ತಾಯುಸಿರು
ನಿನ್ನ ಬಿಗಿದಪ್ಪುಗೆ
ಎನಗೆ ಉಸಿರಾಗಿದೆ..
ನಿನ್ನ ಬಿಸಿಯುಸಿರು
ನನ್ನೆದೆ ಹಸಿರಾಗಿದೆ...
ನಿನ್ನ ಪ್ರೇಮದ ಮಾತು
ನನ್ನ ಅರಿವಾಗಿದೆ..
ನಿನ್ನ ಪದ ಪುಂಜ
ನನಗೆ ಗುರುವಾಗಿದೆ..
ನೀನೆನಗಿತ್ತ ವರ
ಸತ್ಯ ಪ್ರೀತಿ ನಿತ್ಯ
ನಿನ್ನೆದೆ ಹಾಲು
ಅಮೃತದ ಪಥ್ಯ...
ಅಮ್ಮ ನಿನ್ನಾಸರೆ
ನನ್ನ ಬದುಕ ಸೆಲೆ
ನಿನ್ನ ತ್ಯಾಗದ ಕಲೆ
ತಂದಿದೆ ನಿನಗೆ ಬೆಲೆ....
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ