1.ಅಮ್ಮ
ನೀನೆಂದರೆ ಎಂದೂ ಸಡಗರ
ನಿನ್ನ ಸ್ಪರ್ಶ ಮನಕೆ ಆಗರ
ನಿನ್ನ ನುಡಿಯೇ ನಮಗೆ ವರ
ನಿನ್ನಡಿಯಲಿ ನಾವು ಸ್ಥಿರ!
ಅಮ್ಮ ನಿನ್ನಡಿಗೆಯೆಮಗೆ ಹಬ್ಬದೂಟ
ಸುಮ್ಮನಿರಿಸುವುದು ನಿನ್ನ ಕಣ್ಣನೋಟ
ಕಲಿಸುವೆ ನಮಗೆ ವಿನಯದಾಟ
ನೀನಲ್ಲವೇ ಕಲಿಸಿದ್ದು ಮೊದಲ ಪಾಠ!
ನಿನ್ನ ಮನೆಗೆ ಬರುವುದೇ ನಮಗೆ ಹಬ್ಬ
ನೀನು ಮನೆಯಲಿರುವುದೇ ಪರಮ ಹಬ್ಬ
ನಿನ್ನ ಧ್ವನಿಯ ಕೇಳಲು ಕಿವಿಗೆ ಹಬ್ಬ
ನಿನ್ನ ಮುಖವ ಕಾಣಲು ಕಣ್ಣಿಗೆ ಹಬ್ಬ!
ನೀನೆ ನನ್ನ ಕಣ್ಣಿನ ಪ್ರತಿಬಿಂಬ
ನನ್ನ ಇಹಕೆ ನೀನೆ ಬಾಳಿನ ಕಂಬ
ನಿನ್ನ ಸನಿಹವಿರೆ ನೀನೆ ಆಧಾರಸ್ಥಂಭ
ನಿನ್ನಿಂದಲೆ ಪ್ರೀತಿಯ ಪ್ರಾರಂಭ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ