ಗುರುವಾರ, ಫೆಬ್ರವರಿ 8, 2018

110. ಕವನ- ನಮ್ಮ ಪರಿಚಯ

1. ನಮ್ಮ ಪರಿಚಯ(ನದಿ)

ನೇತ್ರಾವತಿ ಎಂಬ ಹೆಸರಿನಿಂದ
ನಯನವಾಗಿಹ ನದಿ ನಾನು ಕರಾವಳಿಗೆ
ಧರ್ಮಸ್ಥಳದಿ ಕೊಳೆ ತೊಳೆಯುವೆ
ಕೆಲ ಜನ ಹೇಳುತಿಹರು "ನಿನ್ನ ತಿರುಗಿಸುವೆ"..

ಕುಮಾರಧಾರಾ ಹೆಸರಿನ ನದಿ ನಾನು
ತುಳು ನಾಡಿನ ಕುಮಾರ ನಾನು,
ಸುಬ್ರಹ್ಮಣ್ಯದಿ ಹರಿದು ಉಪ್ಪಿನಂಗಡಿ ಸೇರಿ,
ನೀರುಣಿಸುವೆ ಜನ-ದನ-ಬೆಳೆಗೆ..

ಪರಶುರಾಮನ ಕೊಡಲಿಯಿಂದ
ಹುಟ್ಟಿದ ಕರಾವಳಿ ನಾಡಿನಲಿ
ಹರಿವೆ ಫಲ್ಗುಣಿ ಎಂಬ ಹೆಸರಿನಲಿ
ಕಾಣಿರಿ ನನ್ನನು ತೆಂಗು-ಪೈರು -ಪಚ್ಚೆಯ ಬೆಳೆಗಳಲಿ.....

ನನ್ನ ಹೆಸರು 'ಪಯಸ್ವಿನಿ'
ನಾನು ಸುಳ್ಯ ಜನರ ಸಂಜೀವಿನಿ..
ಇಲ್ಲಿ ಹರಿದು ಕೇರಳ ಸೇರುವೆ
ಹಲವು ಹೆಸರನು ಹೊಂದಿರುವೆ..

ನದಿಗಳು ನಾವು,ಕೆಡಿಸದಿರಿ ನೀವು
ಕೊಳವೆ ಬಾವಿ ಕೊರೆಸಿ ಬರಿದಾಗಿಸದಿರಿ,
ಚರಂಡಿಯ ನೀರನು ನಮಗೆ ಹರಿಸದಿರಿ
ನೀವು ಬಾಳುತಲಿ ನಮಗೂ ಬಾಳಲು ಬಿಡಿರಿ....
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ