ಗುರುವಾರ, ಫೆಬ್ರವರಿ 15, 2018

118. ಕವನ- ಅಣ್ಣನ ನೆನಪು

1. ನೆನಪು

ನೆನಪಿನಂಗಳದ ಕದ ತಟ್ಟಿದಾಗ
ನೀ ಬರುವೆ ಆಗಾಗ..
ವರುಷಕೊಮ್ಮೆ ದೇವಾಲಯದಿ
ರಕ್ಷಾಬಂಧನ ಕಟ್ಟುವ ಕ್ಷಣದಿ..

ಅಪಘಾತವಾದಾಗ ನೀ ನನ್ನ
ನೆನಪಿಸುವ ಪರಿ ಚೆನ್ನ..
ಹೃದಯ ಕೂಗಿದಾಗ ನಿನ್ನ
ಬರುವ ಒಲವ ಕರೆ ನನ್ನ..

ಬದುಕಲಿ ಏನಿರಲಿ ಏನಿಲ್ಲದಿರಲಿ
ನಿನ್ನಂಥ ಸ್ವಚ್ಛ ಮನದ ಸೋದರನಿರಲಿ..
ರಕ್ತ ಸಂಬಂಧಕ್ಕಿಂತ ಹೆಚ್ಚಾದ
ನಮ್ಮ ಬಂಧಕೆ ದೇವ ಪೆಚ್ಚಾದ..

ನೀನಲ್ಲವೆ ನಾನು, ಬಾಳು ಸಿಹಿ ಜೇನು
ಅಮರ ನಮ್ಮ ಪ್ರೀತಿ ಕಮಾನು..
ರಂಗಿನ ಬದುಕಲಿ ಹಂಗಿಲ್ಲದ ದಿನ
ನಿನ್ನ ಕಾಣದೆ ಕರಗಿದೆ ಮನ..

ಮುಂದಿನ ಜನುಮಕೂ ನೀ ಬೇಕು
ಅಣ್ಣನಾಗಲ್ಲದಿರೆ ತಂಗಿಯಾಗಿ ಸಾಕು
ಮುದ್ದಾಗಿ ನಿನ್ನೊಡನಿದ್ದು ನಿನ್ನ ಸಾಕಬೇಕು
ಋಣವ ಬಿಡದೆ ತೀರಿಸಬೇಕು...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ