1. ಕಟ್ಟೆಮಾತು (ಕವನ)
ಕಟ್ಟೆಯಲ್ಲಿ ಚಿಟ್ಟೆಮಾತು
ಆಡುವಣ್ಣ ಬನ್ನಿರಿ,
ತರತರದ ತಿಂಡಿಯಿಹುದು
ತಟ್ಟೆಯನ್ನೂ ತನ್ನಿರಿ..
ಅನುಭವದ ಕಟ್ಟೆಯಿಂದ
ಎಲ್ಲ ಹಂಚಿಕೊಳ್ಳಿರಿ,
ಪುಟ್ಟ ಪುಟ್ಟ ಹಾಸ್ಯಗಳ
ಹೇಳಿ ನಕ್ಕು ನಲಿಯಿರಿ..
ಕಷ್ಟ-ಸುಖ ಎಲ್ಲರಿಗಿದೆ
ಹಂಚಿಕೊಂಡು ಬಾಳುವ,
ನಷ್ಟ ಮಾಡಿಕೊಳ್ಳದೆ
ಪ್ರೀತಿಯಿಂದ ಬಾಳುವ..
ಬದುಕಿನಲ್ಲಿ ಇಳಿವಯಸ್ಸು
ಚಿಂತೆ-ಗಿಂತೆ ಮಾಡದೆ,
ದುಡುಕಿನಲ್ಲಿ ದುಸ್ಸಾಹಸ
ಎಂದೂ ನಮಗೆ ಇಲ್ಲದೆ,
ಒಳ್ಳೆ ಮನದಿ ಕಾರ್ಯಮಾಡಿ
ಒಳ್ಳೆತನವ ಹಂಚುವ,
ಒಳ್ಳೆ ಕೆಲಸ ಮಾಡಿರೆಂಬ
ಗಾದೆ ಮಾತು ಹೇಳುವ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ