್ವರ, ಮಲ್ಲಿಕಾರ್ಜುನ ಶ್ರೀಕಂಠೇಶ್ವರ
ಲೋಕನಾಥೇಶ್ವರ, ಮಾರ್ಕಂಡೇಶ್ವರ ನಮಃ ಶಿವಾ//

ರುದ್ರಾಕ್ಷಿ ಹಾರನೇ, ಸೋಮನಾಥನೇ ಲಿಂಗೇಶ್ವರನೇ
ತ್ರಯಂಬಕೇಶ್ವರ ,ಪಂಚಲಿಂಗೇಶ್ವರ ನಮಃ ಶಿವಾ//

ನಂದಿ ವಾಹನ, ರೌದ್ರಾವತಾರಿ, ನಾಗಭೂಷಣ
ಜಟಾಧರ, ಕಾರಿಂಜೇಶ್ವರ, ಪುರಿ ಜಗನ್ನಾಥ, ನಮಃ ಶಿವಾ//

ಢಮರುಗ ಹಸ್ತನೇ, ಗಂಗಾ ಭೂಷಣ
ಗಿರಿಜಾ ಶಂಕರ , ಗೌರಿ ಮನೋಹರ ನಮಃ ಶಿವಾ//

@ಪ್ರೇಮ್@

147. ಶಿವಸ್ತುತಿ-8

8. ಶಿವನಿಗೆ ಅರಿಕೆ

ಓ ಶಿವನೇ, ನಿನ್ನ ಕೈಯಲ್ಲಿರುವ ತ್ರಿಶೂಲದಿಂದ
ನನ್ನಲಿರುವ ಸೋಮಾರಿತನವ ತಿವಿದುಬಿಡು//

ಓ ಜಠಾಧರನೇ, ನಿನ್ನಲಿರುವ ವಿಭೂತಿಯಿಂದ
ನನ್ನಲಿರುವ ದರ್ಪ , ಅಗೌರವವ  ಅಳಿಸಿಬಿಡು//

ಓ ಸದಾಶಿವನೇ, ನಿನ್ನ ತಲೆಯಲಿರುವ ಗಂಗೆಯಿಂದ
ನನ್ನ ಸರ್ವ ಪಾಪಗಳ ತೊಳೆದು ಸ್ವಚ್ಚಮಾಡಿಬಿಡು//

ಓ ಪಂಚಲಿಂಗೇಶ್ವರನೇ, ನಿನ್ನೆದುರಿರುವ ನಂದಿಯಿಂದ
ನನ್ನಲಿರುವ  ಅಂಧಕಾರ, ಅಜ್ಞಾನವನು ತಿವಿಸಿಬಿಡು//

ಓ ಶಿವನೇ, ನೀನು ಹೊದ್ದ ಗಜ ಚರ್ಮದಿಂದ
ಲೋಕದಲ್ಲಿರುವ  ಅಂಧಕಾರ, ನೋವು, ಮುಚ್ಚುವಂತೆ ಮಾಡು//

ಓ ಮಹಾಲಿಂಗೇಶ್ವರನೇ, ನಿನ್ನ ಢಮರುಗವ ಬಾರಿಸಿ
ಜಾತಿ ಮತ ಕುಲಗಳ ನಡುವಿನ ಕಂದಕವ ತೆರೆದುಬಿಡು//

ಓ ಕೈಲಾಸವಾಸನೇ, ನಿನ್ನ ಕಂಠದಲ್ಲಿರುವ ವಿಷದಿಂದ
ನನ್ನ ಪೈಶಾಚಿಕ ಕೃತ್ಯಗಳ, ದಾಹಗಳ ಕೊಂದುಬಿಡು//
@ಪ್ರೇಮ್@

146. ಶಿವಸ್ತುತಿ-7

7.ಶಿವನೇ...

ಜಡೆಯಲ್ಲಿ ಗಂಗೆಯ ಬಂದಿಪ ದೇವನೆ
ಮುಡಿಯಲ್ಲಿ ಚಂದ್ರನ ಮುಡಿದಿಹ ಶಿವನೇ//

ಕೈಲಾಸವಾಸ, ಪರಮೇಶ, ಜಗದೀಶ ಶಶಿಧರನೇ,
ವಿಷವನು ಉಂಡ ಶ್ರೀ ಕಂಠೇಶ್ವರ, ದೇವನೆ//

ಸೀರೆಯನುಟ್ಟು ನೀರೆಗೆ ಗೌರವವಿರಿಸಿದ  ಅರ್ಧನಾರೀಶ್ವರನೇ,
ನಲಿಯುತ ನೃತ್ಯಕೆ ತಿಲಕವನಿಟ್ಟ ನಟರಾಜನೇ//

ಉರಗವ ಕೊರಳಲಿ ಸುತ್ತಿ ಪ್ರಾಣಿ ಹಿಂಸೆ ತಡೆದ ಹರನೇ,
ಮುಡಿಯಲಿ ಚಂದ್ರನ ಮುಡಿದಿಹ ಗಂಗಾಧರನೇ//

ಗಜಚರ್ಮಾಂಬರಧಾರಿ ತಪ್ಪಸ್ಸಿನ ಹರಿಕಾರಿ
ಹರಹರ  ಎನಲು ಹರಸುವ ಸುವಿಹಾರಿ//

ಗೌರಿಯ ಎದೆಯಲಿ ಇರಿಸಿದ ಮಂಜುನಾಥನೆ,
ನೆನೆದವರ ಕಷ್ಟ ನಿವಾರಕ ಜಗದೀಶನೆ//

ಢಂ ಢಂ ಢಮರುಗ ನಾದವಗೈಯುವ ಪರಮೇಶ್ವರನೇ,
ಗಣಪನ ರಾವಣನ ಬಳಿ ಬಾಲಕ ರೂಪದಿ ಕಳಿಸಿದ ಹರನೇ //

ರಾವಣಗಾತ್ಮಲಿಂಗವ ಕರುಣಿಸಿದ ಭಕ್ತರ ಪ್ರಿಯನೇ,
ಭೂಮಿಯ ಮೇಲೆ ಲಿಂಗವನಿಟ್ಟ ಗೋಕರ್ಣನಾಥೇಶ್ವರನೇ//
@ಪ್ರೇಮ್@

145.ಶಿವಸ್ತುತಿ-6

11. ಶಿವ ಕೇಳಯ್ಯ

ಶಿವ ಶಿವ ಹರಹರ
ಶಂಭೋ ಮಹದೇವ
ನಿನ್ನಯ ನಾಮವ
ನಾನು ನಂಬಿಹೆನಯ್ಯಾ----//

ಮಲೈ ಮಾದೇಶ್ವರ
ನೀಲ ಕಂಠನೆ
ನಿನ್ನಯ ಪಾದವ
ನಾನು ಹಿಡಿದಿರುವೆನಯ್ಯಾ----//

ಢಂ ಢಂ ಢಮರುಗ
ಬಡಿಯುತ ಕುಣಿವ
ನಟರಾಜನೇ ನಿನಗೆ
ನಾವು ಶರಣೆಂದೆವಯ್ಯಾ----//

ನರನಾರಿಯರಿಗೆ ಎಲ್ಲ
ಗೌರವ ಕೊಟ್ಟು
ಅರ್ಧನಾರೀಶ್ವರನಾದೆಯಲ್ಲ
ನಿನ್ನನೇ ನಾವು ಬೇಡುವೆವಯ್ಯಾ...//

ದುಃಖ ನಿವಾರಕ
ಧ್ಯಾನಾಶಕ್ತ ನೀ
ಸೇವೆಯ ಮಾಡಲು
ಮನ ನೀಡಯ್ಯಾ..//
@ಪ್ರೇಮ್@

144. ಸ್ತ್ರೀ.....ಅಂಕಣ ಬರಹ-9

9.ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
ಮುಂದಿನವಾರ 8ಕ್ಕೆ ಮಹಿಳಾ ದಿನಾಚರಣೆ. ಮಹಿಳೆಯರಾದುದಕ್ಕೆ ಹೆಮ್ಮೆ ಪಡೋಣ, ಮಹಿಳಾ ದಿನಾಚರಣೆಯ ಆಚರಣೆ ಹೆಂಡ-ಗುಂಡು-ತುಂಡಿನೊಂದಿಗಿರದೆ ಅಪ್ಪಟ ಭಾರತೀಯ ಶೈಲಿಯಲ್ಲಿರಲಿ, ಅದರೊಂದಿಗೆ ಸಾಧ್ಯವಾದಷ್ಟು ಸಮಾಜದಲ್ಲಿ ತುಳಿತಕ್ಕೊಳಗಾದ, ಬೇರೆಯವರಿಂದ ಜರ್ಜರಿತವಾದ ಮಹಿಳೆಯರಿಗೆ ಸಾಂತ್ವನ ಸಿಗುವ ರೀತಿಯಲ್ಲಿರಲಿ.
    ಆಧುನಿಕ ಮಹಿಳೆ ಎಂದಾಗ ಕುಡಿದು ಮತ್ತೇರಿಸಿ, ಅರ್ಧಂಬರ್ಧ ತುಂಡು ಬಟ್ಟೆ ಹಾಕಿ, ತುಟಿಗೊಂದು ಐವತ್ತು ಗ್ರಾಂ ಲಿಪ್ ಸ್ಟಿಕ್ ಬಳಸಿ, ಮೇಕಪ್ ನಲ್ಲಿ ಮುಖ ಬದಲಿಸಿ, ಪೆನ್ಸಿಲ್ ಹೀಲ್ಸ್ ಧರಿಸಿ ಹೋಗುವುದೆಂದು ಅರ್ಥವಲ್ಲ, ಅದು ಮಾಡರ್ನಿಟಿ ಎನಿಸಿ ಕೊಳ್ಳಲಾರದು. ಮಾಡರ್ನ್ ಆಲೋಚನೆಗಳಿರಬೇಕು, ಉದಾತ್ತ ಮನೋಭಾವನೆಗಳಿರಬೇಕು, ಉತ್ತಮ ಧ್ಯೇಯಗಳಿರಬೇಕು, ಒಳ್ಳೆಯ ಆರೋಗ್ಯ ಸಂಪತ್ತು ನಮ್ಮದಾಗಿರಬೇಕು.
    
         ಮೊನ್ನೆ ಮೊನ್ನೆ ತನ್ನ ಜೀವನವನ್ನು ಕೊನೆಗೊಳಿಸಿದ ನಟಿ ಶ್ರೀದೇವಿಯವರಿಗೆ ಶ್ರದ್ಧಾಂಜಲಿಯನ್ನಿಡುತ್ತಾ ಅವರ ಮೃತದೇಹ ಪರೀಕ್ಷೆಯಲ್ಲಿ ದೇಹದಲ್ಲಿ ಆಲ್ಕೋಹಾಲ್ ಪ್ರಮಾಣವಿರುವುದು ತಿಳಿದು ಬಂದಿದೆಯೆಂದು ಪತ್ರಿಕೆಗಳು, ವಿವಿಧ ಸುದ್ದಿ ಮೂಲಗಳು ಬಿತ್ತರಿಸುತ್ತಿವೆ. ನಾವು 'ಕೆಟ್ಟದರಿಂದ ದೂರ ಇರು' ಎಂಬ ನೀತಿಯನ್ನು ನಮಗಾಗಿ ಪಾಲಿಸುತ್ತಾ, ನಮ್ಮ ಮನೆ, ನಮ್ಮ ಮಕ್ಕಳು, ನನ್ನ ವ್ಯಾಪಾರ, ನನ್ನ ಜೀವನ, ನಮ್ಮ ಮನೆ, ನಮ್ಮ ದೈನಂದಿನ ಕೆಲಸಗಳು ಅದರೊಡನೆ ಒಂದಿಷ್ಟು ದೈವಭಕ್ತಿ, ಸಮಾಜ ಸೇವೆ, ದೇಶ ಸೇವೆ, ಹಿರಿಯರ ಸೇವೆ-ಅವರಿಗೆ ಸಹಕಾರ, ಮಕ್ಕಳ ಕಲಿಕೆ ಹೀಗೆ ದಿನ ಕಳೆದರೆ ಯಾರಿಗೆ ಯಾರೂ ಕಂಟಕರಾಗಲಾರರು.

        ಈಗಿನ ಕಾಲದಲ್ಲಿ ನಾವೆಷ್ಟು ಬ್ಯುಸಿ ಅಂದರೆ ಯಾರಿಗೂ ಯಾರನ್ನೂ ನೋಡಲು, ಮಾತನಾಡಲು, ಹರಟೆ ಹೊಡೆಯಲು ಸಮಯ ಇಲ್ಲ. ಬೆಳಗ್ಗೆ-ರಾತ್ರಿ ಓಡುತ್ತಿರುವಂತೆ ಭಾಸವಾಗುತ್ತದೆ.ನಮ್ಮ ನಮ್ಮ ಕಾರ್ಯದಲ್ಲಿ ನಾವು ತಲೆ ಎತ್ತಿ ಮಾತನಾಡುತ್ತಿಲ್ಲ, ಒಂದು ನಿಮಿಷವೂ ಮುಖ್ಯ ನಮಗೆ! ಈ ಜಂಜಾಟದ ಬದುಕಿನಲ್ಲಿ ನಮ್ಮನ್ನು ನಾವು ಕಳೆದು ಕೊಳ್ಳ ಬಾರದಲ್ಲವೇ?
       ನಮ್ಮ ಗುರಿ, ನಮ್ಮ ಬದುಕಿನ ಮುಂದಿನ ದಿನಗಳ ಬಗ್ಗೆ ಯೋಚಿಸಿ ಅದಕ್ಕಾಗಿ ಮಪನ್ನಡೆಯುವುದು ಸೂಕ್ತ ಕ್ರಮ. ಆದರೆ ನಮ್ಮ ಮಕ್ಕಳನ್ನೂ ಗಮನಿಸಿಕೊಳ್ಳ ಬೇಕು. ಮಾಧ್ಯಮಗಳ ಹಾವಳಿಯಿಂದ ಕಾಲೇಜಿನಲ್ಲಿ ನಡೆಯುತ್ತಿದ್ದ ಪ್ರೀತಿ-ಪ್ರೇಮಗಳು ಇಂದು ಆರು-ಏಳನೇ ತರಗತಿಯಲ್ಲೆ ಪ್ರಾರಂಭವಾಗಿವೆ! ಅದು ಮುಂದಿನ ವಿದ್ಯಾಭ್ಯಾಸ, ಬದುಕು, ಬೆಳವಣಿಗೆಗೆ ಮಾರಕವಾಗಬಾರದಷ್ಟೆ!
    ಸರಿಯಾಗಿ ಗಮನಿಸಿ, ನಮ್ಮ ಮಕ್ಕಳೊಂದಿಗೆ ನಾವು ಕುಳಿತು ನೋಡುವುದು ಒಂದಕ್ಕಿಂತ ಹೆಚ್ಚು ಮದುವೆ ಆದವರ ಧಾರಾವಾಹಿಗಳು, ಚಾಕು-ಚೂರಿಯಿಂದ ಇರಿದು, ಬಂಧೂಕಲ್ಲಿ ಶೂಟ್ ಮಾಡಿ ಸಾಯಿಸುವ ಫಿಲಂ ಗಳು! ನಮಗೆ ಸರಿ-ತಪ್ಪು ತಿಳಿದಿದೆ! ಆದರೆ ಬೆಳೆಯುವ ಮಕ್ಕಳು ಅದನ್ನು ನೋಡಿ ಅದೇ ಜೀವನ ಎ೦ದುಕೊಳ್ಳುತ್ತಾರೆ! ಮೊನ್ನೆ ಮೊನ್ನೆ ಸುಳ್ಯದಲ್ಲಿ ಹಗಲಲ್ಲೆ ನಡೆದ ವಿದ್ಯಾರ್ಥಿನಿಯ ಹತ್ಯೆಗೂ ಇದೇ ಕಾರಣವಾಗಿರಲೂ ಬಹುದು! ಮಾಧ್ಯಮಗಳ ಪ್ರಭಾವ ಇರದೆ ಯಾರಿಗೂ ವಿದ್ಯಾರ್ಥಿಗಳ ವಿಷಯದಲ್ಲಿ ಆ ಊಹೆ ಕೂಡಾ ಸಾಧ್ಯವಿಲ್ಲ! ತನಗೆ ದಕ್ಕದ ಹುಡುಗಿ ಬದುಕಿರಬಾರದು ಎಂಬ ಭಾವ, ಕಾರ್ಕಳದಲ್ಲೊಬ್ಬ ತನ್ನ ಹೆಂಡತಿಯ ಕಾಲುಗಳನ್ನೆ ಕಡಿದ ಭೂಪ! ಹೇಯ ಕೃತ್ಯಗಳೆಂದರೆ ಇದೇ ಅಲ್ಲವೇ?
     ಹೆಂಡತಿಯಾದರೂ ಮಗಳಾದರೂ, ಪ್ರೇಯಸಿಯಾದರೂ ತಪ್ಪು ಮಾಡಿದವರನ್ನು ಶಿಕ್ಷಿಸಲು ನ್ಯಾಯಾಲಯಗಳಿಲ್ಲವೇ? ನಂಬಿಕೆ ಇಲ್ಲ ಜನರಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ! ಹಾಗೆಯೇ ತಾಳ್ಮೆಯೂ ಇಲ್ಲ, ಬುದ್ಧಿಯೂ ಕೈಲಿಲ್ಲ! ಹಿಂದು-ಮುಂದಿನ ಯೋಚನೆಗಳು, ಹೆತ್ತವರ ,ಹಿರಿಯರ ಬಗ್ಗೆ ಕಾಳಜಿ, ಆಲೋಚನೆಗಳು, ಅವರ ತ್ಯಾಗದ ಬಗೆಗಿನ ಜ್ಞಾನವಿಲ್ಲ! ನಾನು, ನನ್ನದು, ನನ್ನ ಪ್ರಪಂಚ ಅಷ್ಟೆ! ಬದುಕು ಮೊಬೈಲ್ ಪರದೆಗಿಂತ ಚಿಕ್ಕದಾಗುತ್ತಿದೆ, ತಂತ್ರಜ್ಞಾನ ಟಿವಿ ಪರದೆಯಂತೆ ದೊಡ್ಡದಾಗುತ್ತಿದೆ. ನೈತಿಕತೆ ಸಾಯುತ್ತಿದೆ, ಸತ್ಯ ಸತ್ತು ಸುಳ್ಳು ನಮ್ಮನ್ನಾಳಲು ಬರುತ್ತಿದೆ. ನಾವಾಗಿ ನಾವು ಎಚ್ಚೆತ್ತು ಬದುಕಿದರೆ ಮಾತ್ರ ಮಹಿಳಾ ದಿನಾಚರಣೆ ಅರ್ಥಪೂರ್ಣವಾದೀತು. ನೀವೇನಂತೀರಿ?
@ಪ್ರೇಮ್@

143.ಕವನ-ಏಕೆ ಹೀಗಾದೆ ನೀ..

ಕವನ-ಮಾನವ ಏಕೆ ಹೀಗಾದೆ ನೀ..

ನನ್ನ ಕೈ ಕಾಲುಗಳ ಕಡಿದು
ಮುಂಡವ ಮೊಟಕುಗೊಳಿಸಿಹೆ ನೀ..
ನನ್ನ ಹೃದಯಕ್ಕೆ ಕೊಳ್ಳಿ ಇಟ್ಟು ಆ ಸ್ಥಳದಿ,
ರಸ್ತೆಗಳ ನಿರ್ಮಿಸಿ ನಲಿದವ ನೀನು...

ನನ್ನನ್ನೇ ಕತ್ತರಿಸಿ,ನಿನ್ನ ಮನೆಯ ಸುತ್ತ ಬೇಲಿ ಹಾಕಿದವ ನೀ..
ನನ್ನ ಆಹಾರದ ನೀರ ನದಿಗಳಿಗೆ
ವಿಷವೂಡಿಸಿದವ ನೀ..

ನನ್ನಸಿರ ಬಿಗಿಹಿಡಿದು ಕೊಟ್ಟೆ ನಿಮಗೆ
ಜೀವದುಸಿರನು ಕೊನೆವರೆಗೂ,
ಆ ಕೃತಜ್ಞತೆಗೆ ಕೃತಘ್ನನಾಗಿ,
ನನ್ನ ಉಳಿಸುವ ಬದಲು ಕೊಂದವ ನೀ...

ರಾಸಾಯನಿಕಗಳ ಬಳಸಿ, ಮಣ್ಣ ಸಾರವ ಅಳಿಸಿ,ಮಿತ್ರರನೆ ಕೊಲುವವ ನೀ..
ಕುಡಿವ ನೀರಿಗೆ, ಉಸಿರಾಡುವ ಗಾಳಿಗೆ,
ತಿನ್ನುವ ಉಣಿಸಿಗೆ ವಿಷವೂಡಿದವ ನೀ..

ಮಾನವನೆ ನೀ ಬದಲಾಗಲಾರೆಯಾ
ತನ್ನ ಕಾಲಿಗೆ ತಾನೇ ಕೊಡಲಿ ಹಾಕಿಕೊಂಡು?
ನನ್ನನ್ನು ಕೊಂದು ಬಾಳುವೆ ನೀ ಹೇಗೆ?
ಜೀವಿಗಳ ಉಳಿಸಿ,ಬೆಳೆಸು ನೀ..
@ಪ್ರೇಮ್@

142. ಕವನ- ನಿನಗಿದೋ ನಮನ

ನನ್ನ ನಗೆಗೆ

ನನ್ನ ಬಾಳಲಿ ಬಯಸದೆ ಬಂದ,
ಭವ್ಯ ಭವಿತವ್ಯಕ್ಕೆ ಭರವಸೆ ತಂದ,
ಬಂಗಾರದಂತ ಭಾವನೆಗಳ ಬಳಕೆಗೆ
ಭರಪೂರ ಬಂದು ಬದುಕಲ್ಲಿ ನಿಂತ..

ಭಯವಿಲ್ಲದೆ ಅಭಯಕ್ಕೆ ಸಾಕ್ಷಿಯನಿತ್ತ
ಬರಡಾದ ಬದುಕಲ್ಲಿ ಬೆಳಕನ್ನು ತಂದಿತ್ತ,
ಬದಲಾಗದ ಬಾಳಲ್ಲಿ ಬದಲಾವಣೆ ತುಂಬುತ್ತ
ಬಂದಿರುವ ಭಯವನ್ನ ಬರಡಾಗಿಸಿ ನಿಂತ..

ಭವಿತವ್ಯಕೆ ಬೆಳಕಾಗಿ ಬಯಕೆಯ ಬೆಳೆಸಿದ
ಬಳ್ಳಿಯಂತಿದ್ದೆನಗೆ ಭಾಗ್ಯವ ಬಿಂಬಿಸುತ
ಬಿಳಿ ಹಾಲಿನಂತೆ ಬಾಳ ಬಯಲಿಗೆ ಬಂದ
ಬರಡಾದ ಬಾಳಿಗೆ ಭವ್ಯತೆಯ ಬಿತ್ತರಿಸಿದ
ನನ್ನ ನಗುವೆ ನಿನಗಿದೋ ನಮನ...

@ಪ್ರೇಮ್@

ಮಂಗಳವಾರ, ಫೆಬ್ರವರಿ 27, 2018

141.ಹನಿಗವನ-ಪ್ರೇಮ ಪರೀಕ್ಷೆ-2

ಪ್ರೇಮ ಪರೀಕ್ಷೆ

ನಲ್ಲೆ ನನ್ನ ಪತ್ರ
ರಕ್ತದಲ್ಲೆ ಬರೆದೆ
ನಿನ್ನ ಕೈಲಿ ಇರಿಸಿದೆ,
ನೀ ಓದಿ ನೋಡಿದೆ
ಉತ್ತರವೂ ಬರೆದೆ..
ಕೊನೆಗೆ ನಾನು ತಿಳಿದೆ
ನಾ ನಿನಗೆ ಮಾಡಿದೆ
ಪ್ರೇಮ ಪರೀಕ್ಷೆ ನೀಡಿದೆ
ನೀಡಿ ನಿನ್ನ ಕಾಡಿದೆ
@ಪ್ರೇಮ್@

140. ಹನಿಗವನ-ಪ್ರೇಮ ಪರೀಕ್ಷೆ

ಪ್ರೇಮ ಪರೀಕ್ಷೆ ನನ್ನದು
ನನ್ನಪ್ಪ ನನಗೆ
ಪ್ರೀತಿಯಿಂದ ಹೆಸರಿಟ್ಟರು-
'ಪ್ರೇಮಾ' ಅಂತ!
ನನಗೊದಗಿದ ಪರೀಕ್ಷೆಗಳೆಲ್ಲಾ
'ಪ್ರೇಮ ಪರೀಕ್ಷೆಗಳಾದವು'..😁
@ಪ್ರೇಮ್@

139. ಕವನ-ಭ್ರಮಾಲೋಕ

ಕವನ-ಭ್ರಮಾಲೋಕ

ನಾನಾಗಿದ್ದೆ ಪುಟ್ಟ ಪುಟಾಣಿ ಬಣ್ಣದ ಚಿಟ್ಟೆ,
ಹೂವಿಂದ ಹೂವಿಗೆ ನಾ ಹಾರಿ ಬಿಟ್ಟೆ...
ಬಣ್ಣದ  ರೆಕ್ಕೆಯ ಹಾರಿಸುತಿದ್ದೆ..
ಸುಣ್ಣದ ಬಣ್ಣವ ಕಾಣುತಲಿದ್ದೆ..

ನಾನಾಗಿದ್ದೆ ವೇಗದಿ ಓಡುವ ಚಿರತೆ..
ಹುಸೇನ್ ಬೋಲ್ಟನ್ನು ಸೋಲಿಸುತಲಿದ್ದೆ,
ಮಾನವ ಮೋಸಬುದ್ಧಿ ತೋರಿಸಿಬಿಟ್ಟ,
ಬಲೆಯಿಟ್ಟು ನನ್ನ ಬೀಳಿಸಿ ಬಿಟ್ಟ....

ನಾನಾಗಿದ್ದೆ ಸ್ವಚ್ಛಂದದಿ ಹಾರುವ ಹಕ್ಕಿ
ಕೊಡುತಲಿದ್ದೆ ಮರಿಗಳಿಗೆ ಕಾಳನು ಹೆಕ್ಕಿ,
ತಿನ್ನುತಿದ್ದವು ಮರಿಗಳು ಕಾಳ ಕುಕ್ಕಿ, ಕುಕ್ಕಿ..
ಬಾನಾಡಿ ನಾನಾಗಿದ್ದೆ ಭ್ರಮಾಲೋಕದ ಚುಕ್ಕಿ...

ನಾನಾಗಿದ್ದೆ ಮಾತಾಡುವ ಹಸಿರಿನ ಗಿಣಿ
ಪೋಣಿಸುತ್ತಿದ್ದಳು ಹುಡುಗಿಯೊಬ್ಬಳು ಕೆಳಗೆ ತನ್ನ ಸರಕೆ ಮಣಿ
ಕರೆದಳು ಅವಳು 'ಬಾ ನನ್ನ ಅರಗಿಣಿ'
ಆಗ ಗೊತ್ತಾಯ್ತು ಅದು ನನಗಲ್ಲ, ಅದವಳ ಪತಿ-ಶಿರೋಮಣಿ..

@ಪ್ರೇಮ್@

ಭಾನುವಾರ, ಫೆಬ್ರವರಿ 25, 2018

138. ಕವನ-ಮಾನವನಾಗು


ಮೊದಲು ಮಾನವನಾಗು..

ಹೆತ್ತಮ್ಮನ ಕತೆತೆಯಂದದಿ
ದುಡಿಸಿ ತಾನು ಮದದಿ
ಮೆರೆವ ಎಲೆ ಮಾನವನೆ
ಮೊದಲು ಮಾನವನಾಗು...

ಕೈ ಹಿಡಿದ ಹೆಂಡತಿಗೆ
ಮೈಕೈಯ ಸುಡುವ
ಕೊಲ್ಲುವ ನರನೇ
ಮೊದಲು ಮಾನವನಾಗು..

ಹುಟ್ಟಿಹ ಮಗುವು
ಹೆಣ್ಣಾದೂಡೆ ಕೊಲುವ
ಹೀನ ಮನುಜನೇ
ಮೊದಲು ಮಾನವನಾಗು...

ದಟ್ಟ ದಾರಿದ್ರ್ಯದಲಿ
ಕಡು ಬಡತನದಲೂ
ಮದಿರೆ ನಿಶೆಯಲಿ ಮೆರೆಯದೆ
ಮೊದಲು ಮಾನವನಾಗು...

ಪರರ ಕತ್ತಿ,ಬಂದೂಕಿನಲಿ
ಹೊಡೆದು, ಬಡಿದು ಕೊಲ್ಲದೆ
ಪ್ರಾಣಿ ಬುದ್ಧಿಯ ತೊರೆದು
ಮೊದಲು ಮಾನವನಾಗು...
@ಪ್ರೇಮ್@

137. ಶಿವ ಚಾಲೀಸ್-5

6. *ಶಿವ ಚಾಲೀಸ್ *

ಮೃತ್ಯುಂಜಯ- ವಿಶ್ವೇಶ್ವರ,
ಕಾರಿಂಜೇಶ್ವರ -ಪಂಚಲಿಂಗೇಶ್ವರ ನಮೋ ನಮೋ..     //೪//

ದಿಗಂಬರ-ಗಂಗಾಧರ,
ಮಹೇಶ್ವರ-
ಸಹಸ್ರಲಿಂಗೇಶ್ವರ ನಮೋ ನಮೋ..    //೮//

ಅನಂತೇಶ್ವರ -ವೀರೇಶ್ವರ
ಭಗಂಡೇಶ್ವರ-ಪರಮೇಶ್ವರ ನಮೋ ನಮೋ...     //೧೨//

ಹರಿಹರೇಶ್ವರ - ಅರ್ಧನಾರೀಶ್ವರ,
ಮಹಾಲಿಂಗೇಶ್ವರ-ಅನೀಶ್ವರ ನಮೋ ನಮೋ     //೧೬//

ಶ್ರೀಕಂಠೇಶ್ವರ- ಮಂಜುನಾಥೇಶ್ವರ,
ಕಲಶೇಶ್ವರ- ಮಲ್ಲೇಶ್ವರ ನಮೋ ನಮೋ...        //೨೦//

ಗೋಕರ್ಣನಾಥೇಶ್ವರ- ಮುರುಡೇಶ್ವರ,
ರುದ್ರೇಶ್ವರ -ವಜ್ರೇಶ್ವರ ನಮೋನಮೋ.. //೨೪//

ಲಿಂಗೇಶ್ವರ-ಕಾಲಭೈರವೇಶ್ವರ,
ಸೋಮೇಶ್ವರ-ರಾಮೇಶ್ವರ ನಮೋ ನಮೋ..     //೨೮//

ಸದಾಶಿವನೇ -ಕಾಂತೇಶ್ವರನೇ,
ಕಲ್ಲೇಶ್ವರ -ಮಹದೇಶ್ವರ ನಮೋ ನಮೋ.....    //೩೨//

ವಲ್ಲೀಶ್ವರ -ಜಗದೀಶ್ವರ,
ಜಗನ್ನಾಥೇಶ್ವರ-ಚಂದ್ರಶೇಖರ  ನಮೋ ನಮೋ....  //೩೬//

ರುದ್ರೇಶ್ವರ -ಉಮಾಮಹೇಶ್ವರ,
ಭುಜಂಗೇಶ್ವರ-ಜ್ಯೋತಿರ್ಲಿಂಗೇಶ್ವರ ನಮೋ ನಮೋ...  //೪೦//
@ಪ್ರೇಮ್@

136. ಶಿವಸ್ತುತಿ-4

5. *ದೇವರ ದೇವ*

ದೇವರ ದೇವನೇ ಮಯಾದೇವ
ಅರ್ಧನಾರೀಶ್ವರ  ಈ ದೇವ..
ಭಕುತರ ಎಂದೂ ಜತನದಿ ಕಾಯುವ
ಮೂರನೆ ಕಣ್ಣಲ್ಲಿ ಕಟುಕನ ನೋಡುವ //೧//

ಭಕ್ತಿಗೆ ಒಂದು ವರವನು ಕೊಡುವ,
ಲಿಂಗ ಪೂಜೆಗೆ ಮುಕ್ತಿಯ ಕೊಡುವ..
ಜನರನು ಎಂದೂ ತನ್ನೆಡೆ ಸೆಳೆವ,
ನಮ್ಮಯ ಜೀವನ ಪಾವನಗೊಳಿಸುವ.. //೨//

ಅಷ್ಟಮೂರ್ತನೂ, ಅನೇಕಾತ್ಮನೂ
ಶುದ್ಧವಿಗ್ರಹನೂ, ದೇವರ ದೇವನೂ..
ಭಕ್ತಿಗೆ ಎಂದೂ ಮೆಚ್ಚದೇ ಇರನು,
ತನ್ನಯ ಭಕ್ತರ ಸಲಹುತಲಿರುವನು..//೩//

ಪಶುಪತಿ ಈಶ್ವರ ಅವ್ಯಕ್ತ  ಅನಂತ,
ದೇವನೇ ನೀನು ಭಕುತರ ಸ್ವಂತ..
ಕರುಣೆಯ ನೀಡೋ ನಮ್ಮನು ಹರಸುತ,
ಬಂದೆವು ಬಳಿಗೆ ತಲೆಯನು ಬಾಗುತ.. //೪//

ಶಂಕರ, ಶಶಿಧರ, ಶಿವ ಗಂಗಾಧರ,
ಶ್ರೀಕರ, ವಿಷಕಂಠ, ಉಗ್ರ, ಕುಮಾರ....
ಜಟಾಧರ, ಅನೀಶ್ವರ, ವೀರ ಕಠೋರ!
ನಮ್ಮ ಕಷ್ಟಗಳ ಕಳುಹಿಸೋ ದೂರ//೫//
@ಪ್ರೇಮ್@

135. ಶಿವಸ್ತುತಿ-3

4. *ಮಾದೇವ ಸ್ತುತಿ*

ತಲೆಯ ಮೇಲೆ ಗಂಗೆಯ ಹೊತ್ತ
ನಮ್ಮ ದೇವ ಮಾದೇವ..
ಹುಲಿಯ ಚರ್ಮವ ತೊಟ್ಟು ಕುಳಿತ
ಮುದ್ದು ಶಿವನು ಮಾದೇವ //೧//

ನಾಗರಾಜನ ಕತ್ತಲಿ ಹೊತ್ತ
ಲಿಂಗ ದೇವ ಮಾದೇವ..
ಬೆನ್ನ ಹಿಂದೆ ಎತ್ತನು ಬಿಟ್ಟು
ತಪಸ್ಸಿಗೆ ಕುಳಿತ ಮಾದೇವ//೨//

ಪಾರ್ವತಿ ಪತಿಯು, ಗಣಪನ ತಂದೆ
ಶಂಭೋ ಶಂಭೋ ಮಾದೇವ...
ವಿಷವನ್ನು ಕುಡಿದು ವಿಷಕಂಠನಾದ
ಹರಹರ ಶಂಭೋ ಮಾದೇವ //೩//

ಭಕ್ತವತ್ಸಲ ಕರುಣಾಸಾಗರ
ಭಕುತರಿಗೊಲಿವ ಮಾದೇವ
ರಾವಣಗೆ ತನ್ನ ಆತ್ಮಲಿಂಗವನ್ನೇ
ದಾನವ ಮಾಡಿದ ಮಾದೇವ //೪//

ಜಠದಾರಿ ಕೈಲಾಸವಾಸಿ
ಪಂಚಲಿಂಗೇಶ್ವರ ಮಾದೇವ...
ನಮ್ಮಯ ಪಾಪವ ಕಳೆದು ತೊಳೆಯೋ
ಭಕುತರ ಬಂಧು ಮಾದೇವ//೫//
@ಪ್ರೇಮ್@

ಶನಿವಾರ, ಫೆಬ್ರವರಿ 24, 2018

134. ಗಝಲ್-ಹೋದ ಮೇಲೆ

ಗಝಲ್

ನಿಮಗೇನುಳಿಯುತ್ತದೆ ಎಲ್ಲಾ ಮುಗಿದು ಹೋದ ಮೇಲೆ?
ನೀ ಹೇಗೆ ಬದುಕುವೆ ಎಲ್ಲಾ ಮುಗಿದು ಹೋದ ಮೇಲೆ?

ಮನುಜ ಪರಿಸರವ ಕಡಿದು ನಾಶಮಾಡಿ,
ಉಸಿರಾಡುವೆ ಹೇಗೆ ಗಾಳಿ ಎಲ್ಲಾ ಮುಗಿದು ಹೋದ ಮೇಲೆ?

ಮರ-ಗಿಡಗಳು ಸತ್ತು ಮಳೆ ಬರದಿರಲು,
ಕುಡಿಯುವೆ ಏನು ನೀರೆಲ್ಲಾ ಮುಗಿದು ಹೋದ ಮೇಲೆ?

ಇಳೆಗೆ ಪ್ಲಾಸ್ಟಿಕ್ ಬಿಸುಟು, ಮಣ್ಣನೆಲ್ಲ ಮಲಿನಗೊಳಿಸಿ,
ಬೆಳೆಯುವೆ ಏನು ಮಣ್ಣಿನ ಸತ್ವವೆಲ್ಲಾ ಮುಗಿದು ಹೋದ ಮೇಲೆ?

ದಿನನಿತ್ಯ ಕಾರು, ಬೈಕುಗಳ ಆಗಾಗ ಓಡಿಸಿ,
ಮತ್ತೆ ಹೇಗೆ ಆಫೀಸಿಗೆ ಹೋಗುವಿರಿ ಇಂಧನವೆಲ್ಲ ಮುಗಿದು ಹೋದ ಮೇಲೆ?

ಕೈ-ಕಾಲ ತುಂಡರಿಸೆ ಗಿಡ-ಮರಕೆಲ್ಲಿ ಶಕ್ತಿ?
ಮಳೆ-ಬೆಳೆ ಇರುವುದೇ ಕಾಡೆಲ್ಲ ಬರಿದಾಗಿ ಮುಗಿದು ಹೋದ ಮೇಲೆ?

ದಿನನಿತ್ಯ ಡಿಜೆ, ವಾಹನ-ಕಾರ್ಖಾನೆಗಳ ಸದ್ದು,
ಏನ ಕೇಳುವಿರಿ ಕಿವಿಯ ಕೇಳುವ ಶಕ್ತಿ ಎಲ್ಲ ಮುಗಿದು ಹೋದ ಮೇಲೆ..

@ಪ್ರೇಮ್@

ಶುಕ್ರವಾರ, ಫೆಬ್ರವರಿ 23, 2018

133. ಕವನ-ಕೋಗಿಲೆ ಹಾಡು

1. ತನ್ಮಯ

ಒಂದು ದಿನ

ಮಾವಿನ ಮರದ ಚಿಗುರೆಲೆ ನಡುವೆ
ಕೋಗಿಲೆ ಕುಳಿತು ಇಲ್ಲದೆ ಗೊಡವೆ,
ಹಾಡುತಲಿತ್ತು ತನ್ನದೆ ರಾಗದಲಿ
ಅದ ಕೇಳುತ ನಾ ತನ್ಮಯನಾದೆನಲಿ..

ಕುಹೂ ಕುಹೂ ಎನುವ
ಮಧುರ ರಾಗದಿ ಮನವ
ತುಂಬಿಹ ನೀ ಬಾನಾಡಿಯೆ ಕೇಳು
ನಮ್ಮಯ ಜನಕೆ ಬುದ್ಧಿಯ ಹೇಳು....

ಮರಗಳ ಕಡಿದು, ಕಾಡನು ಒಡೆದು
ನಾಡನು ಕಟ್ಟಿ, ಮಳೆಯನು ತಡೆದು
ನೀರೇ ಇಲ್ಲವೆಂದು ಹಾಹಾಕರಿಸುವ
ಮಾನವನಿಗೆ ದೇವ ತಾ ಬುದ್ಧಿಯ ಕಲಿಸುವ...

ಮನುಜರೆ ಕೇಳಿ, ಖಗವು ನಾನು
ತಿನ್ನುವೆ,ಹಾಡುವೆ ಜಗದಲಿ ತಾನು,
ಪರಿಸರ ಎಂದೂ ಬರಿದು ಮಾಡೆನು,
ಬದುಕಿ, ಇತರರ ಬದುಕಲು ಬಿಡುವೆನು...

ಕೋಗಿಲೆ ಮಾತ ಕೇಳಿ ನಾಚಿದೆ,
ಮಾನವನಾಗಿ ತಲೆ ತಗ್ಗಿಸಿದೆ!
ಪಶು-ಪಕ್ಷಿಗಳು ನಮಗಿಂತ ಮೇಲು,
ಪರಿಸರ ಹಾಳುಗೆಡಹುವ ಮನುಜ ಎಂದೆಂದೂ ಕೀಳು...
@ಪ್ರೇಮ್@

ಗುರುವಾರ, ಫೆಬ್ರವರಿ 22, 2018

132. ಕವನ- ಇಳೆಯ ಸಂಕಟ

1. ವಿರಹದ ಸಂಕಟ
ಭುವಿ ಬಾನ ಸಂಗಮದಿ
ರವಿಯ ಪಾತ್ರವು ಹಿರಿದು..
ಬಾನು ತಂಪಾಗಲು
ಭುವಿಯ ನೀರು ಇಂಗಬೇಕು...
ರವಿ ಬಿಸಿಲೂಡಲೂ ಬೇಕು..
ಆದರೇಕೋ....
ಭಾನು ಬರುವನು ಉರಿಯ ತರುವನು..
ನೀರಿಂಗಿಸುವನು..
ಆದರೆ....
ಮಾನವನೆಂಬ ಮೃಗದ
ಕರಾಳ ಹಸ್ತ...
ನೀರು ಬರೀ
ನೀರಾಗಿ ಉಳಿದಿಲ್ಲ...
ನೀರು ವಿಷವಾಗಿದೆ...
ಭೂಮಿ ಬಾನಿಗೆ
ವಿರಹ ಶುರುವಾಗಿದೆ...
ಭುವಿ ತಣಿಯಲಾರಳು..
ರವಿಯಿದ್ದರೂ..
ಬಾನು ತಣಿಸಲಾರ...
ನೀರಿಲ್ಲ, ಬೆಳೆಯಿಲ್ಲ..
ಇದ್ದರೂ ವಿಷವಿಹುದಲ್ಲ..
ಆಮ್ಲಮಳೆ!
ಹೊರಲಾರಳು ಇಳೆ
ಮಾನವರ ಕೊಳೆ...
@ಪ್ರೇಮ್@

131. ಕವನ-ಮರೆಯದಿರಿ

ಮುಂಜಾವಿನ ಮುನ್ನಡಿ
ಮರೆಯದಿರಿ

ಮರೆಯದಿರು ಮಗುವೇ
ಮನದಿ ಮತ್ತೆಂದೂ
ಮರವನ್ನು ಬೆಳೆಸಿ
ಮರುಜನುಮ ಮಾಡಿದವರ,
ಮಗ-ಮಗಳೆನ್ನದೆ ಮರುಕಪಡದೆ
ಮುದ್ದು ಮಣಿಯಾಗಿ ಮಾಡಿದವರ,
ಮನಸ್ಸ ತಿದ್ದಿ ತೀಡಿ ಮುತ್ತಿಟ್ಟವರ,
ಮರುಳಾಗದೆ ಮಂಕುಬುದ್ಧಿಗೆ
ಮಗುವ ಮರೆಯದೆ
ಮಾತು ಮೊಗೆದುಕೊಟ್ಟವರ,
ಮಗ್ಗದುಡುಪು ಹಾಕಿ ಮನಸ್ಸಂತೋಷ ಪಟ್ಟವರ,
ಮಧುವ ನೀಡಿ ಮದ್ದುಕೊಟ್ಟವರ,
ಮಳೆಗಾಲದಿ ಮರದಂತೆ ಮನೆಯಾದವರ,
ಮಾನ-ಮರ್ಯಾದೆಯ
ಮಾತು ಕಲಿಸಿ,
ಮಂತ್ರ-ಮಹಿಮೆ ಮರೆಯದೆ ತಿಳಿಸಿ,
ಮನೆಯೆ ಮಹಾಶಾಲೆ
ಮಾಡಿದ ಮಹನೀಯರ!
@ಪ್ರೇಮ್@

130. ಕವನ-ಹನಿಹನಿ ಇಬ್ಬನಿ

*ಹನಿಯಲಿ ನೇಸರನ ಸೊಬಗು*

ನೇಸರನ ಗುಣಗಾನ
ಇಂದು ಹನಿಹನಿಯಲಿ..
ಮೊಬೈಲೊಂದು ಸಾಲದು
ತುಂಬಿಕೊಳ್ಳಲು ಜಗದಲಿ...

ಹೃದಯವೆ ಸಾಲದು
ಭಾವನೆಗಳ ಭರದಲಿ!
ಪದಗಳೇ ಸಾಲವು
ಬರೆಯಲು ಚಾವಡಿಯಲಿ..

ಮನ ತುಂಬಿಹುದು
ಖುಷಿ ತಂದಿಹುದು
ಭಾವ ಬಿರಿದಿಹುದು
ಕಣ್ಣು ನಲಿಯುತಿಹುದು..

ಹನಿ ಸಾಗರವಾಗಿಹುದು
ಪದ ಪರ್ವತವಾಗಿಹುದು
ಭಾವದ ಕಟ್ಟೆಯೊಡೆದಿಹುದು
ಶಬ್ದಗಳ ಮೂಟೆ ಕಟ್ಟಿಹುದು...

ನೇಸರ ನಾಚಿಕೆಯಿಂದಲಿ
ಸಮುದ್ರದೊಳಗಂದದಲಿ
ಮುಳುಗಿ ಹೋಗುವುದರಲಿ
ಕವನದಂತ್ಯ ಹನಿಯಲಿ...
@ಪ್ರೇಮ್@

129. ಗಝಲ್-ಹಸಿವು

ಗಝಲ್- ಹಸಿವು

ಹಸಿವು ನಮಗೆ ತಾಳಲಾಗದು ಊಟ ಕೊಡಮ್ಮಾ
ಬಹಳವೇ ಬಳಲಿಹೆವು ಊಟ ಕೊಡಮ್ಮಾ...

ನಿನ್ನ ನೋಡದೆ ಮನವು ಬಾಡಿ ಹೋಗಿಹುದು
ಹೊಟ್ಟೆ ಖಾಲಿಯಾಗಿಹುದು ಊಟ ಕೊಡಮ್ಮಾ..

ನಿನ್ನ ಕಾಣದೆ ಹೃದಯ ಅರಳದು
ಎಲ್ಲಿದ್ದೆ ನೀ ಇಷ್ಟ್ಹೊತ್ತು ಊಟ ಕೊಡಮ್ಮಾ..

ಹಸಿವೆಯ ತೀವ್ರತೆ ಹಸಿದವಗೆ ಗೊತ್ತು,
ತೀವ್ರತೆ ಕುಗ್ಗಿಸೆ ಊಟ ಕೊಡಮ್ಮ..

ಅಮ್ಮನ ಬಿಟ್ಟು ಬಾಳುವ ಪರಿ ಅನಾಥಗೆ ಗೊತ್ತು
ನಿನ್ನಯ ಮರಿಗಳಿಗೆ ಊಟ ಕೊಡಮ್ಮ..

ಅಮ್ಮನ ಪ್ರೀತಿಯ ಆಳ ಅರಿತವರಿಲ್ಲ
ಪ್ರೀತಿಯ ತುತ್ತಿನ ಊಟ ಕೊಡಮ್ಮ...

ಕಾಳನು ಮೀನನು ಹಿಡಿಯಲು ಕಷ್ಟ
ಕಷ್ಟ ಪಟ್ಟು ಸಂಪಾದಿಸಿದ ಕೂಳ ಊಟ ಕೊಡಮ್ಮ..

ಬೆವರನು ಸುರಿಸಿ,ದುಡಿವುದ ಕಲಿತು
ದುಡಿದು ಗಳಿಸಿದ ಊಟ ಕೊಡಮ್ಮ..

ಮಕ್ಕಳ ಕರೆಯನ್ನು ಆಲಿಸ ನೀನು
ಮಕ್ಕಳಿಗಾಗಿ ತಂದ ಊಟ ಕೊಡಮ್ಮ....
@ಪ್ರೇಮ್@

ಬುಧವಾರ, ಫೆಬ್ರವರಿ 21, 2018

128. ಕವನ-ನೇಸರ

1. ನೇಸರ

ಬೆಳಗಿನ ಬಾನಲ್ಲಿ ನೇಸರ ಬಂದ
ಬೆಳಕನು ಭೂಮಿಗೆ ಹೊತ್ತು ತಂದ//

ನಭದಲ್ಲಿ ಪಕ್ಷಿಗೆ ಹಾರಾಡೆಂದ,
ನವೀನ ದಿನದ ಆರಂಭ ತಂದ,
ನಮಗೆಲ್ಲ ಹೊಸತನದ ಸಂದೇಶ ತಂದ,
'ನಮಗಾಗಿ ಹೊಸದಿನ ತಂದೆ' ಎಂದ//೧//

ಬಾನಲ್ಲಿ ಮೇಲಕ್ಕೆ ಏರುತ್ತಾ ಬಂದ,
'ತಾನಿಲ್ಲಿ ರಾಜ' ಎನ್ನುತ್ತಾ ಮೆರೆದ,
'ನನ್ನಂತೆ ನೀವಾಗಿ' ಎಂಬ ಸಂದೇಶ ತಂದ,
'ತಾವಾಗಿ ತನ್ನ ಕೆಲಸ ಮಾಡೋಣ' ಎಂದ//೨//

ನಮ್ಮಯ ಜೀವನ ಸುಡುಬಿಸಿಲೆಂದ
ಸಂಜೆಗೆ ತಂಪು-ಖುಷಿಯಾಗಿರೆಂದ,
ಕೊನೆಯಲ್ಲಿ ಬಗೆಬಗೆ ಬಣ್ಣವ ತಂದ
ಅರಿತು ಬಾಳಿದರೆ ಜೀವನ ಸಾರ್ಥಕವೆಂದ...//೩//
@ಪ್ರೇಮ್@

ಮಂಗಳವಾರ, ಫೆಬ್ರವರಿ 20, 2018

127. ಕವನ-ಅಮ್ಮಾ


*ಹೇಗೆ ಹೊಗಳಲಿ ನಿನ್ನ?*

ಅಮ್ಮ ನಿನ್ನ ಮುದ್ದು ಅಂದ!
ನಿನ್ನ ಒಡನೆ ನಾನು ಕಂದ!
ನಿನ್ನ ಸಿಹಿಮುತ್ತು ಎನಿತು ಚಂದ
ಎತ್ತಿಕೊಳಲು ನೀ ಏನೋ ಆನಂದ//

ಕೈ ತುತ್ತು ನಾ ಬೇಕು ಎನುವೆ,
ತಾಳ್ಮೆ ನೀನು ಕಲಿಸಿ ಕೊಡುವೆ,
ನಮನ ನನ್ನ ಮೊದಲ ಗುರುವೆ,
ನನ್ನೆ ನಾನು ನಿನಗೆ ಕೊಡುವೆ! //

ನಿನ್ನ ಪಾಠದಾಟ ಚೆನ್ನ,
ಹೆತ್ತು-ಹೊತ್ತು ಬೆಳೆನಿದೆನ್ನ!
ಬುದ್ಧಿ ಕಲಿಸಿ ಸಲಹಿದೆನ್ನ!
ಹೇಗೆ ತೀರಿಸಲಿ ಋಣವ ನಿನ್ನ? //

ನಿನ್ನ ಎದುರು ಎಲ್ಲ ಶೂನ್ಯ!
ಬದುಕಿನಲ್ಲಿ ನೀನೆ ಮಾನ್ಯ,
ನಿನ್ನಿಂದಲೆ ನಾನು ಜನ್ಯ
ನಿನ್ನ ಪಡೆದ ನಾನೇ ಧನ್ಯ!//
@ಪ್ರೇಮ್@